ವಾಕಿಂಗ್ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಐಫೋನ್ ಕಿತ್ಕೊಂಡು ಪರಾರಿಯಾದ ಖದೀಮರು, ಕೇಸ್ ದಾಖಲು
ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಎಂದಿನಂತೆ ಭಾನುವಾರ ಕೂಡ ವಾಕಿಂಗ್ಗೆ ಹೋಗಿದ್ದರು. ಈ ವೇಳೆ ಒಬ್ಬರೇ ವಾಕಿಂಗ್ ಮಾಡುತ್ತಿದ್ದನ್ನು ಗಮನಿಸಿದ ಖದೀಮರು ಬೈಕ್ನಲ್ಲಿ ಫಾಲೋ ಮಾಡಿ ನಂತರ ಐಫೋನ್ 11 ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ(Theft) ಹಾವಳಿ ಹೆಚ್ಚಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ನಗರದಲ್ಲಿ ಶಾಸಕನ ಪತ್ನಿ ಮೊಬೈಲ್ ಕದ್ದು ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ 6:45ಕ್ಕೆ ಕಳ್ಳರು ಐಫೋನ್ 11 ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪತ್ನಿ ಶೃತಿ ಖರ್ಗೆ(Shruthi Kharge) ಬೆಳಗ್ಗೆ ವಾಕಿಂಗ್ಎ ಹೋಗಿದ್ದಾಗ ಮೊಬೈಲ್ ಫೋನ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಎಂದಿನಂತೆ ಭಾನುವಾರ ಕೂಡ ವಾಕಿಂಗ್ಗೆ ಹೋಗಿದ್ದರು. ಈ ವೇಳೆ ಒಬ್ಬರೇ ವಾಕಿಂಗ್ ಮಾಡುತ್ತಿದ್ದನ್ನು ಗಮನಿಸಿದ ಖದೀಮರು ಬೈಕ್ನಲ್ಲಿ ಫಾಲೋ ಮಾಡಿ ನಂತರ ಐಫೋನ್ 11 ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಿಯಾಂಕ್ ಖರ್ಗೆ ಪಿಎ ಪ್ರದೀಪ್ ದೂರು ದಾಖಲಿಸಿದ್ದಾರೆ.
ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ ಚಾಮರಾಜಪೇಟೆ ಠಾಣೆ ಪೊಲೀಸರು ಚಾಮರಾಜಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಶರವಣ ಅಲಿಯಾಸ್ ಶಂಕರ್ (20), ರಾಮದಾಸ್ ಅಲಿಯಾಸ್ ಕಪ್ಪೆರಾಯ(22) ಬಂಧಿತರು. ಬಂಧಿತರಿಂದ 11.45 ಲಕ್ಷ ಮೌಲ್ಯದ 16 ದ್ವಿ ಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು, ಮನೆಮುಂದೆ ಪಾರ್ಕ್ ಮಾಡಿದ್ದ ಬೈಕ್ ಲಾಕ್ ಮುರಿದು ಕೈ ಚಳಕ ತೋರಿಸುತ್ತಿದ್ದರು. ಚಾಮರಾಜಪೇಟೆ ಹನುಮಂತನಗರ ಕೆ.ಎಸ್.ಲೇಔಟ್ ಕೆ.ಜಿ.ನಗರ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದರು. ಕದ್ದ ವಾಹನ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಜನವರಿ 22 ರಂದು ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ನಿವೃತ್ತ ಎ.ಎಸ್.ಐ ರವರ ಬೈಕ್ ಕಳ್ಳತನವಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳಿಂದ ಒಟ್ಟು 20 ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಓರ್ವ ಮೆಕಾನಿಕ್ ಆಗಿದ್ದು ಮತ್ತೊಬ್ಬ ಕಳ್ಳತನ ಮಾಡಲು ಬೈಕ್ ಟಾರ್ಗೆಟ್ ಮಾಡ್ತಿದ್ದ. ನಂತರ ಇಬ್ಬರು ಜೊತೆಯಾಗಿ ಹೋಗಿ ಲಾಕ್ ಮುರಿದು ಕಳ್ಳತನ ಮಾಡ್ತಿದ್ರು. ಕದ್ದ ವಾಹನಗಳನ್ನ ಕುಣಿಗಲ್ ನಲ್ಲಿ ಇರಿಸ್ತಿದ್ರು. ಕುಣಿಗಲ್ ನಲ್ಲಿ ನಂಬರ್ ಪ್ಲೇಟ್ ಚೇಂಜ್ ಮಾಡಿ ಬೆಂಗಳೂರಿಗೆ ತರ್ತಿದ್ರು. ಬಳಿಕ ಬೆಂಗಳೂರಲ್ಲಿ ಕಡಿಮೆ ಬೆಲೆಯಲ್ಲಿ ಬೈಕ್ ಮಾರಾಟ ಮಾಡ್ತಿದ್ರು.
ಇದನ್ನೂ ಓದಿ: ಮಹಾಭಾರತದ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ತಮ್ಮ 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ
Adani Wilmar Listing: ಅದಾನಿ ವಿಲ್ಮರ್ ಶೇ 4ರ ರಿಯಾಯಿತಿಗೆ ಷೇರು ಮಾರ್ಕೆಟ್ನಲ್ಲಿ ಲಿಸ್ಟಿಂಗ್
Published On - 11:16 am, Tue, 8 February 22