ಬೆಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಈ ಮೊದಲು ನಿಗದಿ ಪಡಿಸಿದಂತೆಯೇ ನಡೆಯಲಿದೆ. ವೇಳಾ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ವತಃ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಸಷ್ಟನೆ ನೀಡಿದೆ.
ಈ ಮೊದಲು ನಿಗದಿ ಪಡಿಸಿದಂತೆ ಅಂದ್ರೆ ಜೂನ್ 25ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಿ ಜುಲೈ 4ರವರೆಗೆ ನಡೆಯಲಿದೆ. ಒಟ್ಟು 8.4 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ ಒಟ್ಟು 8,500 ಕೋಠಡಿಗಳನ್ನ ಕಾಯ್ದಿರಿಸಲಾಗಿದೆ. ಪ್ರತಿ ರೂಮ್‌ನಲ್ಲಿ 18ರಿಂದ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕೊರೊನಾ ಹೆಮ್ಮಾರಿಯ ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೆಲ ಅಗತ್ಯ ಕ್ರಮಗಳನ್ನು ಕೂಡಾ ಕೈಗೊಂಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್‌ಗಳನ್ನ ಚಾಚೂ ತಪ್ಪದೇ ಪಾಲಿಸಲು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ನಿರ್ಧರಿಸಿದೆ.