ದಾವಣಗೆರೆಯಲ್ಲಿ ಶವಸಂಸ್ಕಾರ ವೇಳೆ ಹೆಜ್ಜೇನು ದಾಳಿ: 15ಕ್ಕೂ ಹೆಚ್ಚು ಜನ ಅಸ್ವಸ್ಥ

ಶವಸಂಸ್ಕಾರಕ್ಕೆಂದು ಮರದ ಅಡಿ ಹೊಗೆ ಹಾಕಿದ್ದಾರೆ. ಆ ವೇಳೆ, ಮರದ ಮೇಲೆ ಗೂಡು ಕಟ್ಟಿದ್ದ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದೆ. ದಾವಣಗೆರೆಯ ಗುಮ್ಮನೂರ ಗ್ರಾಮದಲ್ಲಿ ಶವಸಂಸ್ಕಾರ ವೇಳೆ ದುರ್ಘಟನೆ ಸಂಭವಿಸಿದೆ.

ದಾವಣಗೆರೆಯಲ್ಲಿ ಶವಸಂಸ್ಕಾರ ವೇಳೆ ಹೆಜ್ಜೇನು ದಾಳಿ: 15ಕ್ಕೂ ಹೆಚ್ಚು ಜನ ಅಸ್ವಸ್ಥ
ಅಸ್ವಸ್ಥರಾದವರಿಗೆ ಚಿಕಿತ್ಸೆ ಕೊಡಿಸಲಾಗಿದೆ
Follow us
TV9 Web
| Updated By: ganapathi bhat

Updated on:Apr 05, 2022 | 12:57 PM

ದಾವಣಗೆರೆ: ಶವಸಂಸ್ಕಾರದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ 15ಕ್ಕೂ ಹೆಚ್ಚು ಜನರು ಅಸ್ವಸ್ಥವಾದ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ನಡೆದಿದೆ. ಘಟನೆ ಪರಿಣಾಮ ಐದು ಜನ ಮಹಿಳೆಯರು ಸಹಿತ ಒಟ್ಟು ಹತ್ತು ಜನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶವಸಂಸ್ಕಾರಕ್ಕೆಂದು ಮರದ ಅಡಿ ಹೊಗೆ ಹಾಕಿದ್ದಾರೆ. ಆ ವೇಳೆ, ಮರದ ಮೇಲೆ ಗೂಡು ಕಟ್ಟಿದ್ದ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದೆ. ದಾವಣಗೆರೆಯ ಗುಮ್ಮನೂರ ಗ್ರಾಮದಲ್ಲಿ ಶವಸಂಸ್ಕಾರ ವೇಳೆ ದುರ್ಘಟನೆ ಸಂಭವಿಸಿದ್ದು, ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡದಿಂದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಕಸ್ಮಿಕ ಬೆಂಕಿಯಿಂದ 10ಕ್ಕೂ ಹೆಚ್ಚು ಬಣವೆಗಳು ಸುಟ್ಟುಭಸ್ಮ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸನಾಳ್ ಗ್ರಾಮದಲ್ಲಿ 10ಕ್ಕೂ ಹೆಚ್ಚು ಬಣವೆಗಳು ಸುಟ್ಟುಭಸ್ಮವಾಗಿರುವ ಘಟನೆ ಇಂದು (ಏಪ್ರಿಲ್ 2) ಸಂಭವಿಸಿದೆ. 6ಕ್ಕೂ ಹೆಚ್ಚು ರೈತರಿಗೆ ಸೇರಿದ ಬಣವೆಗಳು ಬೆಂಕಿಗಾಹುತಿಯಾಗಿದೆ. ವಿದ್ಯುತ್ ಕಂಬದಿಂದ ಬೆಂಕಿ ಸಿಡಿದು ಅಗ್ನಿ ಆಕಸ್ಮಿಕ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಹರಸಾಹಸಪಟ್ಟಿದ್ದಾರೆ. ಆಕಸ್ಮಿಕ ದುರ್ಘಟನೆಯಿಂದ ಹತ್ತಕ್ಕೂ ಹೆಚ್ಚು ಬಣವೆಗಳು ಬೆಂಕಿಗೆ ಆಹುತಿಯಾಗಿದೆ.

DAVANAGERE FIRE BANAVE

ಬೆಂಕಿಗಾಹುತಿ ಆಗಿರುವ ಬಣವೆ

DAVANAGERE FIRE

ಬೆಂಕಿ ನಂದಿಸಲು ಪ್ರಯತ್ನ

ಜಾನುವಾರು ಮೇವು ಸಂಪೂರ್ಣ ನಾಶವಾಗಿದ್ದು, ರೈತರಿಗೆ ಪರಿಹಾರ ನೀಡುವಂತೆ ಅರಸನಾಳ್ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(Honey attack at Davanagere during Funeral More than 15 people falls ill)

ಇದನ್ನೂ ಓದಿ: ಪುತ್ರನ ಮೇಲೆ ಎಫ್​ಐಆರ್ ದಾಖಲು: ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್​ರಿಂದ ಸಹೋದರ ಶಿವಾಜಿ ನಾಯ್ಕ್ ಮೇಲೆ ಹಲ್ಲೆ

ದಾವಣಗೆರೆ ಕಾಶೀಪುರ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 8 ಜಿಲೆಟಿನ್ ಕಡ್ಡಿ, ಎಲೆಕ್ಟ್ರಾನಿಕ್ ಡಿಟೋನೇಟರ್ ವಶ

Published On - 10:47 pm, Fri, 2 April 21