ಕೊರೊನಾ ವಿರುದ್ಧ ಹೋರಾಡಿ ಗೆದ್ದ ಒಂದೇ ಕುಟುಂಬದ 16 ಮಂದಿ; ಧಾರವಾಡ ಜಿಲ್ಲಾಡಳಿತದಿಂದ ಮೆಚ್ಚುಗೆ

|

Updated on: May 25, 2021 | 12:20 PM

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಶಿವಳ್ಳಿ ಮಠದ ಒಂದೇ ಕುಟುಂಬದ 16 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು. ಮೇ 3 ರಿಂದ ಎಲ್ಲರೂ ಹೋಮ್ ಐಸೋಲೇಷನ್‍ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದ ಒಂದೇ ಕುಟುಂಬದ 16 ಮಂದಿ; ಧಾರವಾಡ ಜಿಲ್ಲಾಡಳಿತದಿಂದ ಮೆಚ್ಚುಗೆ
ಶಿವಳ್ಳಿ ಮಠದ ಕುಟುಂಬ
Follow us on

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊವಿಡ್ ಸೋಂಕಿಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಅಲ್ಲದೆ ಸಾಕಷ್ಟು ಜನ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಬೀದಿ ಬದಿ ಒದ್ದಾಡುವ ಸಮಸ್ಯೆ ಇದೆ. ಮೊದಲ ಅಲೆಯಂತೆ ಅಲ್ಲ ಎರಡನೇ ಅಲೆಯ ಸೋಂಕಿಗೆ ತುತ್ತಾದರೆ ಮತ್ತೆ ಗುಣಮುಖರಾಗುವುದು ಬಾರಿ ಕಷ್ಟ ಎನ್ನುವ ಮಾತು ನಮ್ಮ ನಡುವೆ ಓಡಾಡುತ್ತಿದೆ. ಹೀಗಿರುವಾಗಲೇ ಹುಬ್ಬಳ್ಳಿಯ ಕುಟುಂಬವೊಂದು ಆಸ್ಪತ್ರೆ ಮೆಟ್ಟಿಲೆರದೆ ಮನೆಯಲ್ಲೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಜಿಲ್ಲಾಡಳಿತದಿಂದ ಶಹಬ್ಬಾಶ್ ಗಿರಿ ದಕ್ಕಿಸಿಕೊಂಡಿದೆ.

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಶಿವಳ್ಳಿ ಮಠದ ಒಂದೇ ಕುಟುಂಬದ 16 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು. ಮೇ 3 ರಿಂದ ಎಲ್ಲರೂ ಹೋಮ್ ಐಸೋಲೇಷನ್‍ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೇ ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು. ಇನ್ನು ಈ ಕುಟುಂಬದ ಇತರ 3 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.

ಕಳೆದ ತಿಂಗಳು 29 ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿದೆವು ಎಂದು ಮನೆಯ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿಮಠ ತಿಳಿಸಿದ್ದಾರೆ.

ಶಿವಳ್ಳಿಮಠ ಕುಟುಂಬದ ರಾಜು(34), ಶ್ರೇಯಾ (10ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ (2), ಸಹನಾ(16), ವೈಷ್ಣವಿ(2), ಗಿರಿಜಮ್ಮ(60), ಶರಣಯ್ಯಾ(9), ಮಲ್ಲಯ್ಯ (63), ಮಹಾಂತಯ್ಯ(60), ಸಿದ್ದರಾಮಯ್ಯ(59) ಮಲ್ಲಿಕಾರ್ಜುನ (25), ಮಲ್ಲಿಕಾರ್ಜುನಯ್ಯಾ(28), ಮೃತ್ಯುಂಜಯ(27) ಕೊರೊನಾವನ್ನು ಗೆದ್ದಿದ್ದಾರೆ.

ಕೊರೊನಾ ಬಂದ ತಕ್ಷಣವೇ ಹೆದರಿಕೊಳ್ಳುವ ಜನರ ಮಧ್ಯೆ ಮನೆಯಲ್ಲಿಯೇ ಇದ್ದು ಎಲ್ಲಿಯೂ ಆಸ್ಪತ್ರೆಗೆ ಹೊಗದೇ ಇಡೀ ಕುಟುಂಬ ಕೊರೊನಾ ವಿರುದ್ಧ ಹೋರಾಡಿ ಗೆದಿದ್ದು, ಇತರರಿಗೆ ಮಾದರಿಯಾಗಿ ನಿಂತಿದೆ. ಜಿಲ್ಲಾಡಳಿತ ಹಾಗೂ ವೈದ್ಯರು ನೀಡುವ ಸಲಹೆಯನ್ನ ಚಾಚು ತಪ್ಪದೆ ಪಾಲಿಸಿ ದಿನಕ್ಕೆ ಎರಡ ರಿಂದ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದ ಕುಟುಂಬ ಜಿಲ್ಲಾಡಳಿತದ ಮೆಚ್ಚುಗೆ ವ್ಯಕ್ತಪಡಿಸಿದೆ.

ಇದನ್ನೂ ಓದಿ:

ಕೊರೊನಾದಿಂದ ಗುಣಮುಖರಾದವರಿಗೆ ಸಿಹಿ ಹಂಚಿ, ಪುಷ್ಪವೃಷ್ಟಿ ಮಾಡಿದ ಶಾಸಕ ರೇಣುಕಾಚಾರ್ಯ

ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್

Published On - 11:43 am, Tue, 25 May 21