‘ನನ್ನನ್ನು ಯಾರೂ ಕಿಡ್ನ್ಯಾಪ್​ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’

ಸಂತ್ರಸ್ತೆ ರಮೇಶ್​ ಜಾರಕಿಹೊಳಿ ತಮಗೆ ಕೊಟ್ಟ ಗಿಫ್ಟ್​, ತಮ್ಮ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಹಾಗೂ ಮಾಡಿರುವ ಚಾಟಿಂಗ್, ವಿಡಿಯೋಗಳನ್ನು ಎಸ್​ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನನ್ನ ತಂದೆ, ತಾಯಿ, ಸೋದರ ಕೂಡ ರಮೇಶ್ ಹಿಡಿತದಲ್ಲಿದ್ದಾರೆ. ನನ್ನ ತಂದೆ, ತಾಯಿ, ಸೋದರನಿಗೂ ಕೂಡ ರಕ್ಷಣೆ ಬೇಕು ಎಂದು ಮನವಿ ಮಾಡಿದ್ದಾರೆ.

‘ನನ್ನನ್ನು ಯಾರೂ ಕಿಡ್ನ್ಯಾಪ್​ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’
ರಮೇಶ ಜಾರಕಿಹೊಳಿ ಮತ್ತು ಯುವತಿ
Follow us
KUSHAL V
|

Updated on:Mar 30, 2021 | 7:44 PM

ಬೆಂಗಳೂರು: ಎಸ್​ಐಟಿ ಅಧಿಕಾರಿಗಳ ಬಳಿ CD ಲೇಡಿ ಹೇಳಿಕೆ ಮುಕ್ತಾಯವಾಗಿದೆ. ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿ ವಿಚಾರಣೆ ನಡೆದಿತ್ತು. ಇದೀಗ, ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ಹೇಳಿಕೆ ಪಡೆದ ಬಳಿಕ ಆಕೆಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು CD ಲೇಡಿಗೆ ಸೂಚನೆ ನೀಡಲಾಗಿದೆ. ಈ ನಡುವೆ, ಆಡುಗೋಡಿ ಟೆಕ್ನಿಕಲ್ ಸೆಲ್‌ನಿಂದ SIT ಅಧಿಕಾರಿಗಳು ವಾಪಸ್ ಆಗಿದ್ದಾರೆ. ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು‌ ಮುಖರ್ಜಿ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವಾಪಸ್ ಆಗಿದ್ದಾರೆ.

ಇತ್ತ, ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ವಿಚಾರಣೆ ವೇಳೆ, ನನ್ನನ್ನು ಯಾರೂ ಕಿಡ್ನ್ಯಾಪ್​ ಮಾಡಿರಲಿಲ್ಲ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ನನಗೆ ಬೆದರಿಕೆ ಒಡ್ಡಲಾಗಿದೆ. ರಮೇಶ್ ಜಾರಕಿಹೊಳಿಯಿಂದ ನನಗೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ನಾನು ತಲೆಮರೆಸಿಕೊಳ್ಳಬೇಕಿತ್ತು. ರಕ್ಷಣೆ ಇಲ್ಲದ ಕಾರಣ ತಲೆಮರೆಸಿಕೊಳ್ಳಬೇಕಿತ್ತು ಎಂದು ಸಂತ್ರಸ್ತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಇದಲ್ಲದೆ, ಸಂತ್ರಸ್ತೆ ರಮೇಶ್​ ಜಾರಕಿಹೊಳಿ ತಮಗೆ ಕೊಟ್ಟ ಗಿಫ್ಟ್​, ತಮ್ಮ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಹಾಗೂ ಮಾಡಿರುವ ಚಾಟಿಂಗ್, ವಿಡಿಯೋಗಳನ್ನು ಎಸ್​ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ನನ್ನ ತಂದೆ, ತಾಯಿ, ಸೋದರ ಕೂಡ ರಮೇಶ್ ಹಿಡಿತದಲ್ಲಿದ್ದಾರೆ. ನನ್ನ ತಂದೆ, ತಾಯಿ, ಸೋದರನಿಗೂ ಕೂಡ ರಕ್ಷಣೆ ಬೇಕು ಎಂದು ಮನವಿ ಮಾಡಿದ್ದಾರಂತೆ.

ಇದಕ್ಕೆ, ವೈದ್ಯಕೀಯ ಪರೀಕ್ಷೆ ಆಗುವವರೆಗೆ ನಮ್ಮ ರಕ್ಷಣೆಯಲ್ಲಿರಬೇಕು. ನಿಮ್ಮ ರಕ್ಷಣೆಗೆ 8 ಮಹಿಳಾ ಪೊಲೀಸರ ತಂಡ ರಚಿಸಲಾಗಿದೆ. ನಿಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡ್ತೇವೆ. ನೀವು ಬಯಸಿದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿರಬಹುದು. ಇಲ್ಲವಾದರೆ ನೀವು ಬಯಸಿದ ಸ್ಥಳದಲ್ಲೂ ಇರಬಹುದು. ಆದರೆ ವೈದ್ಯಕೀಯ ಪರೀಕ್ಷೆವರೆಗೆ ನಮ್ಮ ರಕ್ಷಣೆಯಲ್ಲಿರಬೇಕು ಎಂದು ಎಸ್​ಐಟಿ ಅಧಿಕಾರಿಗಳು ಸಂತ್ರಸ್ತೆಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ, ಇಂದು ಸಿಡಿ ಲೇಡಿಯ ವೈದ್ಯಕೀಯ ತಪಾಸಣೆ ಬಹುತೇಕ ಅನುಮಾನ ಎಂಬ ಮಾಹಿತಿ ದೊರೆತಿದೆ. ಹೊಸ ಪ್ರಕರಣವಾದರೆ ತಪಾಸಣೆ ತುರ್ತು ಅಗತ್ಯವಿರುತ್ತದೆ. ಆದರೆ ಸಿಡಿ ಲೇಡಿಗೆ ಇಂದು ಮೆಡಿಕಲ್ ಟೆಸ್ಟ್​ ಅನುಮಾನ ಎಂದು ಹೇಳಲಾಗಿದೆ. ಮೆಡಿಕಲ್ ಟೆಸ್ಟ್​, ಮಹಜರು ನಾಳೆ ನಡೆಸುವ ಬಗ್ಗೆ ಚಿಂತನೆ ಇದೆ.

ಇದನ್ನೂ ಓದಿ:ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾಕೆ? -ಸಿಡಿ ಲೇಡಿಗೆ ಎಸ್​ಐಟಿ ತಂಡದಿಂದ ಪ್ರಶ್ನೆಗಳ ಸುರಿಮಳೆ ರೆಡಿ 

Published On - 7:36 pm, Tue, 30 March 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್