‘ಸಿಡಿ ಲೇಡಿ ಚಿಕ್ಕ ಮಗು ಅಲ್ಲ, ಬುದ್ಧಿವಂತೆ.. ಸ್ವತಃ ಹೇಳಿಕೆ ನೀಡಿದ್ದಾಳೆ; ಅದು ಜಡ್ಜ್‌ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಳೆ’

ಸಂತ್ರಸ್ತೆಗೆ ತನ್ನ ಹೇಳಿಕೆಯನ್ನ ನೀಡುವ ಹಕ್ಕಿದೆ. ಆಕೆ ಚಿಕ್ಕ ಮಗು ಅಲ್ಲ, ಬುದ್ಧಿವಂತೆ. ಸ್ವತಃ ಹೇಳಿಕೆ ನೀಡಿದ್ದಾಳೆ. ಮುಖ್ಯವಾಗಿ ಆಕೆ ಜಡ್ಜ್‌ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಳೆ ಎಂದು ಸಿಡಿ ಲೇಡಿ ಪರ ವಕೀಲ K.N.ಜಗದೀಶ್ ಕುಮಾರ್ ಹೇಳಿದ್ದಾರೆ.

‘ಸಿಡಿ ಲೇಡಿ ಚಿಕ್ಕ ಮಗು ಅಲ್ಲ, ಬುದ್ಧಿವಂತೆ.. ಸ್ವತಃ ಹೇಳಿಕೆ ನೀಡಿದ್ದಾಳೆ; ಅದು ಜಡ್ಜ್‌ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಳೆ’
‘ಸಿಡಿ ಲೇಡಿ ಚಿಕ್ಕ ಮಗು ಅಲ್ಲ, ಬುದ್ಧಿವಂತೆ.. ಸ್ವತಃ ಹೇಳಿಕೆ ನೀಡಿದ್ದಾಳೆ’
Follow us
KUSHAL V
|

Updated on:Mar 30, 2021 | 9:52 PM

ಬೆಂಗಳೂರು: ಸಿಡಿ ಲೇಡಿ ನಾಳೆ ಬೆಳಗ್ಗೆ 11.30ಕ್ಕೆ ಎಸ್‌ಐಟಿ ಮುಂದೆ ಹಾಜರಾಗುತ್ತಾರೆ. ಎಸ್‌ಐಟಿ ಮುಂದೆ ಯುವತಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಸಿಡಿ ಲೇಡಿ ಪರ ವಕೀಲ K.N.ಜಗದೀಶ್ ಕುಮಾರ್ ಹೇಳಿದ್ದಾರೆ. CrPC ಸೆಕ್ಷನ್‌ 164ರಡಿ ಯುವತಿಯ ಹೇಳಿಕೆ ದಾಖಲಿಸಲಾಗಿದೆ. ಕೋರ್ಟ್‌ ಈ ಅವಕಾಶ ನೀಡಿದ ಹಿಂದೆ ನಮ್ಮ ತಂಡದ ಶ್ರಮವಿದೆ ಎಂದು ಜಗದೀಶ್​ ಹೇಳಿದರು.

ಸಂತ್ರಸ್ತೆಗೆ ತನ್ನ ಹೇಳಿಕೆಯನ್ನ ನೀಡುವ ಹಕ್ಕಿದೆ. ಆಕೆ ಚಿಕ್ಕ ಮಗು ಅಲ್ಲ, ಬುದ್ಧಿವಂತೆ. ಸ್ವತಃ ಹೇಳಿಕೆ ನೀಡಿದ್ದಾಳೆ. ಮುಖ್ಯವಾಗಿ ಆಕೆ ಜಡ್ಜ್‌ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಳೆ. ನಂತರ SIT ಸಹ ಪ್ರಶ್ನಾವಳಿ ಮುಂದಿಟ್ಟು ವಿವರಣೆ ಪಡೆದಿದೆ. ಸಂತ್ರಸ್ತೆಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಿದೆ, ನೀಡ್ತಿದೆ ಎಂದು ಸಿಡಿ ಲೇಡಿ ಪರ ವಕೀಲ K.N.ಜಗದೀಶ್ ಕುಮಾರ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ  ಕೇಸ್​ಗೆ ಸಂಬಂಧಿಸಿದಂತೆ ಇದೀಗ ಸಿಡಿ ಲೇಡಿ ಪರ ವಕೀಲ ಜಗದೀಶ್ ಕುಮಾರ್​​ ಮನೆಗೆ ಭದ್ರತೆ ಒದಗಿಸಲಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ವಕೀಲ ಜಗದೀಶ್​ ಮನೆಗೆ ಭದ್ರತೆ ನೀಡಲಾಗಿದೆ. ಓರ್ವ ಪಿಎಸ್​ಐ ನೇತೃತ್ವದಲ್ಲಿ ಜಗದೀಶ್​ ನಿವಾಸಕ್ಕೆ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ: ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ; ಈಗ ವಿಚಾರಣೆ ಬಳಿಕ ಸಂತ್ರಸ್ತೆ ವಾಸ್ತವ್ಯ ಎಲ್ಲಿ?

Published On - 9:45 pm, Tue, 30 March 21