ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್​ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ

ಎಲ್ಲಾ ಸಂಕಷ್ಟಗಳು ದೂರವಾಗುವಂತೆ ಸಚಿವ ರಮೇಶ್​ ಜಾರಕಿಹೊಳಿ ಕೊಲ್ಲಾಪುರ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್​ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ಐಟಿ ತನಿಖೆ ಬಹುತೇಕ ಮುಕ್ತಾಯ: ಬಿ ರಿಪೋರ್ಟ್ ಯಾರ ಪರವಾಗಿ?
Follow us
shruti hegde
| Updated By: ಸಾಧು ಶ್ರೀನಾಥ್​

Updated on: Mar 31, 2021 | 11:15 AM

ಬೆಳಗಾವಿ: ರಾಜ್ಯದಲ್ಲಿ ವಿಪರೀತ ಸುದ್ದಿ ಮಾಡುತ್ತಿರುವ ಸಚಿವ ರಮೇಶ್​ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆಯ ಬೆನ್ನಲ್ಲೇ ಸಚಿವ ರಮೇಶ್​ ಜಾರಕಿಹೊಳಿ ಅವರಿಗೆ ಬಂಧನ ಭೀತಿ ಕಾಡುತ್ತಿದೆ. ತನಿಖೆಯಲ್ಲಿ ಒಂದೊಂದೇ ರಹಸ್ಯಗಳು ಬಯಲಾಗುತ್ತಿದ್ದಂತೆಯೇ ಯಾವಾಗ ಬೇಕಾದರೂ ಬಂಧನಕ್ಕೆ ಒಳಗಾಗಬಹುದು ಅನ್ನುವಷ್ಟರ ಮಟ್ಟಿಗೆ ಸಂಗತಿ ಮುನ್ನಡೆಯುತ್ತಿದೆ. ಯುವತಿ ಹೇಳಿಕೆ ಜತೆಗೆ ಯುವತಿ ಮೆಡಿಕಲ್ ಟೆಸ್ಟ್ ಮಾಡಿದ್ರೆ ರಮೇಶ್​ ಜಾರಕಿಹೊಳಿ ಅವರಿಗೂ ಮೆಡಿಕಲ್ ಟೆಸ್ಟ್ ಮಾಡುವ ಸಾಧ್ಯತೆ ಇದೆ. ಎಸ್ಐಟಿ ಅಧಿಕಾರಿಗಳು ನಾಳೆ ಯುವತಿ ವಿಚಾರಣೆ ನಡೆಸಿ ತುರ್ತಾಗಿ ರಮೇಶ್​ ಜಾರಕಿಹೊಳಿ ಅವರಿಗೂ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

ಬಂಧನ ಭೀತಿಯಿಂದ ಕಾಪಾಡುವಂತೆ ಇದೀಗ ರಮೇಶ್​ ಜಾರಕಿಹೊಳಿ ದೇವರ ಮೊರೆ ಹೋಗಿದ್ದಾರೆ. ಎಲ್ಲಾ ಸಂಕಷ್ಟಗಳು ದೂರವಾಗುವಂತೆ ಬೇಡಿಕೊಳ್ಳಲು ರಮೇಶ್ ಜಾರಕಿಹೊಳಿ ಅವರು ತಾವು ಹೆಚ್ಚಾಗಿ ನಂಬಿರುವ ಕೊಲ್ಲಾಪುರ ಮಹಾಲಕ್ಷ್ಮಿ ದೇವರ ಮೊರೆ ಹೋಗಿದ್ದಾರೆ. ಜೊತೆಗೆ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಲು ಸಮಯ ಕೇಳಿದಾಗಲೇ ನಿರೀಕ್ಷಣಾ ಜಾಮೀನು ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರಂತರವಾಗಿ ವಕೀಲರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ನಾಳೆ ಅಥವಾ ನಾಡಿದ್ದು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ದಲಿತ ಯುವತಿ ಎಂಬ ಕಾರಣಕ್ಕೆ ಆಕೆಯನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ದಲಿತ ಯುವತಿ ಎಂಬ ಕಾರಣಕ್ಕೆ ಆಕೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ತಮ್ಮ ಮಗಳನ್ನ ಬಳಸಿಕೊಂಡಿದ್ದಾರೆ ಎಂದು ಯುವತಿ ತಂದೆ ನಿನ್ನೆ(ಮಾರ್ಚ್​ 30) ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ನಿನ್ನೆ ಸಂಜೆ ಬೆಳಗಾವಿಯ ಯುವತಿ ಪೋಷಕರ ಮನೆಗೆ ವಾಲ್ಮೀಕಿ ಸ್ವಾಮೀಜಿ ಪ್ರಸನ್ನಾನಂದಪುರಿ ಸ್ವಾಮೀಜಿ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಈ ಮೂಲಕ ಪ್ರಕರಣದಲ್ಲಿ ಕುಟುಂಬಸ್ಥರು ಜಾತಿ ಕಾರ್ಡ್ ಕೂಡ ಪ್ರಸ್ತಾಪನೆ ಮಾಡಿದ್ದರು. ಇತ್ತ ಸಚಿವ ರಮೇಶ್ ಜಾರಕಿಹೊಳಿ ಕೂಡ ಜಾತಿ ನಿಂದನೆ ಕೇಸ್ ಹಾಕಿಸುತ್ತೇನೆ ಎಂದು ಹೇಳಿದ್ದರು. ಇದೀಗ ಯುವತಿ ಹೇಳಿಕೆ ಕೊಟ್ಟಿದ್ದು, ಸದ್ಯದ ಬೆಳವಣಿಗೆಯನ್ನು ರಮೇಶ್​ ಜಾರಕಿಹೊಳಿ ಅವರ ಕುಟುಂಬಸ್ಥರು ಕಾದು ನೋಡುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಚಿವರು ಬಂಧನ ಆದ್ರೆ, ಉಪಚುನಾವಣೆಯ ಮೇಲೆ ಕೊಂಚ ಪರಿಣಾಮ ಚುನಾವಣೆ ಸಲುವಾಗಿ ಸಚಿವ ರಮೇಶ್​ ಜಾರಕಿಹೊಳಿ ಗೋಕಾಕ್​ನ ತಮ್ಮ ನಿವಾಸಕ್ಕೆ ಬಂದರೂ ಕೂಡಾ ಪ್ರಚಾರ ಚುನಾವಣೆ ಪ್ರಚಾರ ಮಾಡಲು ಮುಂದಾಗಿಲ್ಲ. ಚುನಾವಣೆಯಲ್ಲಿ ಅಂತರ ಕಾಯ್ದುಕೊಳ್ಳೂತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಕೂಡಾ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಇಂದು ಕೊಲ್ಲಾಪುರ ಮಹಾಲಕ್ಷ್ಮಿ ದೇವರ ದರ್ಶನ ಪಡೆದು ಮತ್ತೆ ಬೆಳಗಾವಿಗೆ ರಮೇಶ್​ ಜಾರಕಿಹೊಳಿ ಹಿಂದಿರುಗಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರು ಎಂದ ಸಿಡಿಲೇಡಿ: ಇಂದು ರಮೇಶ್ ಬಂಧನವಾಗುತ್ತಾ?

ಕೊಲ್ಹಾಪುರ ದೇವಿ ದರ್ಶನ ಪಡೆದು ವಾಪಸಾದ ರಮೇಶ್ ಜಾರಕಿಹೊಳಿ, ನಾಳೆ ಬೆಳಗ್ಗೆ ಬೆಂಗಳೂರಿಗೆ?