Cyclone Yaas: ಮಲ್ಲಿಗೆ ಚಂಡಮಾರುತ ಯಾಸ್​ ನಾಳೆಗೆ ತೀವ್ರ ಸ್ವರೂಪ, ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿ

Cyclone Yaas: ಮಲ್ಲಿಗೆ ಚಂಡಮಾರುತ ಯಾಸ್​ ನಾಳೆಗೆ ತೀವ್ರ ಸ್ವರೂಪ, ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿ
Cyclone Yaas: ಮಲ್ಲಿಗೆ ಚಂಡಮಾರುತ ಯಾಸ್​ ನಾಳೆಗೆ ತೀವ್ರ ಸ್ವರೂಪ ಪಡೆಯಲಿದೆ: ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿ

Cyclone Yaas Updates: ಮಲ್ಲಿಗೆ ಹೆಸರಿನ ಚಂಡಮಾರುತ ಯಾಸ್​ ಸ್ವಲ್ಪ ಮುಂಚಿತವಾಗಿಯೇ ನಾಳೆಗೆ ತೀವ್ರ ಸ್ವರೂಪ ಪಡೆಯಲಿದೆ. ಅದು ಎಲ್ಲೆಲ್ಲಿ ಹಾದುಹೋಗಲಿದೆ? ಎಲ್ಲೆಲ್ಲಿ ಅವಾಂತರ ಸೃಷ್ಟಿಸಲಿದೆ ಎಂಬುದರ ವಿವರ ಇಲ್ಲಿದೆ. ಅಂತರ ರಾಜ್ಯ ಮಟ್ಟದಲ್ಲಿ ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿಯಾಗಲಿದೆ ಎಂದು ತಿಳಿದುಬಂದಿದೆ. ಆದರೆ ಅದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಬಾಧೆಯನ್ನುಂಟು ಮಾಡುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.

sadhu srinath

|

May 25, 2021 | 11:49 AM

ಮಲ್ಲಿಗೆ ಹೆಸರಿನ ಚಂಡಮಾರುತ ಯಾಸ್​ ಸ್ವಲ್ಪ ಮುಂಚಿತವಾಗಿಯೇ ನಾಳೆಗೆ ತೀವ್ರ ಸ್ವರೂಪ ಪಡೆಯಲಿದೆ. ಅದು ಎಲ್ಲೆಲ್ಲಿ ಹಾದುಹೋಗಲಿದೆ? ಎಲ್ಲೆಲ್ಲಿ ಅವಾಂತರ ಸೃಷ್ಟಿಸಲಿದೆ ಎಂಬುದರ ವಿವರ ಇಲ್ಲಿದೆ. ಅಂತರ ರಾಜ್ಯ ಮಟ್ಟದಲ್ಲಿ ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿಯಾಗಲಿದೆ ಎಂದು ತಿಳಿದುಬಂದಿದೆ.ಪಶ್ಚಿಮ ಬಂಗಾಳದ ಪೂರ್ವ ಕೇಂದ್ರದಲ್ಲಿ ಯಾಸ್​ ಚಂಡಮಾರುತಗಳು (Cyclone Yaas) ಸೋಮವಾರ ರಾತ್ರಿಯೇ ತೀವ್ರ ಸ್ವರೂಪ ಪಡೆದಿವೆ. ಒಡಿಶಾದ ಬಾಲಾಸೋರ್, ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಖೇಪುಪಾಡದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ತಿಳಿಸಿದೆ.

ಯಾಸ್​ ಚಂಡಮಾರುತಗಳು ವಾಯವ್ಯದತ್ತ ಚಲಿಸುತ್ತಿದ್ದು, ಉತ್ತರ-ವಾಯುವ್ಯದತ್ತ ಮುಂದುವರಿಯಲಿದೆ. ಬುಧವಾರ ಬೆಳಗ್ಗೆ ವೇಳೆಗೆ ತೀವ್ರ ಸ್ವರೂಪ ಪಡೆಯಲಿದೆ. ಅಲ್ಲಿಂದ ಮುಂದಕ್ಕೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗಳನ್ನು ದಾಟಿ ಮುನ್ನುಗ್ಗಲಿದೆ. ಇದೇ ವೇಳೆ ಉತ್ತರಪ್ರದೇಶದ 27 ಜಿಲ್ಲೆಗಳಲ್ಲಿ ಮಳೆ ಆರ್ಭಟ ಕಂಡುಬರಲಿದೆ. ಅಸ್ಸಾಂ, ಮೇಘಾಲಯ ಮತ್ತು ಜಾರ್ಖಂಡ್​ ರಾಜ್ಯಗಳಲ್ಲಿ ಮಳೆ ಸುರಿಯಲಿದೆ. ಒಟ್ಟು ಬುಧವಾರದ ವೇಳೆಗೆ ಯಾಸ್​ ಮಾರುತಗಳಿಂದ ಭಾರಿ ನಷ್ಟವುಂಟಾಗಲಿದೆ ಎಂದು ತಿಳಿದುಬಂದಿದೆ. ಈ ರಾಜ್ಯಗಳಲ್ಲಿ ಕೊರೊನಾ ಚಿಕಿತ್ಸೆಗೆ ಬಾಧಕವುಂಟಾಗಲಿದೆ ಎಂದು ತಿಳಿದುಬಂದಿದೆ. ಆಕ್ಸಿಜನ್ ಮತ್ತಿತರ ವೈದ್ಯಕೀಯ ಸಕರಣೆಗಳ ಸಾಗಣೆಗೆ ಅಡಚಣೆಯುಂಟಾಗಲಿದೆ ಎಂದು ತಿಳಿದುಬಂದಿದೆ.​ ಆದರೆ ಅದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಬಾಧೆಯನ್ನುಂಟು ಮಾಡುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.

(Yaas Is not like jasmine is very severe cyclone to cross Odisha and Bengal coasts on May 26 may disrupt medical facilities supply)

Cyclone Yaas ಯಾಸ್ ಚಂಡಮಾರುತದಿಂದಾಗಿ 25 ರೈಲು ರದ್ದುಗೊಳಿಸಿದ ಪೂರ್ವ ರೈಲ್ವೆ

Follow us on

Related Stories

Most Read Stories

Click on your DTH Provider to Add TV9 Kannada