AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

28 ದಿನಗಳ ಕಾಲ ಪತ್ತೆಯಾಗದ ಸಿಡಿ ಪ್ರಕರಣದ ಯುವತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ!

Big Breaking Ramesh Jarkiholi CD Case: ಯುವತಿ ನಿನ್ನೆಯಷ್ಟೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ ಎಂದು ಹೇಳಲಾದ ಚಿತ್ರ ಮತ್ತು ವಿಡಿಯೋಗಳು ಚಿತ್ರಣಗಳು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

28 ದಿನಗಳ ಕಾಲ ಪತ್ತೆಯಾಗದ ಸಿಡಿ ಪ್ರಕರಣದ ಯುವತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ!
ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ಯುವತಿಯೇ ಸಿಡಿ ಲೇಡಿ ಎನ್ನಲಾಗುತ್ತಿದೆ.
guruganesh bhat
|

Updated on:Mar 30, 2021 | 5:43 PM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಇಂದು ನ್ಯಾಯಾಲಯದ ಎದುರು ಹಾಜರಾಗುವ ಮುನ್ನ ಎಲ್ಲಿದ್ದಳು ಎಂಬುದೇ ರೋಚಕ ಕಥೆಯಾಗಿದೆ. ಇಷ್ಟು ದಿನ ಎಲ್ಲಿದ್ದಾಳೆ ಎಂದು ಕಿಂಚಿತ್ ಸುಳಿವನ್ನೂ ನೀಡದ ಯುವತಿ ಇಂದು ಹಠಾತ್ತನೇ ಬೆಂಗಳೂರಲ್ಲಿ ಹಾಜರಾಗಿದ್ದಾಳೆ. ಯುವತಿ ನಿನ್ನೆಯಷ್ಟೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾಳೆ ಎಂದು ಹೇಳಲಾದ ಚಿತ್ರ ಮತ್ತು ವಿಡಿಯೋ ತುಣುಕುಗಳು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಈ ಕುರಿತು ಇನ್ನಷ್ಟೇ ಖಚಿತ ವಿವರ ತಿಳಿಯಬೇಕಿದೆ.

ಇತ್ತ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಗೆ ವೈದ್ಯಕೀಯ ತಪಾಸಣೆ ಮಾಡಲು ಬೌರಿಂಗ್ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಯ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಯವರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆಗೆ ಸಿಬ್ಬಂದಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ಹಾಲ್​​ನಲ್ಲಿ ಯುವತಿಯ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದ್ದು, ತದನಂತರ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿ ಯುವತಿ ಹೇಳಿಕೆ ದಾಖಲು ಪ್ರಕ್ರಿಯೆ ಮುಕ್ತಾಯವಾಗಿದೆ. ಗುರುನಾನಕ್ ಭವನದ ಮೂರು ದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಯುವತಿ ಕೋರ್ಟ್‌ ಹೇಳಿಕೆ ಹಿನ್ನೆಲೆ: ಕಂಗೆಟ್ಟ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿ ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲದತ್ತ ಪಯಣ

Published On - 5:37 pm, Tue, 30 March 21