Shivamogga Blast ಸ್ಫೋಟದ ತೀವ್ರತೆಯಿಂದ ಗ್ರಾಮಸ್ಥರಿಗೆ ಎದುರಾಯಿತು ಕಣ್ಣು, ಕಿವಿ, ಶ್ವಾಸಕೋಶದ ಸಮಸ್ಯೆ..!
ಕಲ್ಲಿನ ಕ್ವಾರಿಯಲ್ಲಿ ಸ್ಫೋಟ ಉಂಟಾದ ಬಳಿಕ ಸುತ್ತಮುತ್ತಲ ಗ್ರಾಮಸ್ಥರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಸುತ್ತಮುತ್ತಲ ಗ್ರಾಮಸ್ಥರ ಕಿವಿ, ಕಣ್ಣು ಮತ್ತು ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಬಳಿ ಇರುವ ಕಲ್ಲಿನ ಕ್ವಾರಿಯಲ್ಲಿ ನಡೆದ ಸ್ಫೋಟದಿಂದಾಗಿ ಸುತ್ತಮುತ್ತಲಿನ ಗ್ರಾಮದ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ.
ಕಲ್ಲಿನ ಕ್ವಾರಿಯಲ್ಲಿ ಸ್ಫೋಟ ಉಂಟಾದ ಬಳಿಕ ಸುತ್ತಮುತ್ತಲ ಗ್ರಾಮಸ್ಥರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಸುತ್ತಮುತ್ತಲ ಗ್ರಾಮಸ್ಥರ ಕಿವಿ, ಕಣ್ಣು ಮತ್ತು ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಘಟನೆಯ ಬಳಿಕ ನಿನ್ನೆಯಿಂದ ಸಾಕಷ್ಟು ಜನರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ. ಕೆಲವರಿಗೆ ಕಣ್ಣು ಸರಿಯಾಗಿ ಕಾಣಿಸುತ್ತಲ್ಲ. ಎಲ್ಲವೂ ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿದೆ.
ಇನ್ನೂ ಹಲವರು ಸ್ಫೋಟದಿಂದ ಎದ್ದ ದೂಳಿನ ಕಣಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ನೊಂದ ಜನರು ಅಳಲು ತೋಡಿಕೊಂಡಿದ್ದಾರೆ. ಸ್ಫೋಟದಿಂದ ಹಾನಿಗೊಳಗಾಗಿರುವ ಗ್ರಾಮಗಳಿಗೆ ಆರೋಗ್ಯ ಅಧಿಕಾರಿಗಳು ಬರುವಂತೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಶಿವಮೊಗ್ಗ ದುರಂತಕ್ಕೆ ಇನ್ನೊಂದು ಟ್ವಿಸ್ಟ್; ಸ್ಫೋಟಕ ಸಾಗಿಸಿದ್ದ ಇನ್ನೂ ಒಂದು ವಾಹನದ ಚಾಲಕ ನಾಪತ್ತೆ!