‘ಯಡಿಯೂರಪ್ಪದು ನಾಗರಿಕ ಸರ್ಕಾರವೋ, ಅನಾಗರಿಕ ಸರ್ಕಾರವೋ ಗೊತ್ತಾಗ್ತಿಲ್ಲ’

|

Updated on: Apr 23, 2020 | 6:20 PM

ಬಾಗಲಕೋಟೆ: ರಾಜ್ಯದಲ್ಲಿ ಆಡಳಿತಾರೂಢ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಾಗರಿಕ ಸರ್ಕಾರವೋ, ಅನಾಗರಿಕ ಸರ್ಕಾರವೋ ಗೊತ್ತಾಗುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್​ ಆರ್​ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಳೆ ಮಾರಾಟ ಮಾಡಲಾಗದೇ ಹೊಲದಲ್ಲೇ ಬಿಡುತ್ತಿದ್ದಾರೆ. ವಲಸೆ ಕಾರ್ಮಿಕರ ಪರಿಸ್ಥಿತಿ ಶೋಚನೀಯ ಮಟ್ಟ ತಲುಪಿದೆ. ಸವಿತಾ ಸಮಾಜ, ಚಮ್ಮಾರರು ಅಕ್ಕಸಾಲಿಗರು, ಮಡಿವಾಳರು ಸೇರಿದಂತೆ ವಿವಿಧ ಜನಾಂಗದವ್ರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎಸ್​ ಆರ್ ಪಾಟೀಲ್​ […]

‘ಯಡಿಯೂರಪ್ಪದು ನಾಗರಿಕ ಸರ್ಕಾರವೋ, ಅನಾಗರಿಕ ಸರ್ಕಾರವೋ ಗೊತ್ತಾಗ್ತಿಲ್ಲ’
Follow us on

ಬಾಗಲಕೋಟೆ: ರಾಜ್ಯದಲ್ಲಿ ಆಡಳಿತಾರೂಢ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಾಗರಿಕ ಸರ್ಕಾರವೋ, ಅನಾಗರಿಕ ಸರ್ಕಾರವೋ ಗೊತ್ತಾಗುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್​ ಆರ್​ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಳೆ ಮಾರಾಟ ಮಾಡಲಾಗದೇ ಹೊಲದಲ್ಲೇ ಬಿಡುತ್ತಿದ್ದಾರೆ. ವಲಸೆ ಕಾರ್ಮಿಕರ ಪರಿಸ್ಥಿತಿ ಶೋಚನೀಯ ಮಟ್ಟ ತಲುಪಿದೆ. ಸವಿತಾ ಸಮಾಜ, ಚಮ್ಮಾರರು ಅಕ್ಕಸಾಲಿಗರು, ಮಡಿವಾಳರು ಸೇರಿದಂತೆ ವಿವಿಧ ಜನಾಂಗದವ್ರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎಸ್​ ಆರ್ ಪಾಟೀಲ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದ ಜಿಡಿಪಿ 1.8ಕ್ಕೆ ಇಳಿದಿದೆ, ನಾವು ಭಿಕ್ಷೆ ಬೇಡಬೇಕಾ? ಜಿಡಿಪಿ ಕೆಳಮಟ್ಟಕ್ಕೆ ಬಂದರೆ ನಾವು ಭಿಕ್ಷೆ ಬೇಡಬೇಕಾ? ಎಂದೂ ಪರಿಷತ್​ ವಿಪಕ್ಷ ನಾಯಕ ಪಾಟೀಲ್ ಪ್ರಶ್ನಿಸಿದ್ದಾರೆ.

Published On - 6:19 pm, Thu, 23 April 20