‘ಆರೋಪಿ ಬೀದಿ ಗೂಳಿಯಂತೆ ಓಡಾಡಿಕೊಂಡಿದ್ದಾನೆ.. ಇಷ್ಟಾದ್ರೂ ಅವರನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ?’

ಆರೋಪಿ ಬೀದಿ ಗೂಳಿಯಂತೆ ಓಡಾಡಿಕೊಂಡಿದ್ದಾನೆ. ಇನ್ನೂ ಆರೋಪಿಯನ್ನು ಬಂಧಿಸಿಲ್ಲವೇಕೆ ಗೃಹ ಸಚಿವರೇ? ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದೆ.

‘ಆರೋಪಿ ಬೀದಿ ಗೂಳಿಯಂತೆ ಓಡಾಡಿಕೊಂಡಿದ್ದಾನೆ.. ಇಷ್ಟಾದ್ರೂ ಅವರನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ?’
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ಐಟಿ ತನಿಖೆ ಬಹುತೇಕ ಮುಕ್ತಾಯ: ಬಿ ರಿಪೋರ್ಟ್ ಯಾರ ಪರವಾಗಿ?
Follow us
KUSHAL V
|

Updated on:Mar 30, 2021 | 11:17 PM

ಬೆಂಗಳೂರು: ಸಂತ್ರಸ್ತೆ ಕೋರ್ಟ್‌ಗೆ ಬಂದು ಹೇಳಿಕೆ ನೀಡಿದ್ರೂ ಆರೋಪಿಯ ಬಂಧನವಾಗಿಲ್ಲ. ಆರೋಪಿಯ ಬಂಧನ ಮಾಡಿಲ್ಲವೆಂದರೆ ಏನರ್ಥ? ಎಂದು ಟ್ವೀಟ್‌ ಮಾಡಿ ರಾಜ್ಯಸರ್ಕಾರದ ವಿರುದ್ಧ ಕಾಂಗ್ರೆಸ್ ತನ್ನ ಆಕ್ರೋಶ ಹೊರಹಾಕಿದೆ. ಆರೋಪಿ ಬೀದಿ ಗೂಳಿಯಂತೆ ಓಡಾಡಿಕೊಂಡಿದ್ದಾನೆ. ಇನ್ನೂ ಆರೋಪಿಯನ್ನು ಬಂಧಿಸಿಲ್ಲವೇಕೆ ಗೃಹ ಸಚಿವರೇ? ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದೆ.

ಯುವತಿ ವಿಡಿಯೋ ಹೇಳಿಕೆ ನೀಡಿದಾಗಲೂ ಕೇಸ್ ಹಾಕಲಿಲ್ಲ. ದೂರು ಸಲ್ಲಿಸಿ ಎಫ್‌ಐಆರ್ ದಾಖಲಾದರೂ ಬಂಧಿಸಿರಲಿಲ್ಲ. ಸಂತ್ರಸ್ತೆ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಿದ್ರೂ ಬಂಧಿಸಿಲ್ಲ. ಸಂತ್ರಸ್ತೆ ಜಡ್ಜ್‌ ಮುಂದೆ ನಿರ್ಭೀತಿಯಿಂದ ಹೇಳಿಕೆ ನೀಡಿದ್ದಾಳೆ. ಇಷ್ಟಾದ್ರೂ ರೇಪಿಸ್ಟ್‌ ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ? ಎಂದು ಕಾಂಗ್ರೆಸ್ ಕಟುವಾಗಿ ಪ್ರಶ್ನೆ ಮಾಡಿದೆ. ಕಾನೂನು ಮೇಲಿದ್ದ ನಂಬಿಕೆಯನ್ನೇ ನಾಶಪಡಿಸಿದ್ದೀರಿ ಎಂದು ಟ್ವೀಟ್‌ ಮಾಡಿ ರಾಜ್ಯಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಕೆಪಿಸಿಸಿ ಕಚೇರಿಯಿಂದಲೇ ಸಿಡಿ ಪ್ರಕರಣ ನಿರ್ವಹಣೆಯಾಗ್ತಿದೆ?’ ಇತ್ತ, ಸಿಡಿ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತವೆಂದು ಸಾಬೀತಾಗ್ತಿದೆ ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಘಟಕದಿಂದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಿಡಿ ಲೇಡಿ ಹೇಳಿಕೆ ದಾಖಲಿಸುವ ವೇಳೆ ಸೂರ್ಯ ಮುಕುಂದರಾಜ್​ ಸಹಾಯ ಮಾಡ್ತಾರೆಂದ್ರೆ ಏನರ್ಥ?. ಸೂರ್ಯ, ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ. ಹಾಗಾದರೆ, ಕೆಪಿಸಿಸಿ ಕಚೇರಿಯಿಂದಲೇ ಸಿಡಿ ಪ್ರಕರಣ ನಿರ್ವಹಣೆಯಾಗ್ತಿದೆ? ಎಂದು ಬಿಜೆಪಿ ಟ್ವೀಟ್​ ಮೂಲಕ ಖಾರವಾಗಿ ಪ್ರಶ್ನಿಸಿದೆ.

ಸಿಡಿ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ? ಗುರುನಾನಕ್​ ಭವನದಲ್ಲಿ ಜಡ್ಜ್​ ಮುಂದೆ ಹಾಜರಾಗಿದ್ದ ಯುವತಿ ಜೊತೆ ಸೂರ್ಯ ಸಹ ಹಾಜರಿದ್ದರು ಎಂದು ಸೂರ್ಯ ಮುಕುಂದರಾಜ್​ ಉಪಸ್ಥಿತಿ ಇದ್ದುದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮಾಡಿದೆ.

ಇದಲ್ಲದೆ, √ ಮಹಾನಾಯಕ √ ಮಹಾನಾಯಕಿ √ ಮಾಸ್ಟರ್ ಮೈಂಡ್ √ ಕೆಪಿಸಿಸಿ ಕಾನೂನು ಘಟಕದ ಸದಸ್ಯ ಜಾಯಿನ್ ದ ಡಾಟ್ಸ್… ಕಾಂಗ್ರೆಸ್ ಪಕ್ಷದ ಪ್ರಾಯೋಜಿತವೇ? ಎಂದು ಬಿಜೆಪಿ ಟ್ವೀಟ್​ ಮಾಡಿದೆ.

ಕೊಲ್ಹಾಪುರದಿಂದ ಗೋಕಾಕ್‌ಗೆ ವಾಪಸಾಗದ ಶಾಸಕ ರಮೇಶ್ ಇತ್ತ, ಸಿಡಿ ಲೇಡಿ ಕೋರ್ಟ್​ ಹಾಜರಾಗುತ್ತಿದ್ದಂತೆ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮೀಯ ದರ್ಶನಕ್ಕೆ ತೆರಳಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಗೋಕಾಕ್‌ಗೆ ಸದ್ಯ ವಾಪಸ್​ ಆಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಮಧ್ಯಾಹ್ನ ಆಪ್ತರೊಂದಿಗೆ ಕೊಲ್ಹಾಪುರಕ್ಕೆ ತೆರಳಿದ್ದ ರಮೇಶ್ ನಗರದಲ್ಲಿರುವ ಐತಿಹಾಸಿಕ ಮಹಾಲಕ್ಷ್ಮೀಯ ದರ್ಶನ ಪಡೆದಿದ್ದರು. ಆದರೆ, ಕೊಲ್ಹಾಪುರದಿಂದ ಬೆಳಗಾವಿ ಜಿಲ್ಲೆ ಗೋಕಾಕ್‌ಗೆ ರಮೇಶ್​ ವಾಪಸಾಗಿಲ್ಲ ಎಂದು ಹೇಳಲಾಗಿದೆ. ಹೀಗಾಗಿ, ಅವರು ನೇರವಾಗಿ ಬೆಂಗಳೂರಿಗೆ ತೆರಳಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ‘ಸಿಡಿ ಲೇಡಿ ಚಿಕ್ಕ ಮಗು ಅಲ್ಲ, ಬುದ್ಧಿವಂತೆ.. ಸ್ವತಃ ಹೇಳಿಕೆ ನೀಡಿದ್ದಾಳೆ; ಅದು ಜಡ್ಜ್‌ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಳೆ’

Published On - 10:08 pm, Tue, 30 March 21