ಬಿಇ ಪದವಿ ಪಡೆದ 114 ಮಂದಿ ಪೊಲೀಸ್ ಇಲಾಖೆಗೆ ಸೇರ್ಪಡೆ; ಸರ್ಕಾರಿ ಹುದ್ದೆಯತ್ತ ಮುಖ ಮಾಡಿದ ಯುವಕರು

ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಇಂದು(ಫೆಬ್ರವರಿ 20) 222 ಜನರ ಹತ್ತನೇ ತಂಡದ ಪಿಎಸ್ಐ(ಸಿವಿಲ್), 61 ಜನರ ಆರನೇ ತಂಡದ ಆರ್​ಎಸ್​ಐ ಸೇರಿ ಒಟ್ಟು 288 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.

ಬಿಇ ಪದವಿ ಪಡೆದ 114 ಮಂದಿ ಪೊಲೀಸ್ ಇಲಾಖೆಗೆ ಸೇರ್ಪಡೆ; ಸರ್ಕಾರಿ ಹುದ್ದೆಯತ್ತ ಮುಖ ಮಾಡಿದ ಯುವಕರು
ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
Follow us
TV9 Web
| Updated By: preethi shettigar

Updated on:Feb 20, 2022 | 4:03 PM

ಕಲಬುರಗಿ: ಮೊದಲು ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ ಪಡೆದ ಅನೇಕರು ಸರ್ಕಾರಿ ಕೆಲಸ ಸಿಕ್ಕರು ಕೂಡಾ ಲಕ್ಷಾಂತರ ರೂಪಾಯಿ ಸಂಬಳ ನೀಡುವ ಖಾಸಗಿ ಕಂಪನಿಗಳಿಗೆ ಸೇರುತ್ತಿದ್ದರು. ಅದರಲ್ಲೂ ಪೊಲೀಸ್ ಇಲಾಖೆಗೆ(Police department) ಹೆಚ್ಚಿನ ಜನರು ಸೇರಲು ಇಷ್ಟಪಡುತ್ತಿರಲಿಲ್ಲ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ವೃತ್ತಿಪರ ಶಿಕ್ಷಣ ಪಡೆದ ನೂರಾರು ಜನರು, ಖಾಸಗಿ ಕೆಲಸ ಬಿಟ್ಟು ಸರ್ಕಾರಿ ಕೆಲಸದತ್ತ(Government job) ಮುಖ ಮಾಡುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಗೆ ಸೇರುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಕಲಬುರಗಿ ನಗರದ ಹೊರವಲಯದಲ್ಲಿನ ನಾಗನಹಳ್ಳಿ ಪೊಲೀಸ್ ತರಬೇತಿ (Training) ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದ 288 ಪೊಲೀಸ್ ಸಿಬ್ಬಂದಿ ಪೈಕಿ, 114 ಜನ ಬಿಇ ಪದವಿ ಪಡೆದವರಾಗಿದ್ದಾರೆ.

ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಇಂದು(ಫೆಬ್ರವರಿ 20) 222 ಜನರ ಹತ್ತನೇ ತಂಡದ ಪಿಎಸ್ಐ(ಸಿವಿಲ್), 61 ಜನರ ಆರನೇ ತಂಡದ ಆರ್​ಎಸ್​ಐ ಸೇರಿ ಒಟ್ಟು 288 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು. ನಿರ್ಗಮನ ಪಥ ಸಂಚಲನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಅಚ್ಚರಿಯಾಗಿದ್ದರು. ಏಕೆಂದರೆ 288 ಹುದ್ದೆಗಳಲ್ಲಿ, 114 ಹುದ್ದೆ ಪಡೆದವರು ಬಿಇ ಪದವಿ ಪಡೆದವರಾಗಿದ್ದಾರೆ.  ಇಂತಹದೊಂದು ಮಾಹಿತಿಯನ್ನು ಸ್ವತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.  ಇನ್ನು 56 ಜನ ಬಿಎ ಪದವಿ ಪಡೆದವರಿದ್ದರೆ, 20 ಜನ ಬಿಕಾಂ ಪದವೀಧರರು, 16 ಜನ ಎಂ.ಎ ಪದವೀಧರರು, 12 ಜನ ಎಂಎಸ್ಸಿ ಪದವೀಧರರು, 6 ಜನ ಎಂ.ಟೆಕ್, 5 ಜನ ಎಂಬಿಎ, 3 ಬಿಸಿಎ ಪದವೀಧರರು, ಸೇರಿದಂತೆ ಬಹುತೇಕರು ವೃತ್ತಿಪರ ಕೋರ್ಸ್​ನಲ್ಲಿ ಅಧ್ಯಯನ ಮಾಡಿದವರೇ ಇರುವುದರ ಬಗ್ಗೆ ಪ್ರಸ್ತಾಪಿಸಿ ಅಚ್ಚರಿ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯಲ್ಲಿ ಪಿಎಸ್​ಐ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆಯನ್ನು ಮಾತ್ರ ನಿಗದಿ ಮಾಡಲಾಗಿದೆ. ಹೀಗಾಗಿ ಪದವಿ ಪಡೆದ ಯಾರು ಬೇಕಾದre ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು ಹುದ್ದೆ ಪಡೆಯಲು ಅವಕಾಶವಿದೆ. ಆದರೆ ಇತ್ತೀಚಿನ ದಿನದಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಬಿಇ, ಬಿಟೆಕ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳನ್ನು ಕಲಿತು, ಕಂಪ್ಯೂಟರ್, ಲ್ಯಾಪ್​ಟಾಪ್ ಮುಂದೆ ಕುಳಿತು ಕಿಲಿಮಣೆ ಮೇಲೆ ಕೈಯಾಡಿಸುತ್ತಿದ್ದವರು, ಇದೀಗ ತಮ್ಮ ವೃತ್ತಿಯಲ್ಲಿ ಮುಂದುವರಿಯುವುದನ್ನು ಬಿಟ್ಟು ಸರ್ಕಾರಿ ಕೆಲಸದತ್ತ ಹೆಚ್ಚಿನವರು ಮುಖ ಮಾಡುತ್ತಿದ್ದಾರೆ. ಕಿಲಿ ಮಣೆ ಬಿಟ್ಟು ಅನೇಕರು ಲಾಠಿ ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ಬಹುತೇಕ ಪೊಲೀಸ್ ಹುದ್ದೆಯಲ್ಲಿರುವವರು ಇದೀಗ ವೃತ್ತಿಪರ ಕೋರ್ಸ್​ಗಳನ್ನು ಅಧ್ಯಯನ ಮಾಡಿದವರೇ ಅನ್ನೋದು ವಿಶೇಷ.

ಸರ್ಕಾರಿ ಕೆಲಸದತ್ತ ಹೆಚ್ಚಿನ ಒಲವು

ಈ ಹಿಂದೆ ಅನೇಕರು ಸರ್ಕಾರಿ ಕೆಲಸಕ್ಕೆ ಸೇರಲು ಹಿಂದು ಮುಂದು ನೋಡುತ್ತಿದ್ದರು. ಪ್ರತಿಷ್ಠಿತ ಕಂಪನಿಗಳಿಗೆ ಸೇರಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಅದರಲ್ಲೂ ಕೊರೊನಾ ಬಂದ ಮೇಲೆ ಅನೇಕ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡುವ ಕೆಲಸ ಮಾಡುತ್ತಿವೆ. ಹೀಗಾಗಿ ಖಾಸಗಿ ಕೆಲಸ ಸುರಕ್ಷಿತ ಇಲ್ಲಾ. ಜವಾನನಾದರು ಪರವಾಗಿಲ್ಲಾ, ಸರ್ಕಾರಿ ಕೆಲಸಬೇಕು ಎನ್ನುವ ಮನಸ್ಥಿತಿ ಹೆಚ್ಚಿನ ಯುವಕ, ಯುವತಿಯರಲ್ಲಿ ಮೂಡುತ್ತಿದೆ. ಹೀಗಾಗಿ ಅನೇಕ ವೃತ್ತಿಪರ ಕೋರ್ಸ್​ನಲ್ಲಿ ಉನ್ನತ ಶಿಕ್ಷಣ ಪಡೆದ ಅನೇಕರು ಕೂಡಾ ಇದೀಗ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ.

police

ಪೊಲೀಸ್ ತರಬೇತಿ

ಸರ್ಕಾರಿ ಕೆಲಸಕ್ಕೆ ಸೇರಿದರೆ ಹತ್ತಾರು ಪ್ರಯೋಜನಗಳು

ಇದೀಗ ಪೊಲೀಸ್ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಯಲ್ಲಿ ಕೆಲಸಕ್ಕೆ ಸೇರುವ ನೌಕರರಿಗೆ ಉತ್ತಮ ಸಂಬಳದ ಜೊತೆಗೆ ಅನೇಕ ಸೌಲಭ್ಯಗಳು ಕೂಡಾ ಸಿಗುತ್ತಿವೆ. ಜೊತೆಗೆ ಸರ್ಕಾರಿ ಕೆಲಸದಲ್ಲಿದ್ದವರಿಗೆ ಸಿಗುವ ಗೌರವ ಕೂಡಾ ಹೆಚ್ಚಾಗುತ್ತಿದೆ. ಸರ್ಕಾರಿ ಕೆಲಸವಿದ್ದರೆ, ನಿವೃತ್ತಿಯಾಗುವವರೆಗೆ ಕೆಲಸ ಸುರಕ್ಷಿತವಾಗಿರಲಿದೆ. ಹೀಗಾಗಿ ಹೆಚ್ಚಿನ ಯುವಕ-ಯುವತಿಯರು, ಲಕ್ಷ ಲಕ್ಷ ಸಂಬಳ ನೀಡುವ ಸಾಫ್ಟ್​ವೇರ್ ಕಂಪನಿಗಳು, ಖಾಸಗಿ ಕಂಪನಿಗಳತ್ತ ಮುಖ ಮಾಡದೇ, ಸರ್ಕಾರಿ ಕೆಲಸಕ್ಕೆ ಸೇರುತ್ತಿದ್ದಾರೆ.

ನಾನು ಬಿಇ, ಎಂಟೆಕ್ ಪದವಿಯನ್ನು ಪಡೆದಿದ್ದೇನೆ. ಬೆಂಗಳೂರಿನಲ್ಲಿರುವ ಸಾಫ್ಟ್​ವೇರ್ ಡೆವಲಮೆಂಟ್ ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇನೆ. ಆದರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಬೇಕು ಎನ್ನುವ ಉದ್ದೇಶದಿಂದ ಪರೀಕ್ಷೆ ಬರೆದು, ಕೆಲಸ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಪ್ರೊಬೇಷನರಿ ಪಿಎಸ್​ಐ ವಶಿಷ್ಟ ಹೇಳಿದ್ದಾರೆ.

ಈ ಮೊದಲು ಪೊಲೀಸ್ ಇಲಾಖೆಯಲ್ಲಿದ್ದವರಿಗೆ ಹೆಣ್ಣು ಕೂಡಾ ಯಾರು ಕೊಡ್ತಿರಲಿಲ್ಲಾ. ಆದ್ರೆ ಇದೀಗ ಕಾಲ ಬದಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೂಡಾ ಉತ್ತಮ ಸಂಬಳದ ಜೊತೆಗೆ ಸೌಲಭ್ಯಗಳು ಸಿಗುತ್ತಿವೆ. ಜೊತೆಗೆ ಸಮಾಜದಲ್ಲಿ ಗೌರವ ಕೂಡಾ ಇದೆ. ಹೀಗಾಗಿ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಪಡೆದವರು, ಇಲಾಖೆಗೆ ಸೇರುತ್ತಿದ್ದಾರೆ. ಅವರು ಕಲಿತ ವಿದ್ಯೆಯನ್ನು ತಮ್ಮ ವೃತ್ತಿಯಲ್ಲಿ ಬಳಸಿಕೊಂಡು ಅಪರಾಧಗಳ ಪತ್ತೆಗೆ, ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ: Bengaluru City Police hiring: ಬೆಂಗಳೂರು ಪೊಲೀಸ್​ ಸೈಬರ್ ಕ್ರೈಂ ಲೋಕದಲ್ಲಿ ಭಾರೀ ಉದ್ಯೋಗಾವಕಾಶಗಳು!

Karnataka Police: ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ; ವಿವರ ಇಲ್ಲಿದೆ

Published On - 4:02 pm, Sun, 20 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ