AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರನ ಮೇಲೆ ಎಫ್​ಐಆರ್ ದಾಖಲು: ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್​ರಿಂದ ಸಹೋದರ ಶಿವಾಜಿ ನಾಯ್ಕ್ ಮೇಲೆ ಹಲ್ಲೆ

ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರ ಭರತ್ ನಾಯ್ಕ್ ತಮ್ಮ ಚಿಕ್ಕಪ್ಪ ಶಿವಾಜಿ ನಾಯ್ಕ್ ಜೊತೆಗೆ ಗ್ರಾಮ ಪಂಚಾಯತಿ ವಿಚಾರವಾಗಿ ಜಗಳ ಆಡಿಕೊಂಡಿದ್ದರು.

ಪುತ್ರನ ಮೇಲೆ ಎಫ್​ಐಆರ್ ದಾಖಲು: ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್​ರಿಂದ ಸಹೋದರ ಶಿವಾಜಿ ನಾಯ್ಕ್ ಮೇಲೆ ಹಲ್ಲೆ
ಪಿ.ಟಿ. ಪರಮೇಶ್ವರ್ ನಾಯ್ಕ್ ಹಾಗೂ ಭರತ್ ನಾಯ್ಕ್
TV9 Web
| Edited By: |

Updated on:Apr 05, 2022 | 12:57 PM

Share

ದಾವಣಗೆರೆ: ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್, ಪುತ್ರ ಭರತ್ ನಾಯ್ಕ್ ಜೊತೆಗೂಡಿ ಸಹೋದರ ಶಿವಾಜಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ಪುತ್ರನ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿರುವುದಕ್ಕೆ ಪರಮೇಶ್ವರ್ ನಾಯ್ಕ್ ಶಿವಾಜಿ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರ ಭರತ್ ನಾಯ್ಕ್ ತಮ್ಮ ಚಿಕ್ಕಪ್ಪ ಶಿವಾಜಿ ನಾಯ್ಕ್ ಜೊತೆಗೆ ಗ್ರಾಮ ಪಂಚಾಯತಿ ವಿಚಾರವಾಗಿ ಜಗಳ ಆಡಿಕೊಂಡಿದ್ದರು. ಹೂವಿನಹಡಗಲಿ ಕ್ಷೇತ್ರದ ಕೈ ಪಕ್ಷದ ಶಾಸಕರ ಪುತ್ರ ಹಾಗೂ ಚಿಕ್ಕಪ್ಪ ನಡುವಿನ ಗಲಾಟೆ ಹಿನ್ನೆಲೆಯಲ್ಲಿ ಪೊಲೀಸರು ಭರತ್ ನಾಯ್ಕ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದರು.

ಅರಸೀಕೆರೆ ಠಾಣೆಯಲ್ಲಿ ಭರತ್ ನಾಯ್ಕ್ ವಿರುದ್ಧ ಎಫ್​ಐಆರ್ ದಾಖಲು ಮಾಡಿದಕ್ಕೆ ಪರಮೇಶ್ವರ ನಾಯ್ಕ್, ಪುತ್ರನೊಂದಿಗೆ ಸೇರಿ ಸೋದರನ ಮೇಲೆ ಮಾಜಿ ಸಚಿವರು ಹಲ್ಲೆ ನಡೆಸಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರತಾಂಡಾದಲ್ಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಹಲ್ಲೆ ನಡೆಸಿದ್ದಾರೆ.

ಕೊರೊನಾ ನಿಯಮಾವಳಿ ಪಾಲಿಸದೆ ನಡೆದ ಮಗನ ಮದುವೆಯೂ ಸಮಸ್ಯೆ ತಂದೊಡ್ಡಿತ್ತು ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಮಗನ ಮದುವೆ ಸಮಾರಂಭದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್​ ಧರಿಸದೇ ಸಾವಿರಾರು ಮಂದಿ ಭಾಗಿಯಾಗಿದ್ದರು. ಹೀಗಾಗಿ ಹರಪನಹಳ್ಳಿಯ ತಹಶೀಲ್ದಾರ್ ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಅಸಮರ್ಪಕ ದೂರು ಹಿನ್ನೆಲೆಯಲ್ಲಿ ಪೊಲೀಸರು ಎಫ್​ಐಆರ್ ದಾಖಲಿಸಿರಲಿಲ್ಲ.

ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನೇರವಾಗಿ ಪೊಲೀಸ್ ಠಾಣೆಗೆ ದೂರು ಕೊಡಲು ಬರುವುದಿಲ್ಲ. ಕೋರ್ಟ್ ಮೂಲಕ ದೂರು ಸಲ್ಲಿಸಲು ಪೊಲೀಸರು ಸೂಚಿಸಿದ್ದರು. ಈ ಬಗ್ಗೆ ಕಂದಾಯ ಅಧಿಕಾರಿಗಳು ಕೋರ್ಟ್‌ಗೆ ದೂರು ಸಲ್ಲಿಸಿದರೆ, ಕೋರ್ಟ್‌ನಿಂದಲೇ ಆರೋಪಿಗಳಿಗೆ ನೋಟಿಸ್ ನೀಡಲಾಗುತ್ತೆ.

1 ತಿಂಗಳೊಳಗೆ ನೋಟಿಸ್‌ಗೆ ಉತ್ತರ ನೀಡುವುದಕ್ಕೆ ಅವಕಾಶ ನೀಡಲಾಗುತ್ತೆ. ಪ್ರಕರಣ ಸಂಬಂಧ ಕೋರ್ಟ್‌ಗೆ ಸಾಕ್ಷ್ಯಾಧಾರಗಳು ಸಿಗದಿದ್ದರೆ. ಪೊಲೀಸ್ ತನಿಖೆಗೆ ಆದೇಶ ನೀಡುವ ಸಾಧ್ಯತೆ ಇರುತ್ತದೆ. ಆದರೆ ತಹಶೀಲ್ದಾರ್ ನೇರವಾಗಿ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಅರಸೀಕೆರೆ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಆದರೆ ಸೆಕ್ಷನ್ 269ರ ಅಡಿ ಪ್ರಕರಣ ದಾಖಲಿಸಬಹುದಿತ್ತು. ಆದ್ರೆ ಕೇಸ್ ದಾಖಲಾಗಿರಲಿಲ್ಲ.

ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಮಗನ ಮದುವೆಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿತ್ತು. ಮದುವೆಯಲ್ಲಿ ನೂರಾರು ಜನರು ಭಾಗಿಯಾಗಿದ್ರು. ಮಾಸ್ಕ್‌ ಧರಿಸದೆ, ವೈಯಕ್ತಿಕ ಅಂತರ ಕಾಪಾಡದೆ ನಿರ್ಲಕ್ಷ್ಯವಹಿಸಲಾಗಿತ್ತು. ಸಚಿವ ಶ್ರೀರಾಮುಲು ಸೇರಿ ಹಲವು ಸಚಿವರು ಮದುವೆಯಲ್ಲಿ ಭಾಗಿಯಾಗಿದ್ದರು.

(Congress MLA PT Parameshwar Naik assaulted his brother Shivaji Naik at Davanagere)

ಇದನ್ನೂ ಓದಿ: ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು

ಪ್ರಿಯತಮೆಗೆ ಬಟ್ಟೆ ಕೊಡಿಸುತ್ತಿದ್ದ ಪತಿಗೆ ಎಲ್ಲರೆದುರೂ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಗಲಾಟೆ ಮಧ್ಯೆ ಲವರ್​ ಸೈಲೆಂಟ್ ಎಸ್ಕೇಪ್​

Published On - 10:26 pm, Fri, 2 April 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?