ಕ್ರಿಸ್ಮಸ್, ನ್ಯೂ ಇಯರ್ ಆಚರಣೆ ಮಾರ್ಗಸೂಚಿ: ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ
ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದೆ. ಸರ್ಕಾರ ನೀಡಿರುವ ಮಾರ್ಗಸೂಚಿಯ ವಿವರ ಇಲ್ಲಿದೆ.
ಬೆಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದೆ. ಸರ್ಕಾರ ನೀಡಿರುವ ಮಾರ್ಗಸೂಚಿಯ ವಿವರ ಇಲ್ಲಿದೆ.
1. ಚರ್ಚ್ಗಳಲ್ಲಿ ಒಮ್ಮೆಯೇ 10ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ 2.ಆಯೋಜಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು 3. ಹಬ್ಬದ ಆಚರಣೆ ವೇಳೆ ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ 4. ಡಿ.30ರಿಂದ ಜನವರಿ 2ರವರೆಗೆ ಹೆಚ್ಚು ಜನ ಸೇರುವಂತಿಲ್ಲ 5. ಕ್ಲಬ್, ಪಬ್, ರೆಸ್ಟೋರೆಂಟ್ನಲ್ಲಿ ಹೆಚ್ಚು ಜನ ಸೇರುವಂತಿಲ್ಲ 6. ವಿಶೇಷ ಯೋಜಿತ ಒಟ್ಟುಗೂಡುವಿಕೆಗೆ ಅವಕಾಶ ಇಲ್ಲ 7. ವಿಶೇಷ ಡಿಜೆ, ಡ್ಯಾನ್ಸ್, ವಿಶೇಷ ಪಾರ್ಟಿ ನಡೆಸುವಂತಿಲ್ಲ 8. ಕ್ಲಬ್, ಪಬ್, ರೆಸ್ಟೋರೆಂಟ್ ತೆರೆಯಲು ನಿರ್ಬಂಧವಿಲ್ಲ 9. ಆಯ್ದ ರಸ್ತೆ, ಸ್ಥಳಗಳಿಗೆ ಸ್ಥಳೀಯ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧ ವಿಧಿಸಬಹುದು 10. 65 ವರ್ಷದ ಮೇಲ್ಪಟ್ಟ ಹಿರಿಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಇರಬೇಕು 11. ಸಾರ್ವಜನಿಕ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಕಡ್ಡಾಯ 12. ಸಂಭ್ರಮಾಚರಣೆ ವೇಳೆ ಹಸಿರು ಪಟಾಕಿ ಮಾತ್ರ ಹಚ್ಚಬೇಕು