ಹೆಣ್ಣು ಮಕ್ಕಳ ಮೇಲಿರುವ ಕಾಳಜಿಯಿಂದ ಹಾಗೆ ಹೇಳಿದ್ದು; ಹಿಜಾಬ್ ಹೇಳಿಕೆ ಕುರಿತು ಕ್ಷಮೆ ಕೇಳಿದ ಜಮೀರ್ ಅಹ್ಮದ್
ಭಾರತೀಯ ಮಹಿಳೆ ಅನಾದಿಕಾಲದಿಂದಲೂ ಶಕ್ತಿ ಸ್ವರೂಪಿನಿ. ಇದಕ್ಕೆ ಯಾವುದೇ ಜಾತಿ, ಧರ್ಮ ಅಡ್ಡ ಬರುವುದಿಲ್ಲ. ನಾಯಕರು ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಹಿಜಾಬ್ ಧರಿಸದೇ ಹೋದರೆ ಅತ್ಯಾಚಾರಗಳು ಆಗುತ್ತವೆ ಎಂಬ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ಮಾತಿನ ಕುರಿತು ಕ್ಷಮೆಯಾಚಿಸಿದ್ದಾರೆ. ರಣದೀಪ್ ಸುರ್ಜೇವಾಲ ಟ್ವೀಟ್ ಬೆನ್ನಲ್ಲೇ ಜಮೀರ್ ಟ್ವಿಟರ್ನಲ್ಲಿ ಕ್ಷಮೆ ಕೇಳಿದ್ದಾರೆ. ಯಾರ ಮನಸ್ಸು ನೋಯಿಸುವ ಉದ್ದೇಶದಿಂದ ಹೇಳಿದ್ದಲ್ಲ. ಯಾರಿಗೂ ಅಗೌರವ ತೋರುವ ದುರುದ್ದೇಶದಿಂದ ಹೇಳಿದ್ದಲ್ಲ. ಹೆಣ್ಣು ಮಕ್ಕಳ ಮೇಲಿರುವ ಕಾಳಜಿಯಿಂದ ಹಾಗೆ ಹೇಳಿದ್ದು. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.
ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಭಾನುವಾರ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು. ಶಾಸಕ ಜಮೀರ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹೇಳಿಕೆ ಬಗ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಸ ಸಹಿತ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿ ಖಂಡನೆ ವ್ಯಕ್ತಪಡಿಸಿದ್ದರು. ಇಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಕ್ಷೇಪ ವ್ಯಕ್ತಪಡಿಸಿದ್ದರು.
ಯಾರ ಮನಸ್ಸನ್ನಾದರೂ ನೋಯಿಸುವ ಇಲ್ಲವೇ ಅಗೌರವ ತೋರಿಸುವ ದುರುದ್ದೇಶ ನನಗಿಲ್ಲ. ಹೆಣ್ಣು ಮಕ್ಕಳ ಮೇಲಿನ ಕಾಳಜಿಯ ಸದುದ್ದೇಶದಿಂದ ಹೇಳಿರುವುದು. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಆ ಬಗ್ಗೆ ವಿಷಾಧವಿದೆ. 2/7#HijabIsOurPride
— B Z Zameer Ahmed Khan (@BZZameerAhmedK) February 14, 2022
ಟ್ವೀಟ್ ಮೂಲಕ ಜಮೀರ್ ಹೇಳಿಕೆಯನ್ನು ಸುರ್ಜೇವಾಲ ಖಂಡಿಸಿದ್ದರು. ಕಾಂಗ್ರೆಸ್ ನಾಯಕರೊಬ್ಬರಿಂದ ಕೀಳುಮಟ್ಟದ ಅಭಿಪ್ರಾಯ ವ್ಯಕ್ತವಾಗಿದೆ. ಮಹಿಳೆಯರ ಬಗ್ಗೆ ಕೀಳುಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಧುನಿಕ ಭಾರತದಲ್ಲಿ ಇಂತಹ ವಿಚಾರಗಳಿಗೆ ಅವಕಾಶವಿಲ್ಲ. ಇಂತಹ ಕೀಳು ವಿಚಾರಗಳು ಕೇವಲ ಬಿಜೆಪಿಗೆ ಮಾತ್ರ ಸಿಮೀತ. ಈ ಹಿಂದೆ ಬಿಜೆಪಿಯ ನಾಯಕರಾದ ಯೋಗಿ ಆದಿತ್ಯನಾಥ್, ಮನೋಹರ್ ಲಾಲ್ ಖಟ್ಟರ್ ಇಂತಹ ಹೇಳಿಕೆ ನೀಡಿದ್ದಾರೆ. ಮಹಿಳೆಯರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದರು ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
There is no place in modern India & our society for parochial & regressive views on women as expressed by a Congress leader of Karnataka.
Such dogmatic views are reserved for BJP leaders, as seen in past in outlandish remarks made by Adityanath, Manohar Lal Khattar & others. 1/2
— Randeep Singh Surjewala (@rssurjewala) February 14, 2022
ಭಾರತೀಯ ಮಹಿಳೆ ಅನಾದಿಕಾಲದಿಂದಲೂ ಶಕ್ತಿ ಸ್ವರೂಪಿನಿ. ಇದಕ್ಕೆ ಯಾವುದೇ ಜಾತಿ, ಧರ್ಮ ಅಡ್ಡ ಬರುವುದಿಲ್ಲ. ದೇಶ ಹೆಮ್ಮೆ ಪಡುವಂತೆ ಮಹಿಳೆಯರು ಸಾಧನೆ ಮಾಡಿದ್ದಾರೆ. ಈಗ ಸಮಯ ಬದಲಾಗಿದೆ, ಅದರಿಂದ ಹೊರಬರಬೇಕು. ನಾಯಕರು ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನಾನು ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆ ನೀಡಿಲ್ಲ; ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಜಮೀರ್ ಅಹ್ಮದ್
ಇದನ್ನೂ ಓದಿ: ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ: ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ