Bengaluru City Police hiring: ಬೆಂಗಳೂರು ಪೊಲೀಸ್​ ಸೈಬರ್ ಕ್ರೈಂ ಲೋಕದಲ್ಲಿ ಭಾರೀ ಉದ್ಯೋಗಾವಕಾಶಗಳು!

ಆಯ್ಕೆಯಾದ ಅಭ್ಯರ್ಥಿಗಳಿಗೆ Cyber Security Analyst ಗೆ ಮಾಸಿಕ 75,000 ರೂಪಾಯಿ ಸಂಬಳ ಮತ್ತು Digital Forensic Analyst ಹುದ್ದೆಗೆ ಮಾಸಿಕ 75,000 ರೂಪಾಯಿ ಸಂಬಳ ನಿಗದಿಪಡಿಲಾಗಿದೆ. ತಡವೇಕೆ, ಸೈಬರ್ ಲೋಕದಲ್ಲಿ ವಿಹರಿಸಬೇಕು ಎಂಬ ಇಚ್ಛೆ ನಿಮಗಿದ್ದಲ್ಲಿ ಇಂದೇ ಅಪ್ಲಿಕೇಶನ್​ ಹಾಕಿ, ಆಲ್​ ದಿ ಬೆಸ್ಟ್​!

Bengaluru City Police hiring: ಬೆಂಗಳೂರು ಪೊಲೀಸ್​ ಸೈಬರ್ ಕ್ರೈಂ ಲೋಕದಲ್ಲಿ ಭಾರೀ ಉದ್ಯೋಗಾವಕಾಶಗಳು!
ಬೆಂಗಳೂರು ಪೊಲೀಸ್​ ಸೈಬರ್ ಕ್ರೈಂ ಲೋಕದಲ್ಲಿ ಉದ್ಯೋಗಾವಕಾಶ? ಇಲ್ಲಿದೆ ವಿವರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 02, 2022 | 6:41 AM

ಬೆಂಗಳೂರು: ಹೌದು, ಸಿಲಿಕಾನ್​ ಸಿಟಿ ಖ್ಯಾತಿಯ ಕರ್ನಾಟಕದ ರಾಜಧಾನಿ ಬೆಂಗಳೂರು ಕಂಪ್ಯೂಟರ್​ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಶರವೇಗದಲ್ಲಿ ಸಾಗುತ್ತಿದೆ. ರಾಜಧಾನಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ವೇಗವಾಗಿ ಬೆಳವಣಿಗೆ ಸಾಗುತ್ತಾ ಬಂದಂತೆ ಅಪರಾಧ ಲೋಕದಲ್ಲೂ, ಅದೂ ಸೈಬರ್​ ಅಪರಾಧ ಲೋಕದಲ್ಲಿ ಭಯಾನಕ ಬೆಳವಣಿಗೆ, ಆಯಾಮಗಳನ್ನು ಕಂಡಿದೆ. ಆದರೆ ಬೆಂಗಳೂರು ಪೊಲೀಸರು ತಮ್ಮ ಖ್ಯಾತಿಗೆ ತಕ್ಕಂತೆ ಸೈಬರ್​ ಅಪರಾಧ ಲೋಕದ ಪಾತಕಿಗಳನ್ನು ಹೆಡೆಮುರಿಗೆ ಕಟ್ಟಲು ಸರ್ವಸನ್ನದ್ಧರಾಗಿದ್ದಾರೆ. ಅದಕ್ಕೆ ಬೇಕಾಗುವ ಮ್ಯಾನ್​ ಪವರ್​ ಬಲಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದು ನವ ಯುವ ಶಕ್ತಿಗೂ ಭಾರೀ ಉದ್ಯೋಗಾವಕಾಶ ಸೃಷ್ಟಿಸಿ ಕೊಡಲಿದೆ. ಬೆಂಗಳೂರಿನ ಸೈಬರ್​, ಎಕನಾಮಿಕ್ ಅಂಡ್​ ನಾರ್ಕೋಟಿಕ್ಸ್​ ಕ್ರೈಂ – ಸಿಇಎನ್​ (Cyber, Economic and Narcotics Crime -CEN) ವಿಭಾಗದಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Employment) ಆಹ್ವಾನಿಸಿದೆ.

ಏನಿದು ಬೆಂಗಳೂರು ಪೊಲೀಸ್​ ಸೈಬರ್ ಕ್ರೈಂ ಲೋಕದಲ್ಲಿ ಉದ್ಯೋಗಾವಕಾಶ? ಇಲ್ಲಿದೆ ವಿವರ: ಬೆಂಗಳೂರು ಸಿಟಿ ಪೊಲೀಸರು ಸೈಬರ್ ಕ್ರೈಂ ಲೋಕದಲ್ಲಿ ಸದ್ಯಕ್ಕೆ ಎರಡು ರೀತಿಯ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. Cyber Security Analyst ಮತ್ತು Digital Forensic Analyst ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಇದೇ ಮಾಸಾಂತ್ಯ 28ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಒಟ್ಟು 16 ಪೋಸ್ಟ್​ ಖಾಲಿ ಇದೆ: ಬೆಂಗಳೂರು ನಗರದಲ್ಲಿ ಒಟ್ಟು 8 ಸೈಬರ್ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಎರಡೂ ಹುದ್ದೆಗಳಿಗಾಗಿ ಒಟ್ಟು 16 ಪೋಸ್ಟ್​ ಖಾಲಿ ಇದೆ. ಕಂಪ್ಯೂಟರ್​ ಸೈನ್ಸ್​, ಇನ್ಫರ್​​ಮೇಶನ್ ಟೆಕ್ನಾಲಜಿ ಮುಂತಾದ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 60 ಅಂಕ ಗಳಿಸಿರಬೇಕು. ಜೊತೆಗೆ Cyber Security ಮತ್ತು Cyber Forensic ಕ್ಷೇತ್ರದಲ್ಲಿ ಒಂದಷ್ಟು ಓನಾಮಗಳನ್ನು ಕಲಿತಿರಬೇಕು, ಅರ್ಥಾತ್​ ಕನಿಷ್ಠ 2 ವರ್ಷ ಕೆಲಸ ಮಾಡಿ ಅನುಭವ ಗಳಿಸಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ Cyber Security Analyst ಗೆ ಮಾಸಿಕ 75,000 ರೂಪಾಯಿ ಸಂಬಳ ಮತ್ತು Digital Forensic Analyst ಹುದ್ದೆಗೆ ಮಾಸಿಕ 75,000 ರೂಪಾಯಿ ಸಂಬಳ ನಿಗದಿಪಡಿಲಾಗಿದೆ. ತಡವೇಕೆ, ಸೈಬರ್ ಲೋಕದಲ್ಲಿ ವಿಹರಿಸಬೇಕು ಎಂಬ ಇಚ್ಛೆ ನಿಮಗಿದ್ದಲ್ಲಿ ಇಂದೇ ಅಪ್ಲಿಕೇಶನ್​ ಹಾಕಿ, ಆಲ್​ ದಿ ಬೆಸ್ಟ್​!

ಬೆಂಗಳೂರು ಸಿಟಿ ಪೊಲೀಸ್​ ಸೈಬರ್ ಲೋಕದಲ್ಲಿ ಉದ್ಯೋಗಾವಕಾಶ, ಫೇಸ್​ಬುಕ್​ ಪೋಸ್ಟ್​ ಇಲ್ಲಿದೆ:

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ