ನಾಳೆಯೇ ಎಸ್ಎಸ್ಎಲ್​ಸಿ ಪರೀಕ್ಷೆ; ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ ಪ್ರವೇಶ ಪತ್ರ

| Updated By: sandhya thejappa

Updated on: Jul 18, 2021 | 4:17 PM

ಎಸ್ಎಸ್ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟದ ಬಳಿಕ ಇಲಾಖೆಗೆ 22 ಸಾವಿರ ದೂರುಗಳು ಬಂದಿದ್ದವು. ಸಚಿವ ಸುರೇಶ್ ಕುಮಾರ್ ಸೂಚನೆ ಬಳಿಕ ಡಿಡಿಪಿಐ (DDPI) ಹಾಗೂ ಬಿಇಒ (BEO) ಮೂಲಕ ಹಾಲ್ ಟಿಕೆಟ್ ವಿತರಣೆ ಮಾಡಲಾಗಿತ್ತು.

ನಾಳೆಯೇ ಎಸ್ಎಸ್ಎಲ್​ಸಿ ಪರೀಕ್ಷೆ; ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ ಪ್ರವೇಶ ಪತ್ರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಾಳೆಯಿಂದ (ಜುಲೈ 19) ರಾಜ್ಯದಾದ್ಯಂತ ಎಸ್ಎಸ್ಎಲ್​ಸಿ (SSLC) ಪರೀಕ್ಷೆ ಆರಂಭವಾಗುತ್ತಿದೆ. ಆದರೆ ಕೆಲ ವಿದ್ಯಾರ್ಥಿಗಳ ಕೈಗೆ ಇನ್ನೂ ಪ್ರವೇಶ ಪತ್ರ ಸೇರಿಲ್ಲ. ಖಾಸಗಿ ಶಾಲೆಗಳ ಫೀಸ್ ಫೈಟ್​ನಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟೆನ್ಷನ್ ಶುರುವಾಗಿದೆ. ಖಾಸಗಿ ಶಾಲೆಗಳ ಅಮಾನವೀಯತೆಯಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇನ್ನು ಪ್ರವೇಶ ಪತ್ರ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಎಸ್ಎಸ್ಎಲ್​ಸಿ ಪರೀಕ್ಷಾ ದಿನಾಂಕ ಪ್ರಕಟದ ಬಳಿಕ ಇಲಾಖೆಗೆ 22 ಸಾವಿರ ದೂರುಗಳು ಬಂದಿದ್ದವು. ಸಚಿವ ಸುರೇಶ್ ಕುಮಾರ್ ಸೂಚನೆ ಬಳಿಕ ಡಿಡಿಪಿಐ (DDPI) ಹಾಗೂ ಬಿಇಒ (BEO) ಮೂಲಕ ಹಾಲ್ ಟಿಕೆಟ್ ವಿತರಣೆ ಮಾಡಲಾಗಿತ್ತು. 16 ಸಾವಿರ ವಿದ್ಯಾರ್ಥಿಗಳಿಗೆ ಇಲಾಖೆ ಪ್ರವೇಶ ಪತ್ರ ನೀಡಿದೆ. ಇನ್ನು 6 ಸಾವಿರ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೆ ಗೊಂದಲದಲ್ಲಿದ್ದಾರೆ.

ಖಾಸಗಿ ಶಾಲೆಗಳಿಂದ ಮಕ್ಕಳಿಗೆ ಫೀಸ್ ಟಾರ್ಚರ್ ಮುಂದುವರಿದಿದೆ. ಶಾಲೆಗಳು ಶುಲ್ಕ ಕಟ್ಟದ ವಿದ್ಯಾರ್ಥಿಗಳ ದಾಖಲಾತಿಯನ್ನೇ ಮಾಡಿಕೊಂಡಿಲ್ಲ. ವಿದ್ಯಾರ್ಥಿ ಗ್ರೀಷ್ಮ ನಾಯಕ್ ರೀತಿ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಕ್ಸಾಂಗೆ ಅವಕಾಶವೇ ಸಿಗುತಿಲ್ಲ.

ಈ ಬಗ್ಗೆ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ಬಳಿ ಕೇಳಿದಾಗ ಉಡಾಫೆ ಉತ್ತರ ನೀಡಿದ್ದಾರೆ. ನಾನು ಎಷ್ಟು ಮಾಹಿತಿ ಕೊಡಬೇಕೋ ಅಷ್ಟು ಮಾತ್ರ ಕೊಡುತ್ತೀನಿ. ನೀವು ವಿವಾದಾತ್ಮಕ ಪ್ರಶ್ನೆಗಳ ಬಗ್ಗೆ ಏನೂ ಕೇಳೋ ಹಾಗಿಲ್ಲ. ನೀವು ಏನೂ ಕೇಳೋ ಹಾಗಿಲ್ಲ, ನಾನೂ ಏನೋ ಹೇಳೋದಿಲ್ಲ ಅಂತ ನಿರ್ದೇಶಕಿ ವಿ.ಸುಮಂಗಲಾ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ

SSLC Exam 2021: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ; ಕೆಲ ಮಾಹಿತಿಗಳು ಇಲ್ಲಿದೆ

Karnataka Weather: ಕರ್ನಾಟಕದಲ್ಲಿ ಜುಲೈ 21 ರ ತನಕ ಭಾರೀ ಮಳೆ ಸಾಧ್ಯತೆ; SSLC ಪರೀಕ್ಷೆಗೆ ತೆರಳುವಾಗ ಎಚ್ಚರದಿಂದಿರಿ ಮಕ್ಕಳೇ

(Some Karnataka students who are yet to take the SSLC exam have not got Hall Ticket)

Published On - 11:58 am, Sun, 18 July 21