AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yezdi Bikes: ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್, ಅಡ್ವೆಂಚರ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಯೆಜ್ಡಿ

ಯೆಜ್ಡಿಯಿಂದ ಮೂರು ಹೊಸ ಬೈಕ್​ಗಳು ಭಾರತದಲ್ಲಿ ಬಿಡುಗಡೆ ಆಗಿದೆ. ಅವುಗಳ ದರ, ವೈಶಿಷ್ಟ್ಯ ಮತ್ತಿತರ ವಿವರ ಈ ಲೇಖನದಲ್ಲಿ ಇದೆ.

Yezdi Bikes: ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್, ಅಡ್ವೆಂಚರ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಯೆಜ್ಡಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jan 13, 2022 | 5:14 PM

Share

ಮಹೀಂದ್ರಾ ಒಡೆತನದ ಭಾರತದ ಹೆಸರಾಂತ ಯೆಜ್ಡಿ (Yezdi) ಬ್ರ್ಯಾಂಡ್​ಗೆ ಮರುಜೀವ ನೀಡಿದ್ದು, ಮೂರು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಯೆಜ್ಡಿ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಮೋಟಾರ್‌ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಯೆಜ್ಡಿ ರೋಡ್‌ಸ್ಟರ್‌ನ ಬೆಲೆಗಳು ರೂ. 1.98 ಲಕ್ಷದಿಂದ ಪ್ರಾರಂಭವಾಗುತ್ತವೆ, ಸ್ಕ್ರ್ಯಾಂಬ್ಲರ್ ಬೆಲೆ ರೂ. 2.04 ಲಕ್ಷದಿಂದ, ಅಡ್ವೆಂಚರ್ ಬೈಕ್ ರೂ. 2.09 ಲಕ್ಷದಿಂದ ಶುರು ಆಗಲಿವೆ. ಈ ಎಲ್ಲವೂ ಎಕ್ಸ್ ಶೋ ರೂಂ ಬೆಲೆಗಳಾಗಿವೆ. ಇವುಗಳ ಬುಕಿಂಗ್ ಈಗ ತೆರೆದಿದೆ.

ಹೊಸ ಯೆಜ್ಡಿ ಮೋಟಾರ್‌ಸೈಕಲ್‌ಗಳ ಮಾಡೆಲ್ ಪ್ರಕಾರ ಬೆಲೆಗಳು ಇಂತಿವೆ: Yezdi ಮೋಟಾರ್ ಸೈಕಲ್ ಬೆಲೆ (ಎಕ್ಸ್ ಶೋ ರೂಂ) ಯೆಜ್ಡಿ ರೋಡ್‌ಸ್ಟರ್ ರೂ. 1.98 ಲಕ್ಷ- ರೂ. 2.06 ಲಕ್ಷ ಯೆಜ್ಡಿ ಸ್ಕ್ರ್ಯಾಂಬ್ಲರ್ ರೂ. 2.04 ಲಕ್ಷ- ರೂ. 2.10 ಲಕ್ಷ ಯೆಜ್ಡಿ ಅಡ್ವೆಂಚರ್ ರೂ. 2.09 ಲಕ್ಷ- ರೂ. 2.18 ಲಕ್ಷ

ಈಗ, ಈ ಮೋಟಾರ್‌ಸೈಕಲ್‌ಗಳ ಎಂಜಿನ್ ವಿಶೇಷತೆಗಳ ಕುರಿತು ಹೇಳಬೇಕೆಂದರೆ, ಈ ಎಲ್ಲ ಯೆಜ್ಡಿಗಳು 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ DOHC ಎಂಜಿನ್ ಹೊಂದಿವೆ. ಆದರೆ ಇವೆಲ್ಲ ಸಾಮ್ಯತೆಗಳು ಕೊನೆಗೊಂಡು, ಉಳಿದಂತೆ ತಮ್ಮ ಪಾತ್ರಕ್ಕೆ ತಕ್ಕಂತೆ ವಿಭಿನ್ನವಾಗಿ ಟ್ಯೂನ್ ಮಾಡಿವೆ. Yezdi ರೋಡ್‌ಸ್ಟರ್ 7,300 RPMನಲ್ಲಿ 29.2 hp ಶಕ್ತಿಯನ್ನು ಮತ್ತು 6,500 RPMನಲ್ಲಿ 29 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಕ್ರ್ಯಾಂಬ್ಲರ್ 8,000 RPM ನಲ್ಲಿ 28.7 hp ಶಕ್ತಿಯನ್ನು ಮತ್ತು 6,750 RPM ನಲ್ಲಿ 28.2 Nm ಟಾರ್ಕ್ ಅನ್ನು ಹೊರಹಾಕುತ್ತದೆ.

ಅಂತಿಮವಾಗಿ, ಅಡ್ವೆಂಚರ್ ಮೋಟಾರ್‌ಸೈಕಲ್ ಮೂರರಲ್ಲೇ ಅತ್ಯಂತ ಶಕ್ತಿಶಾಲಿಯಾಗಿದೆ. ಇದು 8,000 RPM ನಲ್ಲಿ 29.7 hp ಗರಿಷ್ಠ ಶಕ್ತಿಯನ್ನು ಮತ್ತು 6,500 RPM ನಲ್ಲಿ 29.9 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲ್ಲ ಮೋಟಾರ್‌ಸೈಕಲ್‌ಗಳು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತವೆ. ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, ಈ ಎಲ್ಲ ಬೈಕ್​ಗಳು ಒಂದೇ ಡಬಲ್-ಕ್ರೇಡಲ್ ಫ್ರೇಮ್ ಅನ್ನು ಆಧರಿಸಿವೆ ಮತ್ತು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಪಡೆಯುತ್ತವೆ. ಆದರೆ ರೋಡ್‌ಸ್ಟರ್ ಮತ್ತು ಸ್ಕ್ರ್ಯಾಂಬ್ಲರ್ ಹಿಂಭಾಗದಲ್ಲಿ ಅವಳಿ ಶಾಕ್-ಅಬ್ಸಾರ್ಬರ್‌ಗಳನ್ನು ಪಡೆದರೆ, ಅಡ್ವೆಂಚರ್ ಮೊನೊ-ಶಾಕ್ ಯೂನಿಟ್ ಪಡೆಯುತ್ತದೆ.

ಇದನ್ನೂ ಓದಿ: Two Wheeler Loan: ದ್ವಿಚಕ್ರ ವಾಹನ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ ದರ? ಇಲ್ಲಿದೆ ಇಎಂಐ ಮತ್ತಿತರ ವಿವರ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ