AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಭಾರತಿ ಆಸ್ಪತ್ರೆಯಲ್ಲಿ ಬೇಜವಾಬ್ದಾರಿ ವರ್ತನೆ; ಪೊಲೀಸರ ತನಿಖೆ ವೇಳೆ ಮುಖವಾಡ ಬಯಲು

ವೃದ್ಧೆಗೆ ರೆಮ್​ಡಿಸಿವಿರ್ ನೀಡಲು 15 ಸಾವಿರ ರೂ. ಬೇಡಿಕೆಯಿಟ್ಟಿರುವ ಬಗ್ಗೆ ವೃದ್ಧೆ ಸಂಬಂಧಿಕರು ಡ್ರಗ್ ಇನ್ಸ್​ಪೆಕ್ಟರ್​ಗೆ ದೂರನ್ನು ನೀಡಿದ್ದರು. ಬಳಿಕ ಡ್ರಗ್ ಇನ್ಸ್ಪೆಕ್ಟರ್ ರೆಮ್​ಡಿಸಿವಿರ್ ನೀಡಿದ್ದರು. ಆಸ್ಪತ್ರೆಯ ಸಿಬ್ಬಂದಿ ಅದನ್ನೇ ವೃದ್ಧೆಗೆ ಇಂಜೆಕ್ಟ್ ಮಾಡಿದ್ದರು. ಜೊತೆಗೆ ಮೇ 9 ರಂದು ಆಸ್ಪತ್ರೆಯಿಂದ ಏಕಾಏಕಿ ವೃದ್ಧೆಯನ್ನು ಡಿಸ್ಚಾರ್ಜ್ ಮಾಡಿದ್ದಾರೆ.

ಬೆಂಗಳೂರಿನ ಭಾರತಿ ಆಸ್ಪತ್ರೆಯಲ್ಲಿ ಬೇಜವಾಬ್ದಾರಿ ವರ್ತನೆ; ಪೊಲೀಸರ ತನಿಖೆ ವೇಳೆ ಮುಖವಾಡ ಬಯಲು
ಭಾರತಿ ಆಸ್ಪತ್ರೆ
sandhya thejappa
|

Updated on: May 25, 2021 | 12:06 PM

Share

ಬೆಂಗಳೂರು: ಭಾರತಿ ಆಸ್ಪತ್ರೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ತನಿಖೆ ವೇಳೆ ಭಾರತಿ ಆಸ್ಪತ್ರೆ ನಿರ್ಲಕ್ಷ್ಯ ಬಯಲಾಗಿದೆ. ಆಸ್ಪತ್ರೆಯಲ್ಲಿ ಬೇಕಾಬಿಟ್ಟಿ ಡಿಸ್ಚಾರ್ಜ್ ಮಾಡುತ್ತಿದ್ದಾರಂತೆ. ಮೇ 8 ರಂದು 64 ವರ್ಷದ ವೃದ್ಧೆ ಭಾರತಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈ ವೇಳೆ ವೃದ್ಧೆಗೆ ರೆಮ್​ಡಿಸಿವಿರ್ ನೀಡಲು 15 ಸಾವಿರ ರೂ. ನೀಡುವಂತೆ ಆಸ್ಪತ್ರೆ ಬೇಡಿಕೆಯಿಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವೃದ್ಧೆಗೆ ರೆಮ್​ಡಿಸಿವಿರ್ ನೀಡಲು 15 ಸಾವಿರ ರೂ. ಬೇಡಿಕೆಯಿಟ್ಟಿರುವ ಬಗ್ಗೆ ವೃದ್ಧೆ ಸಂಬಂಧಿಕರು ಡ್ರಗ್ ಇನ್ಸ್​ಪೆಕ್ಟರ್​ಗೆ ದೂರನ್ನು ನೀಡಿದ್ದರು. ಬಳಿಕ ಡ್ರಗ್ ಇನ್ಸ್ಪೆಕ್ಟರ್ ರೆಮ್​ಡಿಸಿವಿರ್ ನೀಡಿದ್ದರು. ಆಸ್ಪತ್ರೆಯ ಸಿಬ್ಬಂದಿ ಅದನ್ನೇ ವೃದ್ಧೆಗೆ ಇಂಜೆಕ್ಟ್ ಮಾಡಿದ್ದರು. ಜೊತೆಗೆ ಮೇ 9 ರಂದು ಆಸ್ಪತ್ರೆಯಿಂದ ಏಕಾಏಕಿ ವೃದ್ಧೆಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಡಿಸ್ಚಾರ್ಜ್ ವೇಳೆ 2 ರೆಮ್​ಡಿಸಿವಿರ್ ನೀಡಿದ್ದಾಗಿ ಸುಳ್ಳು ರಿಪೋರ್ಟ್ ನೀಡಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನೊಂದು ಆರೋಪ ಭಾರತಿ ಆಸ್ಪತ್ರೆ ಸರ್ಕಾರದ ದರಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದು, ದಿನಕ್ಕೆ 40 ಸಾವಿರ ರೂಪಾಯಿ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೇ 6ರಂದು 52 ವರ್ಷದ ವ್ಯಕ್ತಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಅವರಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಮೇ 9ರಂದು ಆಸ್ಪತ್ರೆ ಸಿಬ್ಬಂದಿ ಡಿಸ್ಚಾರ್ಜ್ ಮಾಡಿದ್ದಾರೆ. ಡಿಸ್ಚಾರ್ಜ್ ಆದ ವ್ಯಕ್ತಿಗೆ ಉಸಿರಾಟದ ಸಮಸ್ಯೆಯಾಗಿತ್ತು. ವಾಪಸ್ ಅದೇ ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಮತ್ತೊಂದು ಕೇಸ್​ನಲ್ಲಿ ಆರೋಪ ಕಂಡುಬಂದಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಬಿಬಿಎಂಪಿ ಜಂಟಿ ಆಯುಕ್ತರಿಗೆ ಮಾಜಿ ಉಪಮೇಯರ್ ಎಸ್.ಹರೀಶ್ ದೂರು ನೀಡಿದ್ದಾರೆ. ಬಿಬಿಎಂಪಿ ದೂರಿನನ್ವಯ ವಿಜಯನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

Cyclone Yaas: ಮಲ್ಲಿಗೆ ಚಂಡಮಾರುತ ಯಾಸ್​ ನಾಳೆಗೆ ತೀವ್ರ ಸ್ವರೂಪ, ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿ

ಕೊರೊನಾ ವಿರುದ್ಧ ಹೋರಾಡಿ ಗೆದ್ದ ಒಂದೇ ಕುಟುಂಬದ 16 ಮಂದಿ; ಹುಬ್ಬಳ್ಳಿ ಜಿಲ್ಲಾಡಳಿತದಿಂದ ಮೆಚ್ಚುಗೆ

(Bharathy Hospital staff in Bangalore have been accused of irresponsibly)