ಕೊರೊನಾ ನಡುವೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ

ಕೊರೊನಾ ಸಮಯದಲ್ಲಿಯೂ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯ ವ್ಯಾಪಾರ ವಹಿವಾಟಿನಲ್ಲಿ ನಿರೀಕ್ಷೆಗೂ ಮೀರಿ ಹಣದ ಹೊಳೆ ಹರಿದು ಬಂದಿದೆ.

ಕೊರೊನಾ ನಡುವೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ
ಸಾಂದರ್ಭಿಕ ಚಿತ್ರ​
Follow us
|

Updated on: Apr 02, 2021 | 12:28 PM

ಬೆಂಗಳೂರು: ದಿನೇ ದಿನೇ ಕೊರೊನಾ ಹಾವಳಿ ಹೆಚ್ಚುತ್ತಿದೆ. ನಿರೀಕ್ಷೆಗೂ ಮೀರಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆಯೂ ರಾಜ್ಯದಲ್ಲಿ ಮದ್ಯ ಭಾರೀ ಪ್ರಮಾಣದಲ್ಲಿ ವ್ಯಾಪಾರ ನಡೆಸುತ್ತಿದ್ದು, ಅಬಕಾರಿ ಇಲಾಖೆ ಕೋಟ್ಯಾನುಕೋಟಿ ಲಾಭ ಗಳಿಸಿಕೊಂಡಿದೆ.

ಮದ್ಯ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಹಣದ ಹೊಳೆ ಹರಿದು ಬಂದಿದೆ. 2020-2021ನೇ ಸಾಲಿನಲ್ಲಿ  ₹ 22,700 ಕೋಟಿ ಆದಾಯ ನಿರೀಕ್ಷಿಸಿದ್ದ ಸರ್ಕಾರ, 2020 ಏಪ್ರಿಲ್​ನಿಂದ 2021 ಮಾರ್ಚ್ ಅಂತ್ಯದವರೆಗೆ ಬರೋಬ್ಬರಿ ₹ 23,131.28 ಕೋಟಿ ಆದಾಯ ಸಂಗ್ರಹಿಸಿದೆ. ಕೊರೊನಾ ಸಮಯದಲ್ಲಿ ನಿರೀಕ್ಷೆಗೂ ಮೀರಿ ₹ 431 ಕೋಟಿ ಹಣ ಸಂಗ್ರಹವಾಗಿದೆ.

2019-2020ನೇ ಸಾಲಿನಲ್ಲಿ ಎಣ್ಣೆಯಿಂದ ₹ 21,583.95 ಕೋಟಿ ಸರ್ಕಾರದ ಬೊಕ್ಕಸಕ್ಕೆ ಬಂದಿತ್ತು. ಕಳೆದ ವರ್ಷಕ್ಕಿಂತ ₹ 1,547.33 ಕೋಟಿ ಹೆಚ್ಚುವರಿ ಆದಾಯ ಈ ಬಾರಿ ಸಂಗ್ರಹವಾಗಿದೆ. 2019-2020ನೇ ಸಾಲಿನಲ್ಲಿ 600.92 ಲಕ್ಷ ಕ್ಯೂಬಿಕ್ ಬಾಕ್ಸ್ ಹಾಟ್ ಡ್ರಿಂಕ್ಸ್ ಹಾಗೂ 289.60 ಕ್ಯೂಬಿಕ್ ಬಾಕ್ಸ್ ಬಿಯರ್ ಬಾಟಲಿಗಳು ವ್ಯಾಪಾರವಾಗಿವೆ. ಕೊವಿಡ್ ನಡುವೆಯೂ 2020-2021ನೇ ಸಾಲಿನಲ್ಲಿ 583.23 ಲಕ್ಷ ಕ್ಯೂಬಿಕ್ ಬಾಕ್ಸ್ & ಹಾಟ್ ಡ್ರಿಂಕ್ಸ್ ಹಾಗೂ 237.82 ಕ್ಯೂಬಿಕ್ ಬಿಯರ್ ಬಾಕ್ಸ್ ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಕಡಿಮೆ ಎಣ್ಣೆ ಮಾರಾಟವಾದರೂ ಆದಾಯದಲ್ಲಿ ನಿರೀಕ್ಷೆಗೂ ಮೀರಿ ಅಬಕಾರಿಗೆ ಲಾಭ ಪಡೆದಿದೆ.

ಕೊರೊನಾ ಹಿನ್ನೆಲೆ ಪಬ್, ಬಾರ್‌ಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಪಬ್, ಬಾರ್‌ಗಳಿಗೆ ಹಾಗೂ ಪಾರ್ಕ್ ಮತ್ತು ಅಪಾರ್ಟ್ಮೆಂಟ್​ಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಥಿಯೇಟರ್‌ಗಳಿಗೆ ಶೇ. 50ರಷ್ಟು ಭರ್ತಿಗೆ ಚಿಂತನೆ ಮಾಡಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಕೊರೊನಾ.. ಇದಕ್ಕೆ ಸರ್ಕಾರವೇ ಕಾರಣನಾ?

Alia Bhatt ನಟಿ ಆಲಿಯಾ ಭಟ್‌ಗೆ ಕೊರೊನಾ ಸೋಂಕು ದೃಢ

(Alcohol trade in Karnataka increased during the time of Corona)