ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ಅವಶ್ಯಕತೆ ಇಲ್ಲ ಅಂತಿರೋ ಬಸವರಾಜ್ ಹೊರಟ್ಟಿ.. ತಜ್ಞರ ಜೊತೆ ಶಿಕ್ಷಣ ಸಚಿವರಿಂದ ಸಭೆ
Karnataka SSLC PUC 2021 exams: ನೀಟ್ ಸಿಇಟಿ ಪರೀಕ್ಷೆಗಳಿಗೆ ಪಿಯು ಅಂಕಗಳನ್ನ ಈಗ ಪರಿಗಣಿಸುತ್ತಿಲ್ಲ. ಕೇವಲ ಸಿಇಟಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವೃತ್ತಿಪರ ಕೋರ್ಸ್ ಗೆ ಸೀಟ್ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪಿಯು ಪರೀಕ್ಷೆ ಅವಶ್ಯ ಇಲ್ಲ ಅಂತಿದ್ದಾರೆ ಬಸವರಾಜ್ ಹೊರಟ್ಟಿ. ಆದ್ರೆ ಎಸ್ಎಸ್ಎಲ್ಸಿ ಎಕ್ಸಾಂ ನಡೆಸಿ ಎಂಬ ಸಲಹೆ ಸಭಾಪತಿ ಹೊರಟ್ಟಿ ಅವರದ್ದಾಗಿದೆ.
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನಿಂದ ಸರ್ಕಾರಗಳು, ಸ್ಥಳೀಯ ಆಡಳಿತಗಳು ಒಂದೊಂದು ರೀತಿಯ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದರೆ, ಶಿಕ್ಷಣ ಇಲಾಖೆಯದ್ದೇ ಬೇರೆ ರೀತಿಯ ಚಿಂತೆ, ಕತೆ-ವ್ಯಥೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಗುರುತರ ಜವಾಬ್ದಾರಿ ಹೊತ್ತಿರುವ ಶಿಕ್ಷಣ ಇಲಾಖೆಗೆ ಶಾಲೆ-ಕಾಲೇಜುಗಳನ್ನು ನಡೆಸುವುದು ದುಃಸ್ಥರವಾಗಿರುವಾಗ ವಾರ್ಷಿಕ ಪರೀಕ್ಷೆಗಳನ್ನಾದರೂ ನಡೆಸಿಕೊಡುವ ಸವಾಲು. ಇದರಿಂದ ಶಿಕ್ಷಣ ಇಲಾಖೆ ನಿಜಕ್ಕೂ ಸಂಕಷ್ಟವನ್ನೆದುರಿಸುತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಳೆದ ಬಾರಿ ಕೊರೊನ ಆರ್ಭಟದ ಮಧ್ಯೆಯೇ ಸುಸೂತ್ರವಾಗಿ ಪರೀಕ್ಷೆಗಳನ್ನು ಎದುರಿಸಿ ಸೈ ಅನ್ನಿಸಿಕೊಂಡಿದ್ದರು. ಆದರೆ ಈ ಬಾರಿ ಪರಿಸ್ಥಿತಿ ನಿಜಕ್ಕೂ ಭೀಕರವಾಗಿದೆ. ಹಾಗಾಗಿ ಸಚಿವ ಸುರೇಶ್ ಕುಮಾರ್ ಅವರು ತಜ್ಞರ ಮೊರೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ಮಟ್ಟದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಶಿಕ್ಷಣ ಸಚಿವರ ಸಭೆ ಬೆನ್ನಲ್ಲೇ ಸುರೇಶ್ ಕುಮಾರ್ ರಾಜ್ಯದಲ್ಲಿ ತಜ್ಞರ ಜೊತೆ ಸಭೆಗೆ ಮುಂದಾಗಿದ್ದಾರೆ.
ಕೊವಿಡ್ ನಿಯಂತ್ರಣ ಬಳಿಕ ಎಕ್ಸಾಂ ನಡೆಸುವುದು ಸೂಕ್ತವಾ, ಅಲ್ವಾ? ದ್ವಿತೀಯ ಪಿಯುಸಿ ಎಕ್ಸಾಂ ಹೇಗೆ ನಡೆಸಬೇಕು? ಯಾವ ಮಾದರಿ ಅನುಸರಿಸಬೇಕು? ಪರೀಕ್ಷೆಯ ಸಮಯ ಎಷ್ಟು? ಪ್ರಶ್ನೆ ಪತ್ರಿಕೆ ರಚನೆ ಹೇಗಿರಬೇಕು? ಯಾವ ಸಮಯದಲ್ಲಿ ಎಕ್ಸಾಂ ನಡೆಸೊದು ಸೂಕ್ತ? ಎಂಬಿತ್ಯಾದಿ ಮಾಹಿತಿ ಕಲೆ ಹಾಕಲಿದ್ದಾರೆ ರಾಜ್ಯ ಶಿಕ್ಷಣ ಸಚಿವರು. ಇದಕ್ಕಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದೆ ಮಾಜಿ ಶಿಕ್ಷಣ ಮಂತ್ರಿಗಳು, ಸಚಿವರು, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು, ಶಿಕ್ಷಣ ತಜ್ಞರ ಸಲಹೆ ಪಡೆಯಲು ಅವರು ಮುಂದಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಇತರೆ ಸಂಕಷ್ಟಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿಗೆ ವಿಶೇಷ ಪರಿಹಾರದ ಬಗ್ಗೆ ಸಲಹೆ ಪಡಯಲು ಸಹ ಸಚಿವರು ಮುಂದಾಗಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ಸ್ವತಃ ಶಿಕ್ಷಣ ತಜ್ಞರೂ ಆಗಿರುವ ಬಸವರಾಜ್ ಹೊರಟ್ಟಿ (basavaraj horatti) ಅವರು ಪರೀಕ್ಷೆಗಳ ಬಗ್ಗೆ ಸಲಹೆ ನೀಡಲು ಮುಂದಾಗಿದ್ದಾರೆ. ಗಮನಾರ್ಹವೆಂದ್ರೆ ದ್ವಿತೀಯ ಪಿಯುಸಿ ಪರೀಕ್ಷೆ ಬೇಡಾ ಅನ್ನೊ ವಾದವನ್ನು ಸಭಾಪತಿ ಹೊರಟ್ಟಿ ಮುಂದಿಟ್ಟಿದ್ದಾರೆ. ಪಿಯು ಎಕ್ಸಾಂ ನಡೆಸದೇ ಹೋದ್ರೆ ಸಮಸ್ಯೆಯೇನೂ ಇಲ್ಲ. ನೀಟ್ ಸಿಇಟಿ ಪರೀಕ್ಷೆಗಳಿಗೆ ಪಿಯು ಅಂಕಗಳನ್ನ ಈಗ ಪರಿಗಣಿಸುತ್ತಿಲ್ಲ. ಕೇವಲ ಸಿಇಟಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವೃತ್ತಿಪರ ಕೋರ್ಸ್ ಗೆ ಸೀಟ್ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪಿಯು ಪರೀಕ್ಷೆ ಅವಶ್ಯ ಇಲ್ಲ ಅಂತಿದ್ದಾರೆ ಬಸವರಾಜ್ ಹೊರಟ್ಟಿ. ಆದ್ರೆ ಎಸ್ಎಸ್ಎಲ್ಸಿ ಎಕ್ಸಾಂ ನಡೆಸಿ ಎಂಬ ಸಲಹೆ ಸಭಾಪತಿ ಹೊರಟ್ಟಿ ಅವರದ್ದಾಗಿದೆ.
ಮೇ ಎರಡನೇ ವಾರದಲ್ಲಿ ದ್ವಿತೀಯ PUC, ಜೂನ್ ಮೊದಲ ವಾರದಲ್ಲಿ SSLC ಪರೀಕ್ಷೆ- ಸಚಿವ ಸುರೇಶ್ ಕುಮಾರ್ ಘೋಷಣೆ
(sslc puc 2021 examinations in karnataka education minister s suresh kumar to meet experts in the special meeting)
Published On - 12:32 pm, Tue, 25 May 21