ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿಯ ಮೊಬೈಲ್ ಕದ್ದವರ ಬಂಧನ; ಆರೋಪಿಗಳ ಮೇಲಿತ್ತು 35ಕ್ಕೂ ಹೆಚ್ಚು ಸುಲಿಗೆ ಕೇಸ್!
Priyank Kharge: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶ್ರುತಿ ಮೊಬೈಲ್ ಕಸಿದಿದ್ದ ನಾಲ್ವರನ್ನು ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಸಾಲುಸಾಲು ಸುಲಿಗೆ ಬೆಳಕಿಗೆ ಬಂದಿದೆ.
ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪತ್ನಿ ಶ್ರುತಿ ಮೊಬೈಲ್ ಕಸಿದಿದ್ದ ನಾಲ್ವರನ್ನು ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮೋಯಿನ್ ಅಲಿಯಾಸ್ ಕಾಜಾ ಮೋಯಿನ್, ತೋಹಿಬ್ ಜಬಿ ಅಲಿಯಾಸ್ ಕಾಲಾ, ಇಲಿಯಾಸ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳ ಸಾಲುಸಾಲು ಸುಲಿಗೆ ಬೆಳಕಿಗೆ ಬಂದಿದೆ. ಸುಮಾರು 35ಕ್ಕೂ ಹೆಚ್ಚು ಸುಲಿಗೆ ಕೇಸ್ನಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಮುಂಜಾನೆ 5-8, ರಾತ್ರಿ 8ರಿಂದ 10ರವರೆಗೆ ಕೃತ್ಯವೆಸಗುತ್ತಿದ್ದರು. ಹೆಚ್ಚಾಗಿ ಶನಿವಾರ, ಭಾನುವಾರ ಸಕ್ರಿಯವಾಗಿ ಇರುತ್ತಿದ್ದ ಚೋರರ ಗ್ಯಾಂಗ್, ಬೈಕ್ ಕಳ್ಳತನ ಮಾಡಿ ಅದರಲ್ಲೇ ಸುಲಿಗೆ ನಡೆಸುತ್ತಿದ್ದರು. ಈ ಗ್ಯಾಂಗ್ ವಿರುದ್ಧ ಹೈಗ್ರೌಂಡ್ಸ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಮಂಡ್ಯ, ಸರ್ಜಾಪುರ, ಹೊಸಕೋಟೆ, ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಹೆಚ್ಎಸ್ಆರ್ ಲೇಔಟ್ನಲ್ಲಿ ಹಣಕೊಡದಿದ್ದ ಚಾಲಕನಿಗೆ ಚಾಕು ಹಾಕಿದ ಆರೋಪವೂ ಈ ಆರೋಪಿಗಳ ಮೇಲಿತ್ತು. ಇದೀಗ ನಾಲ್ವರು ಆರೋಪಿಗಳು ಸದಾಶಿವನಗರ ಠಾಣೆ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ.
ಫೆಬ್ರವರಿ 8ರ ಭಾನುವಾರ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ವಾಕಿಂಗ್ ಹೋಗಿದ್ದರು. ಒಬ್ಬರೇ ವಾಕಿಂಗ್ ಮಾಡುತ್ತಿದ್ದುದನ್ನು ಗಮನಿಸಿದ್ದ ಗ್ಯಾಂಗ್ ಫಾಲೋ ಮಾಡಿ ಮೊಬೈಲ್ ಕಳ್ಳತನ ಮಾಡಿತ್ತು. ಪ್ರಕರಣದ ಸಂಬಂಧ ಪ್ರಿಯಾಂಕ್ ಖರ್ಗೆ ಪಿಎ ಪ್ರದೀಪ್ ದೂರು ದಾಖಲಿಸಿದ್ದರು.
ರಾಯಚೂರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ, ಬೈಕ್ ಸವಾರ ಸಾವು
ರಾಯಚೂರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿಕ್ಕಿಯಾಗಿ 18 ವರ್ಷದ ಬೈಕ್ ಸವಾರ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ಜಿಲ್ಲೆ ಮಾನ್ವಿಯ ಧ್ಯಾನಮಂದಿರ ಬಳಿ ನಡೆದಿದೆ. ಬೈಕ್ ಸವಾರ ಮಣಿಕಂಠ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗ: ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್ ರ್ಯಾಲಿ; ಪಾಲಿಕೆ ಸದಸ್ಯ ಸೇರಿ 75 ಜನರ ವಿರುದ್ಧ ಪ್ರಕರಣ
ಶಿವಮೊಗ್ಗ: ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್ ರ್ಯಾಲಿ ನಡೆಸಿದ್ದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಸೇರಿದಂತೆ 75 ಜನರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಚಿವ ಈಶ್ವರಪ್ಪ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ಫೆ.18ರಂದು ಬೈಕ್ ಈಶ್ವರಪ್ಪ ಬೆಂಬಲಿಗರು ಬೈಕ್ ರ್ಯಾಲಿ ನಡೆಸಿದ್ದರು. ರಾಷ್ಟ್ರಧ್ವಜದ ಬಗ್ಗೆ ಈಶ್ವರಪ್ಪ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಶ್ವರಪ್ಪ ರಾಜೀನಾಮೆಗೆ ಡಿಕೆಶಿ ಒತ್ತಾಯ ಮಾಡಿದ್ದರು. ಹೀಗಾಗಿ ಈಶ್ವರಪ್ಪರನ್ನು ಬೆಂಬಲಿಸಿ ಬೆಂಬಲಿಗರು ರ್ಯಾಲಿ ನಡೆಸಿದ್ದರು. ರ್ಯಾಲಿ ನೇತೃತ್ವ ವಹಿಸಿದ್ದ ಅರುಣ್ ಕುಮಾರ್ ಯಾನೆ ಜಿಮ್ಮಿ, ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ರಾಹುಲ್ ಬಿದರೆ, ಪುರುಷೋತ್ತಮ್ ಸೇರಿದಂತೆ 75 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:
ವಾಕಿಂಗ್ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಐಫೋನ್ ಕಿತ್ಕೊಂಡು ಪರಾರಿಯಾದ ಖದೀಮರು, ಕೇಸ್ ದಾಖಲು
ಅಂಜನಾದ್ರಿಯೇ ಹನುಮನ ಜನ್ಮಸ್ಥಳ, ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಸಾಧ್ಯತೆ: ಸಚಿವೆ ಶಶಿಕಲಾ ಜೊಲ್ಲೆ