ಮಾಜಿ ಸಚಿವಗೆ ಸಂಕಷ್ಟ ತಂದೊಡ್ಡುತ್ತಾ ವಾಟ್ಸಪ್ ಚಾಟಿಂಗ್ ಹಿಸ್ಟರಿ? ಸಿಡಿ ಲೇಡಿ ಮೊಬೈಲ್ ಎಫ್ಎಸ್ಎಲ್ಗೆ ರವಾನೆ ಸಾಧ್ಯತೆ
ಇಂದು ತನಿಖಾಧಿಕಾರಿಯ ಮುಂದೆ ಯುವತಿ 300 ಪುಟಗಳ ಪ್ರತಿಯನ್ನು ನೀಡುವ ಸಾಧ್ಯತೆ ಇದೆ. ಜೊತೆಗೆ ಕೊಡಿಸಿರುವ ದುಬಾರಿ ವಸ್ತುಗಳನ್ನು ತನಿಖೆಗೆ ನೀಡುವ ಸಾಧ್ಯತೆ ಇದೆ.
ಬೆಂಗಳೂರು: ಮಾಜಿ ಸಚಿವರ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರದ ದೂರು ನೀಡಿರುವ ಸಿಡಿ ಲೇಡಿ 28 ದಿನಗಳ ನಂತರ ನಿನ್ನೆ ಮಂಗಳವಾರ ನಗರದ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಖುದ್ದು ಹಾಜಾರಾಗಿ ಹೇಳಿಕೆ ನೀಡಿದ್ದಾರೆ. ಇದು ತನಿಖೆಗೆ ಮಹತ್ವದ ತಿರುವು ತಂದಿದೆ. ಇದೀಗ ತನಿಖೆಗೆ ಸಂಬಂಧಿಸಿದಂತೆ ಸುಮಾರು 300 ಪುಟಗಳ ಚಾಟ್ ಹಿಸ್ಟರಿ ಕೊಡಲು ಯುವತಿ ಪರ ವಕೀಲರು ನಿರ್ಧಾರ ಮಾಡಿದ್ದಾರೆ.
ಯುವತಿ ಪರ ವಕೀಲರು 300 ಪುಟಗಳ ಚಾಟಿಂಗ್ನ ಮಾಹಿತಿ ಕಲೆ ಹಾಕಿದ್ದು, ಇಂದು ಯುವತಿ ಸಂದೇಶದ (ಚಾಟ್) ಜೆರಾಕ್ಸ್ ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡಲಿದ್ದಾರೆ. ಸಂದೇಶದ ಜೊತೆಗೆ ಬೆಲೆ ಬಾಳುವ ಗಿಫ್ಟ್ ವಸ್ತುಗಳನ್ನು ಕೊಡಿಸಿರುವ ಬಿಲ್ ಹಾಗೂ ಫೋಟೋಗಳನ್ನೂ ಕೊಡುವ ಸಾಧ್ಯತೆ ಇದೆ. ಯುವತಿ ಸಂದೇಶದ ಪ್ರತಿಯನ್ನು ಕೊಟ್ಟರೂ ಮೊಬೈಲ್ಅನ್ನು ತನಿಖೆಗೆ ಎಸ್ಐಟಿ ಕೇಳಲಿದೆ ಎಂಬ ಮಾಹಿತಿ ಬಂದಿದೆ. ಹಾಗಾಗಿ ಯುವತಿಯಿಂದ ಮೊಬೈಲ್ ಪಡೆದು ಎಫ್ಎಸ್ಎಲ್ಗೆ ರವಾನೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’
ಕೊಲ್ಹಾಪುರ ದೇವಿ ದರ್ಶನ ಪಡೆದು ವಾಪಸಾದ ರಮೇಶ್ ಜಾರಕಿಹೊಳಿ, ನಾಳೆ ಬೆಳಗ್ಗೆ ಬೆಂಗಳೂರಿಗೆ?
Published On - 10:33 am, Wed, 31 March 21