ಬೆಂಗಳೂರಿನಲ್ಲಿ ಕೊವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದ 6 ಜನ ಬಂಧನ

|

Updated on: May 20, 2021 | 11:03 AM

ಆಯುರ್ವೇದ ವೈದ್ಯ ಪ್ರಜ್ವಲ ದಂಪತಿ, ಡಾಟಾ ಆಪರೇಟರ್ ವರುಣ್, ಸ್ವ್ಯಾಬ್ ಕಲೆಕ್ಟರ್ ಈಶ್ವರ್, ಮೋಹನ್, ದಂತ ವೈದ್ಯ ಶೇಖರ್ ಸೇರಿ ಮೂವರು ವೈದ್ಯರು, ಮೂವರು ವೈದ್ಯಕೀಯ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದ್ದು ಇವರು ರೆಮ್ಡಿಸಿವಿರ್ ಅಕ್ರಮ ಮಾರಾಟದಲ್ಲೂ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಬೆಂಗಳೂರಿನಲ್ಲಿ ಕೊವಿಡ್ ಟೆಸ್ಟ್ ನಕಲಿ ವರದಿ ನೀಡುತ್ತಿದ್ದ 6 ಜನ ಬಂಧನ
ಕೊರೊನಾ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಕೊವಿಡ್ ಟೆಸ್ಟ್ನ ನಕಲಿ ವರದಿ ನೀಡುತ್ತಿದ್ದ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣ ಪಡೆದು ನಕಲಿ ವರದಿ ನೀಡುತ್ತಿದ್ದ 6 ಜನ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಯುರ್ವೇದ ವೈದ್ಯ ಪ್ರಜ್ವಲ ದಂಪತಿ, ಡಾಟಾ ಆಪರೇಟರ್ ವರುಣ್, ಸ್ವ್ಯಾಬ್ ಕಲೆಕ್ಟರ್ ಈಶ್ವರ್, ಮೋಹನ್, ದಂತ ವೈದ್ಯ ಶೇಖರ್ ಸೇರಿ ಮೂವರು ವೈದ್ಯರು, ಮೂವರು ವೈದ್ಯಕೀಯ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದ್ದು ಇವರು ರೆಮ್ಡಿಸಿವಿರ್ ಅಕ್ರಮ ಮಾರಾಟದಲ್ಲೂ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ನಡೆಸುತ್ತಿದ್ದಾರೆ. ಕೊರೊನಾದ ಭೀಕರತೆಯ ಸಮಯದಲ್ಲೂ ಅಕ್ರಮವಾಗಿ ಹಣ ಮಾಡಲು ಅನೇಕ ಮಂದಿ ಸಜ್ಜಾಗಿದ್ದಾರೆ. ಹಾಗಾಗಿ ಜನ ಆದಷ್ಟು ಜಾಗ್ರತೆಯಿಂದ ಇರಬೇಕು.

ಕೊರೊನಾ ಸಂಕಷ್ಟದ ನಡುವೆಯೂ ಸೈಬರ್​ ಕಳ್ಳರು ದುಷ್ಕೃತ್ಯ ಮಾಡುವಲ್ಲಿ ಹಿಂದುಳಿದಿಲ್ಲ. ರೆಮ್​ಡಿಸಿವಿರ್​ ಇಂಜೆಕ್ಷನ್​ ಕೊರತೆಯೇ ವಂಚಕರ ಬ್ರಹ್ಮಾಸ್ತ್ರವಾಗಿದೆ. ಔಷಧಿಯ ಅಭಾವವನ್ನು ತಮ್ಮ ಲಾಭಕ್ಕಾಗಿ ಖದೀಮರು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಬಳಿ ರೆಮ್​ಡಿಸಿವಿರ್​ ಇರುವುದಾಗಿ ವಾಟ್ಸಾಪ್​ ಮೆಸೇಜ್ ಮಾಡುವ ಕಳ್ಳರು ಮೋಸ ಮಾಡಿದ್ದಾರೆ.

ರೆಮ್​ಡಿಸಿವಿರ್ ಅಗತ್ಯವಿರುವವರ ಮೊಬೈಲ್​ಗೆ ಮೆಸೇಜ್ ಮಾಡುತ್ತಾರೆ. ಅಡ್ವಾನ್ಸ್ ಹಣ ನೀಡಿದರೆ ರೆಮ್​ಡಿಸಿವಿರ್​ ನೀಡುವುದಾಗಿ ಮೆಸೇಜ್ ಮಾಡಿ ಬಳಿಕ ಮೋಸ ಮಾಡಿದ್ದಾರೆ. ಅದನ್ನು ನಂಬಿ ಹಣ ವರ್ಗಾವಣೆ ಮಾಡಿದವರಿಗೆ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡವರಿಂದ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್​ ಟ್ವಿಟರ್​ನಲ್ಲಿ ದೂರು ದಾಖಲಾಗಿದೆ. ಮುಂಜಾಗ್ರತೆ ವಹಿಸುವಂತೆ ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸಂಕಷ್ಟದ ನಡುವೆ ಸೈಬರ್​ ಕಳ್ಳರ ಕೈಚಳಕ ಆಕ್ಸಿಜನ್ ಸಿಲಿಂಡರ್​ ವಿಚಾರದಲ್ಲೂ ಮುಂದುವರಿದಿದೆ. ಖದೀಮರು ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ನಂಬಿಸಿ ವ್ಯಕ್ತಿಗೆ ವಂಚನೆ ಮಾಡಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್‌ ನಿವಾಸಿ ನೀಲ್‌ಜೈನ್‌ಗೆ ವಂಚನೆ ಮಾಡಲಾಗಿದೆ. ಪೇಟಿಯಂನಲ್ಲಿ ಹಂತಹಂತವಾಗಿ $47,635 ವರ್ಗಾವಣೆ ಮಾಡಿಸಿಕೊಂಡಿದ್ದ ಕಳ್ಳರು ವಂಚನೆ ಮಾಡಿದ್ದಾರೆ. ವಾಟ್ಸಾಪ್‌ ಗ್ರೂಪ್‌ನಲ್ಲಿ ನಂಬರ್ ಶೇರ್‌ ಮಾಡಿ ವಂಚನೆ ಮಾಡಲಾಗಿದ್ದು, ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ