AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: 90 ಸಾವಿರ ಕೋಟಿ ರೂಪಾಯಿಗಳ ಎಲ್​ಐಸಿ ಐಪಿಒ ಮಾರ್ಚ್ ಮಧ್ಯದ ಹೊತ್ತಿಗೆ ಬಿಡುಗಡೆ

ಭಾರತೀಯ ಜೀವ ವಿಮಾ ನಿಗಮವು 2022ರ ಮಾರ್ಚ್ ಮಧ್ಯದಲ್ಲಿ ಭಾರತದ ಅತಿ ದೊಡ್ಡ ಐಪಿಒ 90 ಸಾವಿರ ಕೋಟಿ ಮೌಲ್ಯದಲ್ಲಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

LIC IPO: 90 ಸಾವಿರ ಕೋಟಿ ರೂಪಾಯಿಗಳ ಎಲ್​ಐಸಿ ಐಪಿಒ ಮಾರ್ಚ್ ಮಧ್ಯದ ಹೊತ್ತಿಗೆ ಬಿಡುಗಡೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 13, 2022 | 8:05 PM

ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (Life Insurance Corporation) ಈ ತಿಂಗಳು ತನ್ನ ಬೃಹತ್ ಐಪಿಒದ ಪ್ರಮುಖ ವಿವರಗಳನ್ನು ಪ್ರಕಟಿಸಬಹುದು ಮತ್ತು ಮಾರ್ಚ್ ಮಧ್ಯದ ವೇಳೆಗೆ ಸಾರ್ವಜನಿಕ ಷೇರುಗಳನ್ನು ವಿತರಿಸಲು ಪ್ರಾರಂಭಿಸಬಹುದು ಎಂದು ಸರ್ಕಾರ ಹಾಗೂ ಬ್ಯಾಂಕಿಂಗ್ ಅಧಿಕಾರಿಗಳು ಗುರುವಾರ ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಎಲ್​ಐಸಿಯ ಲಿಸ್ಟಿಂಗ್ ಭಾರತದ ಅತ್ಯಂತ ದೊಡ್ಡ ಐಪಿಒ ಆಗಲಿದೆ. ಸರ್ಕಾರವು ಪಾಲನ್ನು ಮಾರಾಟ ಮಾಡುವುದರಿಂದ 90,000 ಕೋಟಿ ರೂಪಾಯಿಗಳನ್ನು (1220 ಕೋಟಿ ಡಾಲರ್) ಸಂಗ್ರಹಿಸುವ ಗುರಿಯನ್ನು ಹೊಂದಿದೆ. 45,000 ಕೋಟಿಗೂ ಹೆಚ್ಚು ಆಸ್ತಿಯನ್ನು ನಿರ್ವಹಿಸುವ ಕಂಪೆನಿಯ ಮೌಲ್ಯಮಾಪನ ವಿಚಾರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ಅದು ಮುಗಿದ ನಂತರ ಅವರು ಹೂಡಿಕೆದಾರರಿಗೆ ಡ್ರಾಫ್ಟ್ IPO ಪ್ರಾಸ್ಪೆಕ್ಟಸ್ ಅನ್ನು ಬಿಡುಗಡೆ ಮಾಡಲಾಗುತ್ತದೆ, ಎಂದು ಸರ್ಕಾರ ಮತ್ತು ಎರಡು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.

“ಅಂತಿಮ ಎಂಬೆಡೆಡ್ ಮೌಲ್ಯವನ್ನು ತಿಳಿಸಿದಾಗ ನಾವು ಡ್ರಾಫ್ಟ್ ಪ್ರಾಸ್ಪೆಕ್ಟಸ್ ಅನ್ನು ಸಲ್ಲಿಸಲು ಸಿದ್ಧರಿದ್ದೇವೆ ಮತ್ತು ತಿಂಗಳ ಅಂತ್ಯದ ವೇಳೆಗೆ ಅದನ್ನು ಮಾಡುವ ಟೈಮ್‌ಲೈನ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ,” ಎಂದು ಬ್ಯಾಂಕಿಂಗ್ ಮೂಲವೊಂದು ತಿಳಿಸಿದೆ. ಭಾರತದಲ್ಲಿನ ಜೀವ ವಿಮಾ ಮಾರುಕಟ್ಟೆಯಲ್ಲಿ ಭಾರತೀಯ ಜೀವ ವಿಮಾ ನಿಗಮವು ಬಹುಪಾಲು ಪಾಲನ್ನು ಹೊಂದಿದೆ ಮತ್ತು ಐಪಿಒದಿಂದ ಬರುವ ಆದಾಯವು ಈ ಆರ್ಥಿಕ ವರ್ಷದಲ್ಲಿ ಕೊರತೆಯ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸರ್ಕಾರವು ಆಶಿಸುತ್ತಿದೆ. ಲಿಸ್ಟಿಂಗ್ ಮಾಡುವುದರಿಂದಾಗಿ ಸರ್ಕಾರದಿಂದ ನಡೆಯುವ ಕಂಪೆನಿಯ ಕೆಲಸದಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರುತ್ತದೆ.

ಅಂದಹಾಗೆ ಎಲ್​ಐಸಿಯು ಸಿಂಗಾಪೂರದಲ್ಲಿ ಅಂಗಸಂಸ್ಥೆಯನ್ನು ಹೊಂದಿದೆ ಮತ್ತು ಬಹ್ರೇನ್, ಕೀನ್ಯಾ, ಶ್ರೀಲಂಕಾ, ನೇಪಾಳ, ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದಲ್ಲಿ ಜಂಟಿ ಉದ್ಯಮಗಳನ್ನು ಹೊಂದಿದೆ. “ಮುಂದಿನ ತಿಂಗಳಿನಿಂದ ರೋಡ್ ಶೋಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಇದು ಎಲ್ಲ ವರ್ಚುವಲ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ” ಎಂದು ಮೂಲವು ತಿಳಿಸಿವೆ. ಈ ಐಪಿಒ ನಿರ್ವಹಿಸಲು ಗೋಲ್ಡ್‌ಮನ್ ಸ್ಯಾಚ್ಸ್, ಸಿಟಿಗ್ರೂಪ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ ಸೇರಿದಂತೆ ಹತ್ತು ಹೂಡಿಕೆ ಬ್ಯಾಂಕ್‌ಗಳನ್ನು ಕಳೆದ ವರ್ಷ ಸರ್ಕಾರವು ನೇಮಿಸಿತು.

ಇದನ್ನೂ ಓದಿ: LIC IPO Valuation: ಎಲ್​ಐಸಿ ಐಪಿಒಗೆ ಮಾರುಕಟ್ಟೆ ಮೌಲ್ಯದ ಅಂದಾಜು 15 ಲಕ್ಷ ಕೋಟಿ ರೂಪಾಯಿ

ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ