ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ; ಈಗ ವಿಚಾರಣೆ ಬಳಿಕ ಸಂತ್ರಸ್ತೆ ವಾಸ್ತವ್ಯ ಎಲ್ಲಿ?

ಈ ಮೊದಲು ದೂರು ನೀಡಿದ್ದ ಆಧಾರದ ಮೇಲೆ ಸಿಡಿ ಲೇಡಿ ಈ ಬಾರಿ ಹೇಳಿಕೆ ನೀಡಿದ್ದಾರಂತೆ. ಯುವತಿ ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿಕೆ ನೀಡಿರುವ ಮಾಹಿತಿ ಸಿಕ್ಕಿದೆ.

ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ; ಈಗ ವಿಚಾರಣೆ ಬಳಿಕ ಸಂತ್ರಸ್ತೆ ವಾಸ್ತವ್ಯ ಎಲ್ಲಿ?
ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ
Follow us
KUSHAL V
|

Updated on: Mar 30, 2021 | 8:17 PM

ಬೆಂಗಳೂರು: ಈ ಮೊದಲು ದೂರು ನೀಡಿದ್ದ ಆಧಾರದ ಮೇಲೆ ಸಿಡಿ ಲೇಡಿ ಈ ಬಾರಿ ಹೇಳಿಕೆ ನೀಡಿದ್ದಾರಂತೆ. ಯುವತಿ ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿಕೆ ನೀಡಿರುವ ಮಾಹಿತಿ ಸಿಕ್ಕಿದೆ. ಅಂದ ಹಾಗೆ, ಸದ್ಯ, ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ಹೇಳಿಕೆ ಮುಗಿಸಿ ವಾಪಸ್ ಆಗಿದ್ದಾರೆ. ಆಡುಗೋಡಿಯಲ್ಲಿರುವ ಟೆಕ್ನಿಕಲ್ ವಿಂಗ್​ನಲ್ಲಿ ಸಂತ್ರಸ್ತೆಯ ಆಡಿಯೋ, ವಿಡಿಯೋ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಧ್ವನಿ ಪರೀಕ್ಷೆ ನಡೆಸಲು ಎಸ್​​ಐಟಿ ಅಧಿಕಾರಿಗಳು ಸಿಡಿ ಲೇಡಿಯ ಆಡಿಯೋ ಪಡೆದಿರುವ ಮಾಹಿತಿ ಸಿಕ್ಕಿದೆ.

ಈ ಮಧ್ಯೆ, ಇಂದು ಸಿಡಿ ಲೇಡಿಯನ್ನ ಮೆಡಿಕಲ್ ಟೆಸ್ಟ್​ಗೆ ಒಳಪಡಿಸಲ್ಲ. ಹಾಗಾಗಿ, ಪೊಲೀಸರು ನಾಳೆ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವ ಸಾಧ್ಯತೆಯಿದೆ. ಇಂದು ಪ್ರಯಾಣ, ಜಡ್ಜ್ ಮುಂದೆ ಹೇಳಿಕೆ, SIT ವಿಚಾರಣೆ ಹಾಗೂ ಬೆಳಗ್ಗೆಯಿಂದ ನಡೆಸಿರುವ ಓಡಾಟದಿಂದ ಆಯಾಸವಾಗಿರುವ ಹಿನ್ನೆಲೆಯಲ್ಲಿ ಯುವತಿ ನಾಳೆ ಬೆಳಗ್ಗೆ ಮೆಡಿಕಲ್ ಟೆಸ್ಟ್​ಗೆ ಒಳಗಾಗಲಿರುವ ಮಾಹಿತಿ ಸಿಕ್ಕಿದೆ.

ಅತ್ತ, ಇಂದು ರಾತ್ರಿ ವಾಸ್ತವ್ಯ ಇರಲು ಯುವತಿ ನಿರ್ಧಾರಕ್ಕೆ ಬಿಟ್ಟದ್ದು. ಆರ್​.ಟಿ.ನಗರದ ಪಿಜಿಯಲ್ಲಿ ಇರುವ ಹಾಗಿದ್ದರೆ ಇರಬಹುದು. ಇಲ್ಲವಾದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಬಹುದು. ವೈಯಕ್ತಿಕವಾಗಿ ಎಲ್ಲೇ ಇರುವುದಾದರೂ ರಕ್ಷಣೆ ನೀಡುತ್ತೇವೆ. ನಿಮಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡುತ್ತೇವೆ ಎಂದು ಸಿಡಿ ಲೇಡಿಗೆ ಎಸ್​ಐಟಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ‘ನನ್ನನ್ನು ಯಾರೂ ಕಿಡ್ನ್ಯಾಪ್​ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’