ಮೈಸೂರಿನ ವೃದ್ದೆ ನಾಪತ್ತೆ; ಚಿರತೆ ಹೊತ್ತೊಯ್ದಿರುವ ಶಂಕೆ

|

Updated on: Apr 18, 2021 | 3:44 PM

ಈ ಹಿಂದೆ ಮೈಸೂರು ಜಿಲ್ಲೆಯ ಕಡಕೊಳದ ಬೀರೇಗೌಡನ ಹುಂಡಿಯ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಬಿದ್ದಿತ್ತು. ಬೋನಿಗೆ ಬೀಳುವ 25 ದಿನದ ಹಿಂದೆ ಜಮೀನಿನಲ್ಲಿ ಹುಲ್ಲು ತರಲು ಹೋಗಿದ್ದ ಸಂದರ್ಭದಲ್ಲಿ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿತ್ತು.

ಮೈಸೂರಿನ ವೃದ್ದೆ ನಾಪತ್ತೆ; ಚಿರತೆ ಹೊತ್ತೊಯ್ದಿರುವ ಶಂಕೆ
ಚಿರತೆ ( ಪ್ರಾತಿನಿಧಿಕ ಚಿತ್ರ)
Follow us on

ಮೈಸೂರು: ಮೈಸೂರಿನ ಉತ್ತನಹಳ್ಳಿ ವೃದ್ದೆ ನಾಪತ್ತೆಯಾಗಿದ್ದು, ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ಮೊನ್ನೆಯಿಂದ ನಾಪತ್ತೆಯಾಗಿರುವ ವೃದ್ದೆ ಕುರಿ ಮೇಯಿಸಲು ಹೋಗಿದ್ದವರು ಮನೆಗೆ ವಾಪಸ್ಸಾಗಿಲ್ಲ. ಸದ್ಯ ನಾಪತ್ತೆಯಾದ ಮಹಿಳೆಯನ್ನು ಗ್ರಾಮಸ್ಥರು ಹುಡುಕುತ್ತಿದ್ದಾರೆ. ಉತ್ತನಹಳ್ಳಿಯ ಆಡಿನ ತೋಟದ ಬಳಿ ಕುರಿ ಮೇಯಿಸಲು ವೃದ್ದೆ ಹೋಗಿದ್ದರು. ಆದರೆ ಈವರೆಗೂ ವೃದ್ದೆ ಪತ್ತೆಯಾಗಿಲ್ಲ. ಈ ಹಿಂದೆ ಗ್ರಾಮದಲ್ಲಿ ಚಿರತೆ ಕಾಟ ಜೋರಾಗಿದ್ದು, ಒಂದು ಚಿರತೆ ಸೆರೆ ಹಿಡಿಯಲಾಗಿತ್ತು. ಇದರಿಂದ ನಾಪತ್ತೆಯಾಗಿರುವ ವೃದ್ದೆಯನ್ನು ಚಿರತೆ ಹೊತ್ತೊಯ್ದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಹಿಂದೆ ಮೈಸೂರು ಜಿಲ್ಲೆಯ ಕಡಕೊಳದ ಬೀರೇಗೌಡನ ಹುಂಡಿಯ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಬಿದ್ದಿತ್ತು. ಬೋನಿಗೆ ಬೀಳುವ 25 ದಿನದ ಹಿಂದೆ ಜಮೀನಿನಲ್ಲಿ ಹುಲ್ಲು ತರಲು ಹೋಗಿದ್ದ ಸಂದರ್ಭದಲ್ಲಿ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿತ್ತು. ಅಂದಿನಿಂದ ಜಮೀನಿನಲ್ಲಿ ಎರಡು ಬೋನನ್ನು ಇರಿಸಲಾಗಿತ್ತು. ನಂತರ ಇರಿಸಲಾಗಿದ್ದ ಬೋನಿಗೆ ಚಿರತೆ ಬಿದ್ದಿತ್ತು.

ಕರ್ನಾಟಕ ವಿವಿ ಬಳಿ ಆನೆ ಪ್ರತ್ಯಕ್ಷ
ರಾಜ್ಯದಲ್ಲಿ ಈ ಬಾರಿ ಆನೆಗಳ ಕಾಟ ಹೆಚ್ಚಾಗಿದೆ.  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ಇಂದು ಬೆಳಿಗ್ಗೆ ಆನೆ ಪ್ರತ್ಯಕ್ಷವಾಗಿದೆ. ಮೊದಲ ಬಾರಿಗೆ ವಿವಿ ಆವರಣದಲ್ಲಿ ಆನೆ ಪ್ರತ್ಯಕ್ಷವಾಗಿದೆ. ಕಾಡಾನೆ ಕಂಡು ಕರ್ನಾಟಕ ವಿವಿ ಸಿಬ್ಬಂದಿಗೆ ಆತಂಕ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸಲು ಯೋಜನೆ ರೂಪಿಸಿದ್ದಾರೆ.

ವಿವಿ ಆವರಣದಲ್ಲಿ ಪ್ರತ್ಯಕ್ಷವಾದ ಆನೆ

ಇದನ್ನೂ ಓದಿ

ಬನ್ನೇರುಘಟ್ಟ ಸಮೀಪದಲ್ಲಿ ಕಾಣಿಸಿಕೊಂಡ ಮೊಸಳೆ; ಸೆರೆ ಹಿಡಿದ ಜೈವಿಕ ಉದ್ಯಾನವನ ಸಿಬ್ಬಂದಿ

ದಾವಣಗೆರೆಯಲ್ಲಿ ಶವಸಂಸ್ಕಾರ ವೇಳೆ ಹೆಜ್ಜೇನು ದಾಳಿ: 15ಕ್ಕೂ ಹೆಚ್ಚು ಜನ ಅಸ್ವಸ್ಥ