ಸಿಡಿ ಲೇಡಿಗೆ ಮತ್ತೊಮ್ಮೆ ವಿಚಾರಣೆಗೆ ಬುಲಾವ್ ಕೊಟ್ಟ ಎಸ್ಐಟಿ.. ಇಂದೇ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು

ಸಿಡಿ ಲೇಡಿಗೆ ಮತ್ತೊಮ್ಮೆ ವಿಚಾರಣೆಗೆ ಬುಲಾವ್ ಕೊಟ್ಟ ಎಸ್ಐಟಿ.. ಇಂದೇ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು
ಸಿಡಿ ಲೇಡಿ

ಸಿಡಿ ಪ್ರಕರಣದ ಸಂಬಂಧ ಎಸ್ಐಟಿ ಅಧಿಕಾರಿಗಳು ಸಿಡಿಲೇಡಿ ವಿಚಾರಣೆ ನಡೆಸಿ, ಮತ್ತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೊಟೀಸ್ ನೀಡಿ ಕಳುಹಿಸಿದ್ದಾರೆ. ವಿಚಾರಣೆ ಬಳಿಕ ಎಸ್ಐಟಿ ಮತ್ತೆ ಸಂತ್ರಸ್ತೆಗೆ ನೋಟಿಸ್ ಕೊಟ್ಟಿದ್ದೇಕೆ? ಪ್ರಕರಣ ಸಂಬಂಧ ಇಂದು ನಡೆಯಬಹುದಾದ ವಿದ್ಯಮಾನಗಳೇನು ಇಲ್ಲಿದೆ ಡಿಟೇಲ್ಸ್

Ayesha Banu

|

Mar 31, 2021 | 7:39 AM

ಬೆಂಗಳೂರು: ಮಾರ್ಚ್ 30ರಂದು ಸಿಡಿ ಪ್ರಕರಣದ ಸಂಬಂಧ ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಬಳಿಕ ಎಸ್ಐಟಿ ಅಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್ ಸೆಂಟರ್​ಗೆ ಕರೆತಂದಿದ್ರು. ಸಿಆರ್‌ಪಿಸಿ ಸೆಕ್ಷನ್ 161ರಡಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಕವಿತಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ಬಳಿಕ ತನಿಖಾಧಿಕಾರಿಗಳು ಇಂದು ತಮ್ಮ ಮುಂದೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಬಳಿ ಎಲ್ಲಾ ಆಯಾಮಗಳಲ್ಲಿ ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ.‌ ಯುವತಿ ಹೇಳಿಕೆ ದಾಖಲಿಸಿಕೊಂಡಿರುವ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಅಂತಾ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿ ಬಂಧನಕ್ಕೆ ಜಗದೀಶ್ ಆಗ್ರಹ ಆಡುಗೋಡಿ ಟೆಕ್ನಿಕಲ್ ಸೆಲ್ ಬಳಿ ಸಿಡಿ ಯುವತಿ ಪರ ವಕೀಲ ಜಗದೀಶ್ ಮಾತನಾಡಿ, ನ್ಯಾಯಾಲಯದಲ್ಲಿ ಸಿಆರ್​ಪಿಸಿ ಸೆಕ್ಷನ್ 164ರಡಿ ಯುವತಿ ಹೇಳಿಕೆ ನೀಡಿದ್ದಾಳೆ. ಸದ್ಯ ಅಧಿಕಾರಿಗಳು ಯುವತಿಯ ವಾಯ್ಸ್ ಸ್ಯಾಂಪಲ್ ಪಡೆಯುತ್ತಾರೆ. ನಾವು ಯುವತಿಯನ್ನ ಎಸ್ಐಟಿಗೆ ಹ್ಯಾಂಡ್ ಓವರ್ ಮಾಡಿಲ್ಲ. ತನಿಖಾಧಿಕಾರಿಗಳ ಮುಂದೆ ಸಿಆರ್​ಪಿಸಿ ಸೆಕ್ಷನ್ 161ರಡಿ ಹೇಳಿಕೆಯನ್ನ ತನಿಖಾಧಿಕಾರಿಗಳು ದಾಖಲಿಸಿಕೊಳ್ಳುತ್ತಿದ್ದಾರೆ. ಯುವತಿಯನ್ನ ಪೊಲೀಸರು ವಶಕ್ಕೆ ಪಡೆಯಲು ಆಗವುದಿಲ್ಲ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ನೀಡಿರೋ ದೂರಿನನ್ವಯ ಎಸ್ಐಟಿ ಹೇಳಿಕೆ ದಾಖಲಿಸ್ತಿದೆ. ನಾವು ನ್ಯಾಯಾಲಯದ ಮುಂದೆ ಯುವತಿಯನ್ನ ಹಾಜರು ಮಾಡಿದ್ದೇವೆ. ಹೀಗಾಗಿ ಆರೋಪಿ ರಮೇಶ್ ಜಾರಕಿಹೊಳಿಯನ್ನ ಬಂಧಿಸಿ ಅಂತಾ ಒತ್ತಾಯಿಸಿದ್ದಾರೆ.

ನ್ಯಾಯಾಧೀಶರ ಎದುರು ಸಿಆರ್​ಪಿಸಿ ಸೆಕ್ಷನ್​ 164 ರಡಿ ಯುವತಿ ದೂರು ಕೊಟ್ಟಂತೆ ಅದೇ ರೀತಿ ಹೇಳಿಕೆ ನೀಡಿರುವ ಸಾಧ್ಯತೆಯೇ ಹೆಚ್ಚಿದೆ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ತಾವು ನೀಡಿದ ದೂರಿನಲ್ಲಿ ಉಲ್ಲೇಖಿತ ಅಂಶಗಳನ್ನೇ ನ್ಯಾಯಾಲಯದ ಮುಂದೆ ಹೇಳುತ್ತಾರೆ. ಇಲ್ಲೂ ಸಹ ಆ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಯುವತಿ ನೀಡಿದ್ದ ದೂರಿನಲ್ಲಿ, ಕೆಲಸದ ಆಮಿಷವೊಡ್ಡಿ ನನ್ನ ಜೊತೆ ರಮೇಶ್ ಜಾರಕಿಹೊಳಿ ಲೈಂಗಿಕ ಕ್ರಿಯೆ ನಡೆಸಿದ್ರು ಅಂತಾ ಆರೋಪಿಸಿದ್ಲು. ಅಲ್ದೆ, ತನಗೆ ರಮೇಶ್ ಜಾರಕಿಹೊಳಿಯಿಂದ ಜೀವ ಬೆದರಿಕೆ ಇದೆ. ನನ್ನ ಕುಟುಂಬದ ಒತ್ತಡ ಹೇರುತ್ತಿದ್ದಾರೆ ಅಂತಾ ಆರೋಪಿಸಿದ್ಲು. ಹೀಗಾಗಿ ತನಗೆ, ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಸೂಕ್ತ ರಕ್ಷಣೆ ಕೊಡಿ ಅಂತಾ ಆಗ್ರಹಿಸಿದ್ಲು. ಇದೇ ರೀತಿಯಾಗಿ ಜಡ್ಜ್ ಎದುರು ಹೇಳಿಕೆ ನೀಡಿರೋ ಸಾಧ್ಯತೆ ಇದೆ.

ಇಂದು ಸಿಡಿ ಲೇಡಿಗೆ ನಡೆಯಲಿದೆ ವೈದ್ಯಕೀಯ ಪರೀಕ್ಷೆ ಮಾರ್ಚ್ 31ರಂದು ಎಸ್ಐಟಿ ವಿಚಾರಣೆಗೆ ಹಾಜರಾಗೋ ಸಿಡಿ ಲೇಡಿಗೆ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸಲಿದ್ದಾರೆ. ಈ ಮೂಲಕ ಅತ್ಯಾಚಾರ ಆಗಿರೋ ಕುರಿತು ವೈಜ್ಞಾನಿಕ ಸಾಕ್ಷ್ಯ ಕಲೆ ಹಾಕಲಿದ್ದಾರೆ. ಯುವತಿ ತನಗೆ ಜೀವ ಬೆದರಿಕೆ ಇದೆ ಅಂತಾ ಹೇಳಿದ್ದ ಕಾರಣಕ್ಕೆ ಆಕೆಗೆ ಭಾರಿ ಭದ್ರತೆ ನೀಡಲಾಗಿತ್ತು. ಇದೇ ಕಾರಣಕ್ಕೆ ಆಕೆ ರಾತ್ರಿ ಎಲ್ಲಿರ್ತಾಳೆ ಅನ್ನೋ ಕುರಿತು ಮಾಹಿತಿಯನ್ನ ಗೌಪ್ಯವಾಗಿ ಇಡಲಾಗಿತ್ತು. ಈ ಕುರಿತು ಸಂತ್ರಸ್ತೆ ಪರ ವಕೀಲ ಜಗದೀಶ್​ಗೂ ಕೋರ್ಟ್ ಕಟ್ಟಪ್ಪಣೆ ಹೊರಡಿಸಿ, ಯುವತಿ ಎಲ್ಲಿರ್ತಾಳೆ ಅನ್ನೋದನ್ನ ಗೌಪ್ಯವಾಗಿ ಇಡುವಂತೆ ಹೇಳಿತ್ತು.

ಒಟ್ನಲ್ಲಿ ಸಿಡಿ ಲೇಡಿ 28 ದಿನದ ಬಳಿಕ ಪ್ರತ್ಯಕ್ಷಳಾಗಿ ಸಾಹುಕಾರ್ ಸಿಡಿ ಕೇಸ್​ಗೆ ಭರ್ಜರಿ ಟ್ವಿಸ್ಟ್ ನೀಡಿದ್ದಾಳೆ. ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದ್ದು, ಇಂದು ಬೆಳಗ್ಗೆ 11.30ರ ಸುಮಾರಿಗೆ ಆಡುಗೋಡಿಯ ಟೆಕ್ನಿಕಲ್ ಸೆಂಟರ್​ನಲ್ಲಿ ಸಿಡಿ ಲೇಡಿಗೆ ಎಸ್ಐಟಿ ಗ್ರಿಲ್ ಮಾಡಲಿದೆ.

ಇದನ್ನೂ ಓದಿ: ‘ಸಿಡಿ ಲೇಡಿ ಚಿಕ್ಕ ಮಗು ಅಲ್ಲ, ಬುದ್ಧಿವಂತೆ.. ಸ್ವತಃ ಹೇಳಿಕೆ ನೀಡಿದ್ದಾಳೆ; ಅದು ಜಡ್ಜ್‌ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಳೆ’

Follow us on

Related Stories

Most Read Stories

Click on your DTH Provider to Add TV9 Kannada