AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zameer Ahmed: ಶಾಸಕ ಜಮೀರ್ ಅಹ್ಮದ್ ವಿರುದ್ಧ ಭೂಕಬಳಿಕೆ ಆರೋಪ; ಎಫ್​ಐಆರ್​​ ದಾಖಲು

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹಾಗೂ ಕುಟುಂಬಸ್ಥರ ವಿರುದ್ಧ ಭೂಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಪ್ರಕರಣದ ಕುರಿತ ವಿವರ ಇಲ್ಲಿದೆ.

Zameer Ahmed: ಶಾಸಕ ಜಮೀರ್ ಅಹ್ಮದ್ ವಿರುದ್ಧ ಭೂಕಬಳಿಕೆ ಆರೋಪ; ಎಫ್​ಐಆರ್​​ ದಾಖಲು
ಶಾಸಕ ಜಮೀರ್ ಅಹ್ಮದ್ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on: Feb 20, 2022 | 3:22 PM

Share

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್​ಗೆ (Zameer Ahmed Khan) ಸಂಕಷ್ಟ ಎದುರಾಗಿದೆ. ಜಮೀರ್ ಹಾಗೂ ಕುಟುಂಬಸ್ಥರ ವಿರುದ್ಧ ಭೂಕಬಳಿಕೆ ಆರೋಪ ಎದುರಾಗಿದ್ದು, ಬೆಂಗಳೂರಿನ ಸಂಪಿಗೇಹಳ್ಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಜಮೀರ್ ಅಹ್ಮದ್ ಹಾಗೂ ಸಹೋದರರ ವಿರುದ್ಧ ಎಫ್​ಐಆರ್ (FIR) ದಾಖಲು ಮಾಡಲಾಗಿದೆ. ಜಮೀರ್ ಕುಟುಂಬದ ವಿರುದ್ಧ ಶಾಹೀತಾ ನಾಸೀನ್, ತಸ್ನೀಮ್ ಫಾತೀಮಾ ಎಂಬುವವರು ನಿವೇಶನ ಕಬಳಿಕೆ ಯತ್ನ ಆರೋಪದಡಿ ಕೋರ್ಟ್​ಗೆ ಖಾಸಗಿ ದೂರು ನೀಡಿದ್ದರು. ಈ ಸಂಬಂಧ ಕೋರ್ಟ್​ ಆದೇಶದಂತೆ ಜಮೀಲ್ ಅಹ್ಮದ್ (Zameel Ahmed), ಜಮೀರ್ ಅಹ್ಮದ್, ಅತೀಕ್ ಕಾವರ್, ನ್ಯಾಷನಲ್ ಟ್ರಾವೆಲ್ಸ್ (National Travels), ಇತರರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.

ಪ್ರಕರಣವೇನು?

2015 ರಲ್ಲಿ ಶಾಹೀತಾ ನಾಸೀನ್, ತಸೀಮಾ ಫಾತೀಮಾ ಜಮೀರ್ ಕುಟುಂಬಸ್ಥರಿಂದ ಚೊಕ್ಕನಹಳ್ಳಿ ಬಡಾವಣೆಯಲ್ಲಿ ಸೈಟ್ ಖರೀದಿಸಿದ್ದಾರೆಂದು ಉಲ್ಲೇಖಿಸಲಾಗಿದೆ. ಚಾಮರಾಜಪೇಟೆ ಶಾಸಕ ಜಮೀರ್ ಸಹೋದರ ಹಾಗೂ ಕುಟುಂಬಸ್ಥರೇ ಅದನ್ನು ಮಾರಾಟ ಮಾಡಿದ್ದರು. 2018 ರಲ್ಲಿ ಜಮೀರ್ ಕುಟುಂಬಸ್ಥರಿಂದ ಮತ್ತೊಂದು ಸೈಟ್ ಖರೀದಿಸಿದ್ದಾಗಿ ಶಾಹೀತಾ ನಾಸೀನ್ ಉಲ್ಲೇಖಿಸಿದ್ದಾರೆ. ಜೆಸಿ ನಗರ ನಿವಾಸಿಗಳಾಗಿದ್ದ ಶಾಹೀತಾ ನಾಸೀನ್ ಸೈಟ್​ಗಳ ಕಡೆ ಗಮನ ಹರಿಸಿರಲಿಲ್ಲ. ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್ ಕುಟುಂಬದಿಂದಲೇ ಸೈಟ್​ಗಳ ಕಬಳಿಕೆ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಕಬಳಿಕೆ ಪ್ರಶ್ನಿಸಿದ್ದ ಶಾಹೀತಾ ನಾಸೀನ್ ಕುಟುಂಬಕ್ಕೆ ಜೀವಬೆದರಿಕೆ ಹಾಕಲಾಗಿದೆ ಎಂದೂ ಆರೋಪಿಸಲಾಗಿದೆ.

ಜಮೀರ್ ಕುಟುಂಬದ ವಿರುದ್ಧ ಆರೋಪಿಸಿ ಸೈಟ್ ಮಾಲಿಕರು ಕಳೆದ ವರ್ಷ ಕೋರ್ಟ್ ಮೊರೆಹೋಗಿದ್ದರು. ಖಾಸಗಿ ದೂರು ವಿಚಾರಣೆ ನಡೆಸಿದ ಕೋರ್ಟ್, ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಜತೆಗೆ ಕಬಳಿಕೆ ಮಾಡಿರುವ ಸೈಟ್ ಸಂಬಂಧ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿತ್ತು. ಕೋರ್ಟ್ ನಿಂದ ತಡೆಯಾಜ್ಞೆ ತಂದರೂ, ಸೈಟ್ ಬಿಟ್ಟು ಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಸಂಪಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಮೀಲ್ ಅಹಮದ್, ಜಮೀರ್ ಅಹಮದ್, ಅತೀಕ್ ಕಾವರ್, ನ್ಯಾಷನಲ್ ಟ್ರಾವೆಲ್ಸ್ ಹಾಗೂ ಇತರರ ವಿರುದ್ದ ಎಫ್​ಐಆರ್ ದಾಖಲಿಸಲಾಗಿದೆ. ದೂರುದಾರರಿಂದ ಜಾಗ ಸಂಬಂಧಿತ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ನೀಡಿರುವ ಮಾಹಿತಿ ಇಲ್ಲಿದೆ:

ಇದನ್ನೂ ಓದಿ:

R Ashok: ‘ಅಸ್ಪೃಶ್ಯತೆ ಹೇಗಿರುತ್ತದೆ ಎಂಬ ಅರಿವಾಗಿದೆ’; ಗ್ರಾಮ ವಾಸ್ತವ್ಯದ ನಂತರ ಸಚಿವ ಆರ್ ಅಶೋಕ್ ಹೇಳಿಕೆ

ಹಿಜಾಬ್​​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ನಟಿ ಝೈರಾ ವಾಸಿಂ​; ‘ದಂಗಲ್​’ ಬೆಡಗಿಯ ನಿಲುವು ಏನು?

ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!