SSLC Exam 2020 ಇಂದು ಯಾವುದೇ ವಿದ್ಯಾರ್ಥಿ ಕಾಪಿ ಮಾಡಿಲ್ಲ-ಸುರೇಶ್​ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಸೂಕ್ಷ್ಮ ಸಂದರ್ಭದಲ್ಲೂ ಮೊದಲ ದಿನದ ಎಸ್​ಎಸ್​ಎಲ್​ಸಿ ಪರೀಕ್ಷೆ ಇಂದು ನಡೆದಿದೆ. ಇಷ್ಟು ದಿನದಿಂದ ಎದುರು ನೋಡುತ್ತಿದ್ದ SSLC ಪರೀಕ್ಷೆ ಮೊದಲ ದಿನ ಮುಗಿದಿದೆ. ಇಂದು ದ್ವಿತೀಯ ಭಾಷೆ ಇಂಗ್ಲಿಷ್​ ಮತ್ತು ಕನ್ನಡ ಭಾಷೆಯ ಪರೀಕ್ಷೆ ನಡೆದಿದೆ. ಇಂದು ಹಾಜರಾಗಬೇಕಿದ್ದ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಹಾಜರಾತಿಯ ಪ್ರಮಾಣ ಶೇ.98.3ರಷ್ಟಿದೆ. 13,212 ಮಕ್ಕಳು ಪರೀಕ್ಷೆಗೆ ಗೈರಾಗಿದ್ದಾರೆ. 7,43,688 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗಿದ್ದಾರೆ. ಕಂಟೈನ್​ಮೆಂಟ್ ಪ್ರದೇಶದಿಂದ ಬಂದ […]

SSLC Exam 2020 ಇಂದು ಯಾವುದೇ ವಿದ್ಯಾರ್ಥಿ ಕಾಪಿ ಮಾಡಿಲ್ಲ-ಸುರೇಶ್​ಕುಮಾರ್
Edited By:

Updated on: Jun 25, 2020 | 5:37 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಸೂಕ್ಷ್ಮ ಸಂದರ್ಭದಲ್ಲೂ ಮೊದಲ ದಿನದ ಎಸ್​ಎಸ್​ಎಲ್​ಸಿ ಪರೀಕ್ಷೆ ಇಂದು ನಡೆದಿದೆ. ಇಷ್ಟು ದಿನದಿಂದ ಎದುರು ನೋಡುತ್ತಿದ್ದ SSLC ಪರೀಕ್ಷೆ ಮೊದಲ ದಿನ ಮುಗಿದಿದೆ.

ಇಂದು ದ್ವಿತೀಯ ಭಾಷೆ ಇಂಗ್ಲಿಷ್​ ಮತ್ತು ಕನ್ನಡ ಭಾಷೆಯ ಪರೀಕ್ಷೆ ನಡೆದಿದೆ. ಇಂದು ಹಾಜರಾಗಬೇಕಿದ್ದ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಹಾಜರಾತಿಯ ಪ್ರಮಾಣ ಶೇ.98.3ರಷ್ಟಿದೆ. 13,212 ಮಕ್ಕಳು ಪರೀಕ್ಷೆಗೆ ಗೈರಾಗಿದ್ದಾರೆ.

7,43,688 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗಿದ್ದಾರೆ. ಕಂಟೈನ್​ಮೆಂಟ್ ಪ್ರದೇಶದಿಂದ ಬಂದ 998 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಇನ್ನು, ಆರೋಗ್ಯದಲ್ಲಿ ವ್ಯತ್ಯಾಸವಿರುವ 201 ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಕುಳಿತು ಪರೀಕ್ಷೆ ಬರೆದಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಯಾವುದೇ ವಿದ್ಯಾರ್ಥಿ ನಕಲು ಮಾಡಿಲ್ಲ:
ಇಡೀ ರಾಜ್ಯದಲ್ಲಿ ಯಾವುದೇ ವಿದ್ಯಾರ್ಥಿ ನಕಲು ಮಾಡಿಲ್ಲ. ನೆರೆ ರಾಜ್ಯದ 614 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಅದರಲ್ಲಿ 555 ಮಕ್ಕಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ಕಾರ್ಮಿಕರ ಮಕ್ಕಳು ತಾವಿದ್ದಲ್ಲಿಯೇ ಪರೀಕ್ಷೆ ಬರೆಯಲು ನೋಂದಾಯಿಸಿದ್ದರು. ಅದರಲ್ಲಿ 12,548 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಇದನ್ನು ತಪ್ಪದೇ ಓದಿ: ಪೊಲೀಸ್ ಕಾಲೋನಿ ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಯತ್ನ, ಕಿಟಕಿಯಲ್ಲಿ ನೋಟ್​ಬುಕ್ ಪತ್ತೆ

96 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ. ಇವರು ಯಾವ ಕಾರಣಕ್ಕಾಗಿ ಗೈರಾಗಿದ್ದಾರೆ ಎಂದು ತಿಳಿದುಕೊಂಡು ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುತ್ತೇವೆ. 3,212 ಬಸ್ ಮತ್ತು ಇತರ ವಾಹನಗಳನ್ನ ವಿದ್ಯಾರ್ಥಿಗಳ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. 2,879 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಯಶಸ್ವಿಯಾಗಿದೆ. ಇವತ್ತು ನಾನು 12 ಶಾಲೆಗಳಲ್ಲಿ ಸ್ಥಳ ಪರೀಕ್ಷೆ ನಡೆಸಿದ್ದೇನೆ ಎಂದರು.

ಇದನ್ನು ತಪ್ಪದೇ ಓದಿ: ನಕಲು ಮಾಡಲು ಸಹಕರಿಸಿ ಸಿಕ್ಕಿಬಿದ್ದಾಗ, ಎಸ್ಕೇಪ್​ ಆಗಲು ಯತ್ನಿಸಿದ 4 ಶಿಕ್ಷಕರು ಅಂದರ್

Published On - 4:58 pm, Thu, 25 June 20