AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರು ಎಂದ ಸಿಡಿ ಲೇಡಿ: ಇಂದು ರಮೇಶ್ ಬಂಧನವಾಗುತ್ತಾ?

‘ನನಗೆ ಶಾಸಕ ರಮೇಶ್ ಜಾರಕಿಹೊಳಿ ಪದೇಪದೆ ಕಾಲ್ ಮಾಡುತ್ತಿದ್ದರು’ ಸರ್ಕಾರಿ ಕೆಲಸದ ಆಮಿಷವೊಡ್ಡಿದ್ರು ಎಂದು ಸಿಡಿ ಲೇಡಿ ಜಡ್ಜ್ ಮುಂದೆ ತಿಳಿಸಿದ್ದಾರೆ. ತಾನು ಟಿವಿಯಲ್ಲಿ ರಮೇಶ್ ನೋಡಿ ಪ್ರಭಾವಿತಳಾಗಿದ್ದೆ. ರಮೇಶ್ ಕಾಲ್ ಮಾಡಿ ನಿನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ರು.

ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರು ಎಂದ ಸಿಡಿ ಲೇಡಿ: ಇಂದು ರಮೇಶ್ ಬಂಧನವಾಗುತ್ತಾ?
ಸಿಡಿ ಲೇಡಿ
ಆಯೇಷಾ ಬಾನು
|

Updated on:Mar 31, 2021 | 12:41 PM

Share

ಬೆಂಗಳೂರು: ಇಡೀ ರಾಜ್ಯ, ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ನಿನ್ನೆ ದೊಡ್ಡ ತಿರುವು ಸಿಕ್ಕಿದೆ. 28 ದಿನಗಳ ಬಳಿಕ ಸಿಡಿ ಲೇಡಿ ಕೋರ್ಟ್‌ ಮುಂದೆ ಹಾಜರಾಗಿ ಜಡ್ಜ್ ಎದುರಲ್ಲೇ ತನ್ನ ಹೇಳಿಕೆ ದಾಖಲಿಸೋ ಮೂಲಕ ತನ್ನ ಅಜ್ಞಾತ ಆಟಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ ರಮೇಶ್‌ ಜಾರಕಿಹೊಳಿ ಸಿಡಿ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಸಿಡಿ ಲೇಡಿ ಕೊಟ್ಟ ಹೇಳಿಕೆಗಳಿಂದ ರಮೇಶ್​ರ ರಾಜಕಾರಣಕ್ಕೆ ಭಾರಿ ಹೊಡೆತ ಬೀಳಲಿದೆ ಎಂಬುವುದು ಸದ್ಯದ ಸತ್ಯದ ಮಾತು. ಮಾರ್ಚ್ 30 ರಂದು ಜಡ್ಜ್ ಮುಂದೆ ಹಾಜರಾಗಿದ್ದ ಯುವತಿ, ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ರು ಎಂದು ಹೇಳಿದ್ದಾರೆ.

ಸಿಡಿ ಲೇಡಿ ಜಡ್ಜ್ ಮುಂದೆ ಹೇಳಿದ್ದೇನು? ‘ನನಗೆ ಶಾಸಕ ರಮೇಶ್ ಜಾರಕಿಹೊಳಿ ಪದೇ ಪದೆ ಕಾಲ್ ಮಾಡುತ್ತಿದ್ದರು’ ಸರ್ಕಾರಿ ಕೆಲಸದ ಆಮಿಷವೊಡ್ಡಿದ್ರು ಎಂದು ಸಿಡಿ ಲೇಡಿ ಜಡ್ಜ್ ಮುಂದೆ ತಿಳಿಸಿದ್ದಾರೆ. ತಾನು ಟಿವಿಯಲ್ಲಿ ರಮೇಶ್ ನೋಡಿ ಪ್ರಭಾವಿತಳಾಗಿದ್ದೆ. ರಮೇಶ್ ಕಾಲ್ ಮಾಡಿ ನಿನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ರು. ದೆಹಲಿಯ ಕರ್ನಾಟಕ ಭವನದಿಂದಲೂ ಪದೇಪದೆ ಫೋನ್ ಮಾಡಿದ್ದಾರೆ. ವಿಡಿಯೋ ಕಾಲ್ ಸಹ ಮಾಡುತ್ತಿದ್ದರು. ಈ ವೇಳೆ ರಮೇಶ್ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಲೈಂಗಿಕವಾಗಿ ಪ್ರಚೋದಿಸುತ್ತಿದ್ದರು ಎಂದು ಸಿಡಿ ಲೇಡಿ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪಿಸಿದ್ದಾರೆ.

ತನ್ನನ್ನು ಖುಷಿಪಡಿಸಿ, ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದರು. ವಿಡಿಯೋ ಕಾಲ್ ಮಾಡಿ ಬೆತ್ತಲಾಗಿ ಖಾಸಗಿ ಅಂಗಾಂಗ ತೋರಿಸುವಂತೆ ಒತ್ತಾಯಿಸಿದ್ದರು. ರಮೇಶ್ ಒಟ್ಟು 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರು. ಲೈಂಗಿಕ ಕ್ರಿಯೆ ವೇಳೆ ಅಶ್ಲೀಲ ಪದಗಳನ್ನ ಬಳಸಿ ಬೈಯುತ್ತಾ ವಿಡಿಯೋ ರೆಕಾರ್ಡ್ ಮಾಡ್ತಿದ್ದರೆಂದು ರಮೇಶ್ ಜಾರಕಿಹೊಳಿ ವಿರುದ್ಧ ಆರೋಪಿಸಿದ್ದಾರೆ. ಇನ್ನು ಇಂದೂ ಕೂಡ ವಿಚಾರನೆಗೆ ಹಾಜರಾಗುವಂತೆ ಎಸ್​ಐಟಿ ಬುಲಾವ್ ನೀಡಿದೆ. ಹಾಗಾಗಿ ಇಂದೂ ಕೂಡ ಅನೇಕ ವಿಚಾರಗಳು ಬಹಿರಂಗಗೊಳ್ಳಲಿದೆ. ಹಾಗಾದ್ರೆ ರಮೇಶ್ ಜಾರಕಿಹೊಳಿಯವರ ಬಂಧನವಾಗುತ್ತಾ? ಅಥವಾ ಮುಂದೆ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತೆ ಎಂಬುವುದೇ ಕುತೂಹಲ.

ಇದನ್ನೂ ಓದಿ: ಸಿಡಿ ಲೇಡಿಗೆ ಮತ್ತೊಮ್ಮೆ ವಿಚಾರಣೆಗೆ ಬುಲಾವ್ ಕೊಟ್ಟ ಎಸ್ಐಟಿ.. ಇಂದೇ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು

Published On - 10:17 am, Wed, 31 March 21