Siddaramaiah: ರಾಗಿ ಖರೀದಿ ಮೇಲೆ ಹೇರಿರುವ ಮಿತಿ ತೆರವುಗೊಳಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ

| Updated By: shivaprasad.hs

Updated on: Feb 20, 2022 | 4:34 PM

PM Narendra Modi: ಬೆಂಬಲ ಬೆಲೆ ಅಡಿಯಲ್ಲಿ ರಾಗಿ ಬೆಳೆ ಖರೀದಿಗೆ ಮಿತಿ ಹೇರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಿತಿ ತೆರವಿಗೆ ಒತ್ತಾಯಿಸಿದ್ದಾರೆ.

Siddaramaiah: ರಾಗಿ ಖರೀದಿ ಮೇಲೆ ಹೇರಿರುವ ಮಿತಿ ತೆರವುಗೊಳಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಬೆಂಬಲ ಬೆಲೆ ಅಡಿಯಲ್ಲಿ ರಾಗಿ ಬೆಳೆ ಖರೀದಿಗೆ ಮಿತಿ ಹೇರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಿತಿ ತೆರವಿಗೆ ಒತ್ತಾಯಿಸಿದ್ದಾರೆ. ರಾಗಿ ಬೆಳೆ ಖರೀದಿಗೆ ವಿಧಿಸಿರುವ ನಿರ್ಬಂಧ ತೆರವಿಗೆ ಒತ್ತಾಯಿಸಿರುವ ಅವರು, ಪತ್ರದಲ್ಲಿ ಹಲವು ವಿಚಾರಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ. ರೈತರ ಎಲ್ಲಾ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. 2.10 ಲಕ್ಷ ಟನ್​ ಖರೀದಿಸಲು ವಿಧಿಸಿರುವ ಮಿತಿ ಹಿಂಪಡೆಯಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನ ಪುನಾರಂಭಿಸಬೇಕು ಮತ್ತು ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ಬೆಲೆ ಹೆಚ್ಚಿಸುವಂತೆ ಸಿದ್ದರಾಮಯ್ಯ (Siddaramaiah) ಪತ್ರದಲ್ಲಿ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿಗೆ ಬರೆದಿರುವ ಪತ್ರವನ್ನು ಟ್ವೀಟ್ ಮೂಲಕ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

‘ಅವರ ಧರ್ಮ ಅವರಿಗೆ, ನಮ್ಮ ಧರ್ಮ ನಮಗೆ’: ಹಿಜಾಬ್ ವಿವಾದದ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿಜಾಬ್ ವಿವಾದದ ಕುರಿತಂತೆ ಮಾತನಾಡಿದ್ದಾರೆ. ‘‘ಸಿಂಧೂರ, ಹಿಜಾಬ್ ಹಾಕಿಕೊಳ್ಳುವುದರಿಂದ ಏನು ತೊಂದರೆ? ಹಲವು ವರ್ಷಗಳಿಂದ ಇರುವ ಸಂಪ್ರದಾಯಕ್ಕೆ ವಿರೋಧ ಸರಿಯಲ್ಲ. ಸಿಂಧೂರಕ್ಕೂ ವಿರೋಧ ಸರಿಯಲ್ಲ, ಹಿಜಾಬಿಗೂ ವಿರೋಧ ಸರಿಯಲ್ಲ. ಹಿಜಾಬ್ ಹಲವು ವರ್ಷಗಳಿಂದ ಹಾಕಿಕೊಂಡು ಬರುತ್ತಿದ್ದಾರೆ. ಅದನ್ನು ಅವರು ಮುಂದುವರೆಸಲಿ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಮೊಟುಕುಗೊಳಿಸಲು ಹಿಜಾಬ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ರಾಜಕಾರಣಕ್ಕಾಗಿ ವಿರೋಧ ಮಾಡ್ತಿದ್ದಾರೆ. ಮನುಷ್ಯತ್ವ ಮುಖ್ಯ, ಅವರ ಧರ್ಮ ಅವರಿಗೆ, ನಮ್ಮ ಧರ್ಮ ನಮಗೆ’’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ವಿರೋಧ ಪಕ್ಷದ ನೈತಿಕತೆ ಕಳೆದುಕೊಂಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಿಎಂ ಬಸವರಾಜ ಬೊಮ್ಮಾಯಿ ಏನು ವೇದಾಂತಿನಾ? ಅವರಿಗಿಂತಾ ಹೆಚ್ಚು ಜವಾಬ್ದಾರಿ ನಮಗೆ ಇದೆ. ಸಿಎಂ ಬೊಮ್ಮಾಯಿ ಹೇಳಿದ್ದೇ ವೇದವಾಕ್ಯವಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ರಾಷ್ಟ್ರಭಕ್ತಿಯಾ? ಅಂಥವರು ಮಂತ್ರಿ ಮಂಡಲದಲ್ಲಿ ಇರಬೇಕಾ ಎಂದು ಮರುಪ್ರಶ್ನೆ ಮಾಡಿದ್ದಾರೆ. ಬಿಜೆಪಿಯವರು ಎಂದೂ ರಾಷ್ಟ್ರಧ್ವಜದಿಂದ ಪ್ರೇರಣೆ ಪಡೆದವರಲ್ಲ. ಬಿಜೆಪಿಯವರ ಮನಸ್ಥಿತಿ ರಾಷ್ಟ್ರಧ್ವಜಕ್ಕೆ ವಿರೋಧವಾದದ್ದು ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಕೆ.ಎಸ್​.ಈಶ್ವರಪ್ಪ ರಾಜೀನಾಮೆಗೆ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಭಂಡ ಬಿದ್ದವರಿಗೆ ಏನೂ ಮಾಡಲು ಆಗಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

‘ಫೆ.25ರಂದು ಹೈಕಮಾಂಡ್ ಭೇಟಿಗೆ ಆಹ್ವಾನ ನೀಡಿದ್ದಾರೆ’: ಸಿದ್ದರಾಮಯ್ಯ

ಫೆ.25ರಂದು ನನಗೆ ಹಾಗೂ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಹಿರಿಯ ನಾಯಕರಿಗೆ ಭೇಟಿಗೆ ಹೈಕಮಾಂಡ್​​ ಆಹ್ವಾನ ನೀಡಿದೆ​ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. 2023ರ ಚುನಾವಣೆ ಹಿನ್ನೆಲೆ ಚರ್ಚೆ ಮಾಡಲು ಕರೆದಿದ್ದಾರೆ. ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫೆ.27ರಿಂದ ಮೇಕೆದಾಟು 2.0 ಪಾದಯಾತ್ರೆ ಹಿನ್ನೆಲೆ; ವಿಡಿಯೊ ಕಾನ್ಫರೆನ್ಸ್ ಸಭೆ ನಡೆಸಿದ ಡಿ.ಕೆ.ಶಿವಕುಮಾರ್

ಫೆ.27ರಿಂದ ಮೇಕೆದಾಟು 2.0 ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸೌಧದಿಂದಲೇ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ನ ಮುಂಚೂಣಿ ಘಟಕಗಳು, ಪದಾಧಿಕಾರಿಗಳು, ಬೆಂಗಳೂರು ನಗರದ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ, ಪಾದಯಾತ್ರೆ ಸಿದ್ಧತೆ ಬಗ್ಗೆ ಡಿಕೆಶಿ ಚರ್ಚೆ ನಡೆಸಿದ್ದಾರೆ. ಪಾದಯಾತ್ರೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮಂಗಳವಾರ ಮಂಡ್ಯ ಜಿಲ್ಲಾ ಪ್ರವಾಸ ನಡೆಸಲಿದ್ದಾರೆ. ಮದ್ದೂರು, ನಾಗಮಂಗಲ, ಪಾಂಡವಪುರದಲ್ಲಿ ಪ್ರವಾಸ ನಡೆಸಿ, ಪಾದಯಾತ್ರೆ ಸಂಘಟನೆ, ಸದಸ್ಯತ್ವ ನೋಂದಣಿ ಕುರಿತು ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ:

ಬಿಇ ಪದವಿ ಪಡೆದ 114 ಮಂದಿ ಪೊಲೀಸ್ ಇಲಾಖೆಗೆ ಸೇರ್ಪಡೆ; ಸರ್ಕಾರಿ ಹುದ್ದೆಯತ್ತ ಮುಖ ಮಾಡಿದ ಯುವಕರು

Zameer Ahmed: ಶಾಸಕ ಜಮೀರ್ ಅಹ್ಮದ್ ವಿರುದ್ಧ ಭೂಕಬಳಿಕೆ ಆರೋಪ; ಎಫ್​ಐಆರ್​​ ದಾಖಲು

Published On - 4:32 pm, Sun, 20 February 22