ಮೇ ಎರಡನೇ ವಾರದಲ್ಲಿ ದ್ವಿತೀಯ PUC, ಜೂನ್​ ಮೊದಲ ವಾರದಲ್ಲಿ SSLC ಪರೀಕ್ಷೆ- ಸಚಿವ ಸುರೇಶ್ ಕುಮಾರ್ ಘೋಷಣೆ

|

Updated on: Jan 23, 2021 | 1:46 PM

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಈಗಾಗಲೇ ಶೇಕಡಾ 30ರಷ್ಟು ಪಠ್ಯ ಕಡಿಮೆ ಮಾಡಲಾಗಿದೆ ಎಂದರು.

ಮೇ ಎರಡನೇ ವಾರದಲ್ಲಿ ದ್ವಿತೀಯ PUC, ಜೂನ್​ ಮೊದಲ ವಾರದಲ್ಲಿ SSLC ಪರೀಕ್ಷೆ- ಸಚಿವ ಸುರೇಶ್ ಕುಮಾರ್ ಘೋಷಣೆ
ಸಚಿವ ಎಸ್. ಸುರೇಶ್ ಕುಮಾರ್
Follow us on

ಬೆಂಗಳೂರು: ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜೂನ್ ಮೊದಲ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಈಗಾಗಲೇ ಶೇಕಡಾ 30ರಷ್ಟು ಪಠ್ಯ ಕಡಿಮೆ ಮಾಡಲಾಗಿದೆ. ಮುಂದಿನ ತರಗತಿ ಕಲಿಕೆಗೆ ಕೊರತೆಯಾಗದಂತೆ ಪಠ್ಯವಿಷಯ ಕಡಿಮೆ ಮಾಡಿದ್ದೇವೆ. ಕೋವಿಡ್ ಕಾರಣದಿಂದ ಪರೀಕ್ಷೆಗೆ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಲ್ಲ ಎಂದು ತಿಳಿಸಿದರು.

ಪರೀಕ್ಷೆ ಯಾವ ರೀತಿ ನಡೆಸಬೇಕು ಅಂತ ಎಸ್ಎಸ್​​ಎಲ್​​ಸಿ ಮತ್ತು ಪಿಯು ಬೋಡ್೯ಗಳು ತೀಮಾ೯ನಿಸುತ್ತವೆ ಎಂದು ಸುರೇಶ್​ ಕುಮಾರ್ ಮಾಹಿತಿ ನೀಡಿದರು.

ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಪರೀಕ್ಷೆ ಬೇಕೇ? ಬೇಡವೇ?