ಕೊಲ್ಹಾಪುರ ದೇವಿ ದರ್ಶನ ಪಡೆದು ವಾಪಸಾದ ರಮೇಶ್ ಜಾರಕಿಹೊಳಿ, ನಾಳೆ ಬೆಳಗ್ಗೆ ಬೆಂಗಳೂರಿಗೆ?
ಅರ್ಧ ಗಂಟೆಗಳ ಕಾಲ ದೇವಿಯ ಸನ್ನಿಧಾನದಲ್ಲಿದ್ದು ವಿಶೇಷ ಪೂಜೆ ಸಲ್ಲಿಸಿ ವಾಪಾಸ್ ಹೊರಟಿದ್ದಾರೆ. ಇಂದು ಗೋಕಾಕ್ ನಲ್ಲಿ ವಾಸ್ತವ್ಯ ಹೂಡಿ ನಾಳೆ ಮತ್ತೆ ಬೆಂಗಳೂರಿಗೆ ತೆರಳುವ ಸಾಧ್ಯತೆ ಅಂದಾಜಿಸಲಾಗಿದೆ.
ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು (ಮಾರ್ಚ್ 30) ಕೊಲ್ಹಾಪುರ ಮಹಾಲಕ್ಷ್ಮಿ ದೇವರ ಮೊರೆ ಹೋಗಿದ್ದರು. ಅದಕ್ಕಾಗಿ, ಮಹಾರಾಷ್ಟ್ರದಲ್ಲಿರುವ ಮಹಾಲಕ್ಷ್ಮಿ ದೇಗುಲಕ್ಕೆ ತೆರಳಿದ್ದರು. ಇದೀಗ, ದೇವರ ದರ್ಶನ ಪಡೆದು ರಮೇಶ್ ಜಾರಕಿಹೊಳಿ ವಾಪಸ್ ಹೊರಟಿದ್ದಾರೆ. ಕೊಲ್ಹಾಪುರದಿಂದ ಬೆಳಗಾವಿಯತ್ತ ರಮೇಶ್ ಜಾರಕಿಹೊಳಿ ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ ಗೋಕಾಕ್‌ನಿಂದ ತೆರಳಿದ್ದ ಶಾಸಕ ರಮೇಶ್ ಜಾರಕಿಹೊಳಿ, ಈಗ ಮತ್ತೆ ಬೆಳಗಾವಿಗೆ ಮರಳಲಿದ್ದಾರೆ.
ಅರ್ಧ ಗಂಟೆಗಳ ಕಾಲ ದೇವಿಯ ಸನ್ನಿಧಾನದಲ್ಲಿದ್ದು ವಿಶೇಷ ಪೂಜೆ ಸಲ್ಲಿಸಿ ವಾಪಾಸ್ ಹೊರಟಿದ್ದಾರೆ. ಇಂದು ಗೋಕಾಕ್ ನಲ್ಲಿ ವಾಸ್ತವ್ಯ ಹೂಡಿ ನಾಳೆ ಮತ್ತೆ ಬೆಂಗಳೂರಿಗೆ ಮರಳುವ ಸಾಧ್ಯತೆ ಅಂದಾಜಿಸಲಾಗಿದೆ.
ಯಡಿಯೂರಪ್ಪ ಬೆಳಗಾವಿ ಪ್ರವಾಸ ಮೊಟಕು; ದಿಢೀರನೆ ಬೆಂಗಳೂರಿಗೆ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 7ರಂದು ಮತ್ತೊಂದು ಸುತ್ತಿನ ಪ್ರಚಾರಕ್ಕೆ ಬರುವೆ. ನೂರಕ್ಕೆ ನೂರರಷ್ಟು ಮಂಗಳಾ ಅಂಗಡಿ ಗೆಲ್ಲುವುದು ನಿಶ್ಚಿತ. 3 ಲಕ್ಷ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಆದರೆ, ಸಿಡಿ ಲೇಡಿ ಹೇಳಿಕೆ ದಾಖಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರಾಕರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಸದಲ್ಲಿ ದಿಢೀರ್ ಬದಲಾವಣೆ ಮಾಡಿಕೊಂಡಿದ್ದಾರೆ. ಇಂದು (ಮಾರ್ಚ್ 30) ಬೆಳಗಾವಿಯಲ್ಲೇ ವಾಸ್ತವ್ಯ ಹೂಡಬೇಕಿದ್ದ ಬಿ.ಎಸ್. ಯಡಿಯೂರಪ್ಪ ತಮ್ಮ ಕಾರ್ಯಗಳನ್ನು ರದ್ದುಗೊಳಿಸಿ ಬೆಂಗಳೂರಿಗೆ ವಾಪಾಸಾಗಲಿರುವ ತೀರ್ಮಾನ ಕೈಗೊಂಡಿದ್ದಾರೆ. ಬೆಳಗಾವಿಯಲ್ಲಿ ನಿಗದಿಯಾಗಿದ್ದ ಬಿಜೆಪಿ ಮುಖಂಡರ ಸಭೆ ರದ್ದು ಮಾಡಲಾಗಿದೆ. ಇಂದು ರಾತ್ರಿಯೇ ಯಡಿಯೂರಪ್ಪ, ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಬೆಳಗಾವಿಯಿಂದ ಹುಬ್ಬಳ್ಳಿಗೆ ಆಗಮಿಸಲಿರುವ ಮುಖ್ಯಮಂತ್ರಿ, ವಿಮಾನದ ಮೂಲಕ ರಾತ್ರಿಯೇ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಬೆಳವಣಿಗೆಗಳಾಗಿದೆ. ಸಿಡಿಯಲ್ಲಿದ್ದ ಯುವತಿ ಕೋರ್ಟ್‌ಗೆ ಹಾಜರಾಗಿದ್ದಾರೆ. ಈ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸದಲ್ಲಿ ಬದಲಾವಣೆ ಕಂಡುಬಂದಿದೆ
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಎಂದು ಬೆಂಬಲಕ್ಕೆ ನಿಂತ ಸಚಿವ ಮುರುಗೇಶ್ ನಿರಾಣಿ
28 ದಿನಗಳ ಕಾಲ ಪತ್ತೆಯಾಗದ ಸಿಡಿ ಪ್ರಕರಣದ ಯುವತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ!
Published On - 6:45 pm, Tue, 30 March 21