Adani Wilmar Listing: ಅದಾನಿ ವಿಲ್ಮರ್ ಶೇ 4ರ ರಿಯಾಯಿತಿಗೆ ಷೇರು ಮಾರ್ಕೆಟ್​ನಲ್ಲಿ ಲಿಸ್ಟಿಂಗ್

ಅದಾನಿ ವಿಲ್ಮರ್ ಷೇರು ಫೆಬ್ರವರಿ 8ನೇ ತಾರೀಕಿನ ಮಂಗಳವಾರದಂದು ವಿತರಣೆ ಬೆಲೆಗಿಂತ ಶೇಕಡಾ 4ರ ರಿಯಾಯಿತಿ ದರದಲ್ಲಿ ಲಿಸ್ಟಿಂಗ್ ಆಗಿದೆ.

Adani Wilmar Listing: ಅದಾನಿ ವಿಲ್ಮರ್ ಶೇ 4ರ ರಿಯಾಯಿತಿಗೆ ಷೇರು ಮಾರ್ಕೆಟ್​ನಲ್ಲಿ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 08, 2022 | 11:09 AM

ಎಫ್​ಎಂಸಿಜಿ ಆಹಾರ ಕಂಪೆನಿಯಾದ ಅದಾನಿ ವಿಲ್ಮರ್ (Adani Wilmar) ಫೆಬ್ರವರಿ 8ನೇ ತಾರೀಕಿನ ಮಂಗಳವಾರದಂದು ಷೇರು ಮಾರುಕಟ್ಟೆಯಲ್ಲಿ (Stock Market) ವಿತರಣೆ ಮಾಡಿದ್ದಕ್ಕಿಂತ ಶೇ 4ರ ರಿಯಾಯಿತಿ ದರದಲ್ಲಿ ಲಿಸ್ಟಿಂಗ್ ಆಗಿದೆ. ಬಿಎಸ್​ಇ ಸೂಚ್ಯಂಕದಲ್ಲಿ ಈ ಸ್ಟಾಕ್ ರೂ. 221ಕ್ಕೆ ಶುರುವಾದರೆ, ಎನ್​ಎಸ್​ಇಯಲ್ಲಿ 227 ರೂಪಾಯಿಗೆ ಆರಂಭವಾಯಿತು. ಈ ಷೇರಿನ ಇಶ್ಯೂ ದರ ರೂ. 230 ಆಗಿತ್ತು. 3600 ಕೋಟಿ ರೂಪಾಯಿಯ ಸಾರ್ವಜನಿಕ ವಿತರಣೆಗೆ ಹೂಡಿಕೆದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿತ್ತು. ಜನವರಿ 27ರಿಂದ 31ರ ತನಕ ಸಬ್​ಸ್ಕ್ರಿಪ್ಷನ್​ಗೆ ಮುಕ್ತವಾಗಿದ್ದ ಈ ಷೇರು 17.37 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು. ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಟ್ಟ ಭಾಗಕ್ಕಿಂತ 56.30 ಪಟ್ಟು ಮತ್ತು ಷೇರುದಾರರಿಗೆ ಮೀಸಲಿಟ್ಟಿದ್ದಕ್ಕಿಂತ 33.33 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ಇನ್ನು ರೀಟೇಲ್​ ಖರೀದಿದಾರರು ಹಾಗೂ ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್​ ಖರೀದಿದಾರರಿಗೆ ಮೀಸಲಿಟ್ಟ ಭಾಗವು ಕ್ರಮವಾಗಿ 3.92 ಪಟ್ಟು ಹಾಗೂ 5.73 ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿತ್ತು.

1999ನೇ ಇಸವಿಯಲ್ಲಿ ಇನ್​ಕಾರ್ಪೊರೇಟ್ ಆಗಿರುವಂಥ ಕಂಪೆನಿ ಇದು. ಅದಾನಿ ಸಮೂಹ ಹಾಗೂ ವಿಲ್ಮರ್​ ಸಮೂಹ ಇವೆರಡರ ಜಂಟಿ ಉದ್ಯಮ ಇದಾಗಿದ್ದು, ಅದಾನಿ ವಿಲ್ಮರ್​ ವಿಶಾಲ ವ್ಯಾಪ್ತಿಯ ಪ್ಯಾಕೇಜ್ಡ್ ಆಹಾರಗಳನ್ನು ಒದಗಿಸುತ್ತದೆ. ಅದರಲ್ಲಿ ಖಾದ್ಯ ತೈಲ, ಗೋಧಿ ಹಿಟ್ಟು, ಅಕ್ಕಿ, ಬೇಳೆಕಾಳುಗಳು, ಸೋಯಾ, ಅಡುಗೆಗೆ ಸಿದ್ಧವಾದ ಖಿಚಡಿ ಮತ್ತು ಸಕ್ಕರೆ ಇವೆಲ್ಲವೂ ಒಳಗೊಂಡಿದೆ. ವಿವಿಧ ಬ್ರ್ಯಾಂಡ್​ಗಳ ಅಡಿಯಲ್ಲಿ ವಿವಿಧ ದರಗಳಲ್ಲಿ ಒದಗಿಸಲಾಗುತ್ತದೆ. ಅದರಲ್ಲಿ ಹೆಸರುವಾಸಿಯಾದ “ಫಾರ್ಚೂನ್” ಸಹ ಒಳಗೊಂಡಿದ್ದು, ಅದು ಭಾರತದಲ್ಲಿ ಅತಿ ದೊಡ್ಡ ತೈಲ ಮಾರಾಟ ಬ್ರ್ಯಾಂಡ್ ಆಗಿದೆ.

ಕಂಪೆನಿಯು ವೈಯಕ್ತಿಕ ಸ್ವಚ್ಛತಾ ಉತ್ಪನ್ನಗಳನ್ನೂ ಆಫರ್ ಮಾಡುತ್ತದೆ. ಸಾಬೂನುಗಳು, ಹ್ಯಾಂಡ್​ವಾಷ್ ಮತ್ತು ಸ್ಯಾನಿಟೈಸರ್​ಗಳು ಮತ್ತು ವಿವಿಧ ಕೈಗಾರಿಕೆ ಅಗತ್ಯಗಳು ಸಹ ಉತ್ಪಾದಿಸಲಾಗುತ್ತದೆ. ಅಡುಗೆ ಮನೆಗೆ ಬೇಕಾದ ಪದಾರ್ಥಗಳಿಗೆ ಆಹಾರ ಮತ್ತು ದಿನಸಿಗಾಗಿ (ರೂ. 39.45 ಲಕ್ಷ ಕೋಟಿ) ಮಾಡುವ ಒಟ್ಟು ವೆಚ್ಚದಲ್ಲಿ ಶೇ 23ರಷ್ಟು ಮಾಡಲಾಗುತ್ತದೆ. ಆ ಮೂಲಕ ಅಡುಗೆ ಮನೆಯ ಅಗತ್ಯ ಪದಾರ್ಥಗಳ ಸೆಗ್ಮೆಂಟ್​ನಲ್ಲಿ ಯಾರಿಗಾದರೂ 9 ಲಕ್ಷ ಕೋಟಿ ರೂಪಾಯಿಯ ಅವಕಾಶದ ಗಾತ್ರ ದೊರೆಯುತ್ತದೆ. ಎಲ್ಲ ಬ್ರೋಕರೇಜ್​ಗಳು ಈ ಐಪಿಒಗೆ “ಸಬ್​ಸ್ಕ್ರೈಬ್” ರೇಟಿಂಗ್ ನೀಡಿದ್ದವು.

ಕಳೆದ ಹಣಕಾಸು ವರ್ಷದ ಆರ್ಥಿಕ ಫಲಿತಾಂಶವನ್ನು ಗಮನಿಸಿದಾಗ ಅದಾನಿ ವಿಲ್ಮರ್ ಸ್ಥಿತಿ ಆರೋಗ್ಯಕರವಾಗಿದೆ. ಹಣಕಾಸು ವರ್ಷ 2021ರಲ್ಲಿ ಶೇ 58ರಷ್ಟು ಬೆಳವಣಿಗೆಯೊಂದಿಗೆ 727.65 ಕೋಟಿ ರೂಪಾಯಿಗೆ ಕ್ರೋಡೀಕೃತ ಲಾಭ ಗಳಿಸಿತ್ತು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 25ರಷ್ಟು ಬೆಳವಣಿಗೆ ಕಂಡು, 37,090.42 ಕೋಟಿ ರೂಪಾಯಿ ಆದಾಯ ದಾಖಲಿಸಿತ್ತು. ಅಂದಹಾಗೆ ಈ ಲೇಖನ ಪ್ರಕಟ ಆಗುವ ಹೊತ್ತಿಗೆ ಶೇ 8ಕ್ಕೂ ಹೆಚ್ಚು ಏರಿಕೆಯೊಂದಿಗೆ 250 ರೂಪಾಯಿಯಲ್ಲಿ ಅದಾನಿ ವಿಲ್ಮರ್ ಷೇರು ವಹಿವಾಟು ನಡೆಸುತ್ತಿತ್ತು.

ಇದನ್ನೂ ಓದಿ: LIC IPO: 90 ಸಾವಿರ ಕೋಟಿ ರೂಪಾಯಿಗಳ ಎಲ್​ಐಸಿ ಐಪಿಒ ಮಾರ್ಚ್ ಮಧ್ಯದ ಹೊತ್ತಿಗೆ ಬಿಡುಗಡೆ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ