ಕೆಲವೇ ವಾರಗಳಲ್ಲಿ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ? ಸಿದ್ಧತೆಯಲ್ಲಿ ಸರ್ಕಾರ ಸನ್ನದ್ಧ

ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಮಾರುಕಟ್ಟೆಗೆ ಬರಲಿದೆ. ಇದನ್ನ ವಿತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

ಕೆಲವೇ ವಾರಗಳಲ್ಲಿ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ? ಸಿದ್ಧತೆಯಲ್ಲಿ ಸರ್ಕಾರ ಸನ್ನದ್ಧ
ಕೊರೊನಾ ವ್ಯಾಕ್ಸಿನ್

Updated on: Nov 25, 2020 | 7:00 AM

ಇಡೀ ವಿಶ್ವಕ್ಕೆ ಮಾರಕವಾಗಿರೋ ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಹಲವು ದೇಶಗಳು ಶತ ಪ್ರಯತ್ನ ಮಾಡ್ತಿವೆ. ಇದರಲ್ಲಿ ಕೆಲವರು ಭಾಗಶಃ ಯಶಸ್ಸನ್ನ ಕಂಡಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಮಾರುಕಟ್ಟೆಗೆ ಬರಲಿದೆ. ಇದನ್ನ ವಿತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

ಇನ್ನೇನು ನಾಲ್ಕರಿಂದ ಆರು ವಾರದೊಳಗೆ ಕೊರೊನಾಗೆ ಲಸಿಕೆ ಬರುತ್ತೆ. ಅದನ್ನ ಹಂಚೋಕೆ ಸಕಲ ಸಿದ್ಧತೆ ಮಾಡಿಕೊಳ್ಳಿ ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೂ ಸಿದ್ಧತೆ ಮಾಡಿಕೊಂಡಿದೆ. ಮಹಾಮಾರಿ ಕೊರೊನಾಗೆ ಲಸಿಕೆ ಮಾರುಕಟ್ಟೆಗೆ ಬಂದ ತಕ್ಷಣ ಅದನ್ನ ಹಂಚಲು ನಾವು ಸಿದ್ಧರಿದ್ದೇವೆ ಅಂತಾ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ದೇಶದ ಮೂಲೆ ಮೂಲೆಗೆ ಲಸಿಕೆ ತಲುಪಿಸಲು ಸರ್ಕಾರದ ಸಿದ್ಧತೆ!
ಕೋವಿಡ್ ‌ಲಸಿಕೆ ವಿತರಣೆಗೆ ಸಜ್ಜಾಗುತ್ತಿರುವ ಕೇಂದ್ರ ಸರ್ಕಾರ, ರಾಜ್ಯಗಳಲ್ಲಿ ಲಸಿಕೆ ವಿತರಣೆಗೆ ಆಗಿರುವ ಪೂರ್ವ ಸಿದ್ಧತೆಗಳ‌ ಪರಿಶೀಲನೆಯಲ್ಲಿ ತೊಡಗಿದೆ. ಇದರ ಭಾಗವಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ, ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ರು. ಸಂವಾದದ ವೇಳೆ ಪ್ರಧಾನಿ ಮೋದಿ ಎಲ್ಲ ರಾಜ್ಯಗಳಿಗೂ ಸರ್ವ ಸನ್ನದ್ಧರಾಗಿರುವಂತೆ ಹೇಳಿದ್ರು. ಅಷ್ಟೇ ಅಲ್ಲ ವ್ಯಾಕ್ಸಿನ್ ಬಗ್ಗೆ ಇನ್ನೂ ಪೂರ್ಣ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ವ್ಯಾಕ್ಸಿನ್ ಬರೋವರೆಗೂ ಹೋರಾಡಲೇಬೇಕು ಅಂದ್ರು.

ವ್ಯಾಕ್ಸಿನ್ ಬಂದ್ರೆ ಎರಡು ಡೋಸ್ ಕೊಡಬೇಕಾ, ಒಂದು ಡೋಸ್ ಕೊಡಬೇಕಾ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಇದೂ ಕೂಡಾ ನಿರ್ಧಾರವಾಗಿ ವ್ಯಾಕ್ಸಿನ್ ದರ ಎಷ್ಟಾಗುತ್ತೆ ಅನ್ನೋದು ಗೊತ್ತಿಲ್ಲ. ಎಲ್ಲ ಪ್ರಶ್ನೆಗಳಿಗೆ ನಮ್ಮ ಬಳಿ ಇನ್ನೂ ಉತ್ತರ ಇಲ್ಲ. ನಾವು ಭಾರತೀಯ ಸಂಶೋಧಕರ ಜೊತೆ ಹಾಗೂ ಲಸಿಕೆ ತಯಾರಕರ ಜೊತೆ ಸಂಪರ್ಕದಲ್ಲಿದ್ದೇವೆ.

ಹೀಗೆ ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದ ಪ್ರಧಾನಿ, ಎಲ್ಲ ರಾಜ್ಯದ ಸಿಎಂಗಳಿಗೆ ಹೇಳಿದ್ದೇನು. ರಾಜ್ಯಗಳು ಹೇಗೆ ತಯಾರಿ ನಡೆಸಬೇಕು ಅಂತಾ ಮೋದಿ ಹೇಳಿದ್ರು.

ಸಿಎಂಗಳಿಗೆ ಪಿಎಂ ಹೇಳಿದ್ದೇನು?
ಅಂದಹಾಗೆ ನಿನ್ನೆಯ ಸಭೆಯಲ್ಲಿ ಪ್ರಧಾನಿ ಮೋದಿ ಕೊರೊನಾ ಲಸಿಕೆ ಬರೋವರೆಗೂ ನಿರ್ಲಕ್ಷ್ಯ ಬೇಡವೇ ಬೇಡ ಎಂದಿದ್ದಾರೆ. ಯಾಕಂದ್ರೆ ಯಾವುದೇ ಸಂದರ್ಭದಲ್ಲಿ ಕೊರೊನಾ ಲಸಿಕೆ ಬಳಕೆಗೆ ಸಿಗಬಹುದು. ಹೀಗಾಗಿ ವ್ಯಾಕ್ಸಿನ್ ಹಂಚಿಕೆ ಕುರಿತು ನಿಮ್ಮ ತಯಾರಿ ಹೇಗಿದೆ ಅನ್ನೋದ್ರ ವರದಿಯನ್ನ ಕೇಂದ್ರಕ್ಕೆ ಕಳುಹಿಸಿ. ಬಳಿಕ ಕೇಂದ್ರ ಹಾಗೂ ರಾಜ್ಯಗಳೆರಡೂ ಸೇರಿಕೊಂಡು ಒಟ್ಟಿಗೆ ಮತ್ತೊಂದು ಸುತ್ತಿನ ತಯಾರಿ ಮಾಡೋಣ.. ಲಸಿಕೆ ವಿತರಣೆಗೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಳ್ಳೋಣ ಎಂದಿದ್ದಾರೆ. ಅಷ್ಟೇ ಅಲ್ಲ ಎಲ್ಲ ರಾಜ್ಯಗಳು ಈಗಿನಿಂದ್ಲೇ ಕೋಲ್ಡ್ ಸ್ಟೋರೇಜ್​ಗಳನ್ನ ಸಿದ್ಧಗೊಳಿಸಬೇಕು ಅಂತಲೂ ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ನಡೆಸಿರೋ ಸಭೆಯನ್ನ ನೋಡಿದ್ರೆ, ಕೊರೊನಾ ಲಸಿಕೆ ಮಾರುಕಟ್ಟೆಗೆ ಬಂದಾಕ್ಷಣ ಅದನ್ನ ದೇಶವಾಸಿಗಳಿಗೆ ತಲುಪಿಸಬೇಕು ಅನ್ನೋ ತುಡಿತ ಕಾಣಿಸುತ್ತಿದೆ. ಹೀಗಾಗಿ ಕೊರೊನಾ ಲಸಿಕೆ ಮಾರುಕಟ್ಟೆಗೆ ಬಂದ್ರೆ ಅದು ದೇಶದ ಜನರಿಗೆ ಅತ್ಯಂತ ಶೀಘ್ರವಾಗಿ ತಲುಪಲಿದೆ ಅನ್ನೋ ಆಶಾಕಿರಣ ಮೂಡಿದೆ.

ಇದನ್ನೂ ಓದಿ: ಕೊರೊನಾ ನಿರ್ಲಕ್ಷ್ಯ ಬೇಡ, ವೈರಸ್​ ಎದುರಿಸಲು ಸರ್ವಸನ್ನದ್ಧವಾಗಿರಿ: ಪ್ರಧಾನಿ ಮೋದಿ ಕರೆ

Published On - 6:58 am, Wed, 25 November 20