ಪೂರ್ವಯೋಜಿತ ರಾಜಕೀಯ ಷಡ್ಯಂತ್ರ ಎಂದು ನಿರೂಪಿಸಲು ಬಲವಾದ ಸಾಕ್ಷ್ಯದ ಬೇಟೆಯಲ್ಲಿ ರಮೇಶ್ ಜಾರಕಿಹೊಳಿ?
ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸ್ತಿರುವ ರಮೇಶ್ ಜಾರಕಿಹೊಳಿ, ವಕೀಲರ ಸಲಹೆ ಪಡೆಯುತ್ತಿದ್ದು ನಿರೀಕ್ಷಣಾ ಜಾಮೀನು ಪಡೆಯಬೇಕೆ, ಬೇಡವೇ ಎಂದು ಚರ್ಚೆ ನಡೆಸಿದ್ದಾರೆ. ಹೇಗಾದರೂ ಮಾಡಿ ಬಲವಾದ ಸಾಕ್ಷಿ ಕಲೆಹಾಕುವ ಮೂಲಕ ಈ ಸಿಡಿ ರಾಜಕೀಯ ಷಡ್ಯಂತ್ರದ ಪ್ರತಿಫಲ ಎಂದು ತೋರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸದ್ಯ ಗೋಕಾಕ್ನಲ್ಲಿದ್ದಾರೆ ಹಾಗೂ ವಿಚಾರಣೆಗೆ ಹಾಜರಾಗದೆ ಕೆಲ ದಿನಗಳ ಕಾಲಾವಕಾಶ ಕೋರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬಹುಮುಖ್ಯವಾಗಿ ಬಲವಾದ ಸಾಕ್ಷಿಯನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವ ರಮೇಶ್ ಜಾರಕಿಹೊಳಿ ಇದು ಒಂದು ರಾಜಕೀಯ ಷಡ್ಯಂತ್ರವೆಂದು ನಿರೂಪಿಸುವ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸ್ತಿರುವ ರಮೇಶ್ ಜಾರಕಿಹೊಳಿ, ವಕೀಲರ ಸಲಹೆ ಪಡೆಯುತ್ತಿದ್ದು ನಿರೀಕ್ಷಣಾ ಜಾಮೀನು ಪಡೆಯಬೇಕೆ, ಬೇಡವೇ ಎಂದು ಚರ್ಚೆ ನಡೆಸಿದ್ದಾರೆ. ಕಾದುನೋಡುವ ತಂತ್ರದ ಮೊರೆಹೋಗಿರುವ ಅವರು ಹೇಗಾದರೂ ಮಾಡಿ ಬಲವಾದ ಸಾಕ್ಷಿ ಕಲೆಹಾಕುವ ಮೂಲಕ ಸಿಡಿ ರಾಜಕೀಯ ಷಡ್ಯಂತ್ರದ ಪ್ರತಿಫಲ ಎಂದು ತೋರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿಯೇ ಅಜ್ಞಾತ ಸ್ಥಳದಲ್ಲೇ ಇದ್ದು ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿಯಿಂದಲೂ ಸಲಹೆ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿಡಿ ಬಿಡುಗಡೆಯಾದ ಸಂದರ್ಭದಿಂದಲೂ ಇದು ನಕಲಿ ಸಿಡಿ, ಸಿಡಿಯಲ್ಲಿರುವುದು ನಾನಲ್ಲ, ಆ ಯುವತಿ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಇದು ರಾಜಕೀಯ ಷಡ್ಯಂತ್ರ ಎನ್ನುವುದನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಈ ವಿಚಾರದಲ್ಲಿ ಕೆಲ ಸ್ವಪಕ್ಷೀಯ ನಾಯಕರೂ ರಮೇಶ್ ಜಾರಕಿಹೊಳಿ ಪರ ಬಹಿರಂಗ ಹೇಳಿಕೆ ನೀಡಿದ್ದು, ಅವರು ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂದು ಹೇಳಿದ್ದಾರೆ.
ಸದ್ಯದ ಬೆಳವಣಿಗೆಯಲ್ಲಿ ಶತಾಯುಗತಾಯ ಇದು ರಾಜಕೀಯ ಷಡ್ಯಂತ್ರ, ಪೂರ್ವಯೋಜಿತ ಕೃತ್ಯ ಎಂದು ನಿರೂಪಿಸಲು ಕಾಯುತ್ತಿರುವ ರಮೇಶ್ ಜಾರಕಿಹೊಳಿ ಇನ್ನೂ ಕೆಲ ದಿನಗಳ ಕಾಲ ಹೀಗೆಯೇ ಕಾದು ಕುಳಿತು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಅಂತ್ಯವಾಗಿ ಬಂಧಿಸದಿದ್ದರೆ ಆಗ ಪ್ರಶ್ನಿಸಿ -ಡಿಜಿಪಿ ಪ್ರವೀಣ್ ಸೂದ್
Published On - 6:10 pm, Fri, 2 April 21