ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ರೈಲು ಸಂಖ್ಯೆ 07193/07194 ಸಿಕಂದರಾಬಾದ್ – ಯಶವಂತಪುರ – ಸಿಕಂದರಾಬಾದ್ ವಿಶೇಷ ರೈಲುಗಳನ್ನು ಪ್ರತಿ ದಿಕ್ಕಿನಲ್ಲಿ ಬೇಡಿಕೆಗೆ ಅನುಗುಣವಾಗಿ (TOD) ಓಡಿಸಲು ದಕ್ಷಿಣ ಮಧ್ಯ ರೈಲ್ವೆ (South Central Railway) ಸೂಚನೆ ನೀಡಿದೆ. ರೈಲು ಸಮಯ ಮತ್ತು ನಿಲುಗಡೆ ನಿಲ್ದಾಣಗಳ ವಿವರಗಳು:
1. ರೈಲು ಸಂಖ್ಯೆ 07193 ಸಿಕಂದರಾಬಾದ್ – ಯಶವಂತಪುರ ವಿಶೇಷ ರೈಲು 29.08.2022 ರಂದು ಮಧ್ಯಾಹ್ನ 03:15 ಕ್ಕೆ ಸಿಕಂದರಾಬಾದ್‌ನಿಂದ ಪ್ರಾರಂಭವಾಗಲಿದೆ. ಮತ್ತು ಮರುದಿನ ಬೆಳಿಗ್ಗೆ 04:00 ಗಂಟೆಗೆ ಯಶವಂತಪುರ ತಲುಪುತ್ತದೆ.
2. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07194 ಯಶವಂತಪುರ – ಸಿಕಂದರಾಬಾದ್ ವಿಶೇಷ ರೈಲು ಯಶವಂತಪುರದಿಂದ 30.08.2022 ರಂದು ಸಂಜೆ 05:20 ಕ್ಕೆ ಹೊರಡಲಿದೆ. ಮತ್ತು ಮರುದಿನ ಬೆಳಿಗ್ಗೆ 06:45 ಕ್ಕೆ ಸಿಕಂದರಾಬಾದ್ ತಲುಪುತ್ತದೆ.
ರೈಲು (07193) ಮಾರ್ಗದಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೀಗಿರುತ್ತದೆ: ಕಾಚೀಗುಡ – 03.40/03.45 p.m., ಉಮ್ಡಾನಗರ – 04.09/04.10 p.m., ಶಾದ್‌ನಗರ-04.30/04.31 p.m., ಜಡ್ಚೆರ್ಲಾ – ಸಂಜೆ 04.55/04.56, ಗದ್ವಾಲ್ – 06.00/06.01 p.m, ಕರ್ನೂಲ್ ನಗರ-07.10/07.12 p.m, ಧೋನೆ-08.28/08.30 ಪಿ.ಎಂ., ಅನಂತಪುರ – 10.38/10.40 ಪಿ.ಎಂ, ಹಿಂದೂಪುರ – 01.09/01.10 am. ಮತ್ತು ಯಲಹಂಕ ಜಂಕ್ಷನ್ -02.30/02.32 a.m.
ಹಿಂದಿರುಗುವ ಮಾರ್ಗದಲ್ಲಿ ಈ ನಿಲ್ದಾಣಗಳಲ್ಲಿ ನಿಲುಗಡೆ ಸಮಯ ಹೀಗಿರುತ್ತದೆ: ವಿಶೇಷ ರೈಲು (07194) ಯಲಹಂಕ ಜಂಕ್ಷನ್ 05.29/05.40 ಪಿ.ಎಂ, ಹಿಂದೂಪುರ – 06.38/06.40, ಧರ್ಮಾವರಂ ಜಂಕ್ಷನ್ ಬೆಳಗ್ಗೆ 08.33/08.35, ಶಾದ್‌ನಗರ – 04.40/04.41 ಎ.ಎಂ, ಉಮ್ದನಗರ – 05.00/05.01 ಮತ್ತು ಕಾಚೀಗುಡ 05.50/05.55 ಬೆಳಗ್ಗೆ.
ಈ ರೈಲುಗಳು 2-AC-2 ಶ್ರೇಣಿ, 5-AC-3 ಶ್ರೇಣಿ, 10- ಸ್ಲೀಪರ್ ಕ್ಲಾಸ್, 2-ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2- ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳನ್ನು (ಒಟ್ಟು 21 ಕೋಚ್‌ಗಳು) ಒಳಗೊಂಡಿರುತ್ತದೆ. ಈ ವಿಶೇಷ ರೈಲುಗಳ ದರವು @ 1.3 ದರವಾಗಿರುತ್ತದೆ.
II ರೈಲು ಸೇವೆಗಳ ವಿಸ್ತರಣೆ
ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ ಟ್ರೈನ್ ಸಂಖ್ಯೆ 16569/16570 ಯಶವಂತಪುರ – ಕಾಚೀಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೇವೆಗಳನ್ನು ವಿಸ್ತರಿಸಲು ನಿರ್ಧರಿಸಿದೆ.
ಅದರಂತೆ ರೈಲು ಸಂಖ್ಯೆ 16569 ಯಶವಂತಪುರ – ಕಾಚೀಗುಡ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಆಗಸ್ಟ್ 26 ರವರೆಗೆ ಓಡಿಸಲು ಮೊದಲೇ ಸೂಚಿಸಲಾಗಿತ್ತು, ಇದನ್ನು 2 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ – ರೈಲು ಸಂಖ್ಯೆ 16570 ಕಾಚೀಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ನ ಹೆಚ್ಚಿನ ಸೇವೆಗಾಗಿ 3 ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ ಎಂದು ಅನೀಶ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.