Karnataka Covid-19 Update: ಕರ್ನಾಟಕದಲ್ಲಿ ಇಂದು ಹೊಸದಾಗಿ 4,991 ಜನರಿಗೆ ಕೊರೊನಾ ದೃಢ

ಬೆಂಗಳೂರನ್ನು ಕೊರೊನಾ ಪ್ರಕರಣಗಳು ತೀವ್ರವಾಗಿ ಬಾಧಿಸುತ್ತಿದೆ. ಬೆಂಗಳೂರಲ್ಲಿ ಇಂದು ಒಂದೇ ದಿನ 3,509 ಜನರಿಗೆ ಸೋಂಕು ದೃಢಪಟ್ಟಿದೆ.

  • TV9 Web Team
  • Published On - 20:05 PM, 2 Apr 2021
Karnataka Covid-19 Update: ಕರ್ನಾಟಕದಲ್ಲಿ ಇಂದು ಹೊಸದಾಗಿ 4,991 ಜನರಿಗೆ ಕೊರೊನಾ ದೃಢ
ಕೊರೊನಾ ಟೆಸ್ಟ್​

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4,991 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 10,06,229ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಕೊರೊನಾಗೆ 12,591 ಜನರು ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ 9,59,400 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. 34,219 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರನ್ನು ಕೊರೊನಾ ಪ್ರಕರಣಗಳು ತೀವ್ರವಾಗಿ ಬಾಧಿಸುತ್ತಿದೆ. ಬೆಂಗಳೂರಲ್ಲಿ ಇಂದು ಒಂದೇ ದಿನ 3,509 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 4,41,242ಕ್ಕೆ ಏರಿಕೆಯಾಗಿದೆ. 4,41,242 ಸೋಂಕಿತರ ಪೈಕಿ 4,12,006 ಜನರು ಗುಣಮುಖ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಐವರು ಬಲಿಯಾಗಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 4,653ಕ್ಕೆ ಏರಿಕೆಯಾಗಿದೆ. 24,600 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಈ ರೀತಿ ಇದೆ
ಬೆಂಗಳೂರು ನಗರ 3509, ಮೈಸೂರು ಜಿಲ್ಲೆ 174 ಕೇಸ್, ತುಮಕೂರು 142, ಬೀದರ್ 126, ಕಲಬುರಗಿ 105 ಪ್ರಕರಣ, ಹಾಸನ 102, ದಕ್ಷಿಣ ಕನ್ನಡ 105, ಉಡುಪಿ 95 ಪ್ರಕರಣ, ಕೋಲಾರ 74, ಬೆಂಗಳೂರು ಗ್ರಾಮಾಂತರ ಜಿಲ್ಲೆ 69 ಪ್ರಕರಣ, ಧಾರವಾಡ 62, ಮಂಡ್ಯ 58, ಚಿಕ್ಕಮಗಳೂರು 47 ಪ್ರಕರಣ, ಶಿವಮೊಗ್ಗ 37, ಬೆಳಗಾವಿ 35, ಬಳ್ಳಾರಿ 34, ವಿಜಯಪುರ 30, ರಾಯಚೂರು 27, ಉತ್ತರ ಕನ್ನಡ 25, ಚಿತ್ರದುರ್ಗ 22 ಕೇಸ್, ದಾವಣಗೆರೆ 21, ಯಾದಗಿರಿ 18, ಗದಗ ಜಿಲ್ಲೆ 16 ಪ್ರಕರಣ, ಬಾಗಲಕೋಟೆ 13, ಚಾಮರಾಜನಗರ 13, ಚಿಕ್ಕಬಳ್ಳಾಪುರ 10, ಹಾವೇರಿ 8, ಕೊಪ್ಪಳ 6, ರಾಮನಗರ 5 ಹಾಗೂ ಕೊಡಗು ಜಿಲ್ಲೆಯಲ್ಲಿ 3 ಕೊರೊನಾ ಪ್ರಕರಣಗಳು ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಇಂದು 31 ಜನರಿಗೆ ಕೊರೊನಾ ಸೋಂಕು ತಗುಲಿದೆ. 19 ಪುರುಷರಿ, 12 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಹಾವೇರಿ ಜಿಲ್ಲೆಯಲ್ಲಿ ಇಂದು 8 ಜನರಿಗೆ ಕೊರೊನಾ ದೃಢವಾಗಿದೆ. ಹಾನಗಲ್, ಹಾವೇರಿ, ಹಿರೇಕೆರೂರು ತಾಲೂಕಿನಲ್ಲಿ ತಲಾ ಇಬ್ಬರಿಗೆ ಸೋಂಕು ತಗುಲಿದೆ. ಸವಣೂರು, ಶಿಗ್ಗಾಂವಿ ತಾಲೂಕಿನಲ್ಲಿ ತಲಾ 1 ಕೇಸ್​ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 47 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ನಿನ್ನೆ 51 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಮೊನ್ನೆ ಚಿಕ್ಕಮಗಳೂರು ನಗರದ ದಂಪತಿ ಕೊರೊನಾದಿಂದ ಸಾವನ್ನಪ್ಪಿದ್ದರು. ಕೊರೊನಾ 2ನೇ ಅಲೆಗೆ ಕಾಫಿನಾಡಿಗರು ಕಂಗಾಲಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿಂದು 174 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ, ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56,093ಕ್ಕೆ ಏರಿಕೆಯಾಗಿದೆ. 56,093 ಸೋಂಕಿತರ ಪೈಕಿ 54,185 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 1,055 ಜನರ ಸಾವು ಸಂಭವಿಸಿದೆ. 853 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 95 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,389ಕ್ಕೆ ಏರಿಕೆಯಾಗಿದೆ. ಮಣಿಪಾಲ ಎಂಐಟಿ ಕ್ಯಾಂಪಸ್​ನಲ್ಲಿಂದು 22 ಕೇಸ್ ಪತ್ತೆಯಾಗಿದೆ. ಎಂಐಟಿ ಕ್ಯಾಂಪಸ್​ನ ಸೋಂಕಿತರ ಸಂಖ್ಯೆ 1,028ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾಗೆ 192 ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 443 ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನಿಲ್ ಕುಮಾರ್​ಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಸುನಿಲ್​ಗೆ ಜ್ವರ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಶಾಸಕರಿಗೆ ಕೊವಿಡ್-19 ಟೆಸ್ಟ್ ಮಾಡಿಸಲಾಗಿತ್ತು. ಕೊವಿಡ್-19 ಟೆಸ್ಟ್​ ವೇಳೆ ಸೋಂಕು ತಗುಲಿರುವುದು ದೃಢವಾಗಿತ್ತು. ತಮ್ಮ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಟ್ವಿಟ್ಟರ್​ನಲ್ಲಿ ಶಾಸಕ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ತಡೆಗೆ ಹೊಸ ಮಾರ್ಗಸೂಚಿ: ಬಾರ್​, ರೆಸ್ಟೋರೆಂಟ್, ಜಿಮ್, ಸ್ವಿಮ್​ಗೆ ನಿರ್ಬಂಧ

ಇದನ್ನೂ ಓದಿ: ಕೊರೊನಾ ನಡುವೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ