ಲೇಡಿ ಕಾನ್​ಸ್ಟೇಬಲ್​ ಮೇಲೆ ಶಾಸಕಿ ಸೌಮ್ಯಾ ರೆಡ್ಡಿ ಹಲ್ಲೆ: ವಿಡಿಯೋ ವೈರಲ್​

ಲೇಡಿ ಕಾನ್​ಸ್ಟೇಬಲ್​ ಹಾಗೂ ಸೌಮ್ಯಾ ರೆಡ್ಡಿ ನಡುವೆ ವಾಗ್ವಾದ ಕೂಡ ಏರ್ಪಟ್ಟಿದೆ. ಈ ವೇಳೆ ಸೌಮ್ಯಾ ರೆಡ್ಡಿ ಕಾನ್​ಸ್ಟೇಬಲ್​ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಲೇಡಿ ಕಾನ್​ಸ್ಟೇಬಲ್​ ಮೇಲೆ ಶಾಸಕಿ ಸೌಮ್ಯಾ ರೆಡ್ಡಿ ಹಲ್ಲೆ: ವಿಡಿಯೋ ವೈರಲ್​
ಸೌಮ್ಯಾ ರೆಡ್ಡಿ
Edited By: ಸಾಧು ಶ್ರೀನಾಥ್​

Updated on: Jan 20, 2021 | 4:41 PM

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಫ್ರೀಡಂ ಪಾರ್ಕ್​ನಿಂದ ರಾಜಭವನದವರೆಗೆ ಕಾಂಗ್ರೆಸ್​ ನಾಯಕರು ಪ್ರತಿಭಟನೆ ಹೊರಟಿದ್ದರು. ಈ ವೇಳೆ ಅವರನ್ನು ಮಹಾರಾಣಿ ಕಾಲೇಜು ಬಳಿ ಪೊಲೀಸರು ವಶಕ್ಕೆ ಪಡೆದರು.

ಈ ಮಧ್ಯೆ ವಶಕ್ಕೆ ಪಡೆಯಲು ಬಂದ ಪೊಲೀಸರಿಗೆ ಶಾಸಕಿ ಸೌಮ್ಯಾ ರೆಡ್ಡಿ ಅವಾಜ್​ ಹಾಕಿದ್ದಾರೆ. ಲೇಡಿ ಕಾನ್​ಸ್ಟೇಬಲ್​ ಹಾಗೂ ಸೌಮ್ಯಾ ರೆಡ್ಡಿ ನಡುವೆ ವಾಗ್ವಾದ ಕೂಡ ಏರ್ಪಟ್ಟಿದೆ. ಈ ವೇಳೆ ಸೌಮ್ಯಾ ರೆಡ್ಡಿ ಕಾನ್​ಸ್ಟೇಬಲ್​ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಅವರನ್ನು ಮನವೊಲಿಸಿ ವಾಹನದ ಮೇಲೆ ಹತ್ತಿಸಲಾಗಿದೆ. ಇದರ ವಿಡಿಯೋ ಸಧ್ಯ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಧರಣಿ ನಿರತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಆಕ್ರೋಶ ಹೊರ ಹಾಕಿದರು. ಸಿದ್ದರಾಮಯ್ಯ ಕೂಡ ಈ ಸಂಬಂಧ ಅಸಮಾಧಾನ ಹೊರ ಹಾಕಿದ್ದಾರೆ. ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯ ಸರ್ಕಾರ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸೌಮ್ಯಾ ರೆಡ್ಡಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬೆಂಗಳೂರು ಪೊಲೀಸರ ವಶಕ್ಕೆ

Published On - 4:18 pm, Wed, 20 January 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us