ಏರ್‌ಪೋರ್ಟ್ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವು
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನದ ದ್ವಾರದ ಮುಂಭಾಗ ಮಾರ್ಚ್ 30ಅಂದ್ರೆ ನಿನ್ನೆ ರಾಮನಗರ ಮೂಲದ ಪ್ರತಾಪ್ ಏರ್ಪೋಟ್ ಟರ್ಮಿನಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕ್ಯಾಬ್‌ನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು.
ದೇವನಹಳ್ಳಿ: ಏರ್‌ಪೋರ್ಟ್ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮುಂಜಾನೆ ಮೃತಪಟ್ಟಿದ್ದಾರೆ. ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡ ಚಾಲಕ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನದ ದ್ವಾರದ ಮುಂಭಾಗ ಮಾರ್ಚ್ 30ಅಂದ್ರೆ ನಿನ್ನೆ ರಾಮನಗರ ಮೂಲದ ಪ್ರತಾಪ್ ಏರ್ಪೋಟ್ ಟರ್ಮಿನಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕ್ಯಾಬ್‌ನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಆಗ ಭದ್ರತಾಪಡೆ ಕ್ಯಾಬ್ ಗಾಜು ಒಡೆದು ಗಂಭೀರ ಗಾಯಗೊಂಡಿದ್ದ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಾಲಕ ಪ್ರತಾಪ್ ಮೃತಪಟ್ಟಿದ್ದಾರೆ.
ಚಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಏರ್ಪೋಟ್ ಟ್ಯಾಕ್ಸಿಗಳನ್ನ ನಿಲ್ಲಿಸಿ ಧರಣಿ ನಡೆಸಲು ಇತರೆ ಚಾಲಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದೂ ಸಹ ಏರ್ಪೋಟ್ ಪ್ರಯಾಣಿಕರಿಗೆ ಟ್ಯಾಕ್ಸಿ ಬಿಸಿ ತಟ್ಟಲಿದೆ. ನೆನ್ನೆ ಸಂಜೆಯಿಂದ ಒಲಾ ಉಬರ್ ಮತ್ತು ಏರ್ಪೋಟ್ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದಾರೆ.
ಚಾಲಕನ ಆತ್ಮಹತ್ಯೆಗೆ ಕಾರಣ ಕೊರೊನಾ ನಂತರ ಬಾಡಿಗೆ ಕಡಿಮೆಯಾಗಿದ್ದ ಕಾರಣ ಪ್ರತಾಪ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ. ಸಂಸಾರ ನಿರ್ವಹಣೆ ಮತ್ತು ವಾಹನದ ಕಂತು ಕಟ್ಟುವ ಹೊರೆಯಿಂದ ಬೇಸರಗೊಂಡಿದ್ದ ಹೀಗಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಕೆಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ದೆಹಲಿಯ ಬಿಜೆಪಿ ನಾಯಕ ಜಿ.ಎಸ್. ಬಾವಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಆತ್ಮಹತ್ಯೆ ಶಂಕೆ