Gold Rate Today: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ.. ಖರೀದಿಗೆ ಮುಂದಾದ ಗ್ರಾಹಕರು!

Gold Silver Price in Bangalore: ಬೆಂಗಳೂರಿನಲ್ಲಿ ಚಿನ್ನ ದರವನ್ನು ದೈನಂದಿನ ಪರಿಶೀಲನೆಯಲ್ಲಿ ಗಮನಿಸಿದಾಗ ಇಂದು ದರ ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ದರವೂ ಇಳಿಕೆಯತ್ತ ಸಾಗಿದೆ. ವಿವಿಧ ನಗರಗಳಲ್ಲಿ ಚಿನ್ನ ದರ ಯಾವ ದರದಲ್ಲಿ ವಹಿವಾಟು ನಡೆಸುತ್ತಿದೆ ಎಂಬುದರ ವಿವರ ಇಲ್ಲಿದೆ.

Gold Rate Today: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ.. ಖರೀದಿಗೆ ಮುಂದಾದ ಗ್ರಾಹಕರು!
ಚಿನ್ನಾಭರಣ (ಸಾಂದರ್ಭಿಕ ಚಿತ್ರ)
Follow us
shruti hegde
|

Updated on:Mar 31, 2021 | 8:53 AM

ಬೆಂಗಳೂರು: ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಚಿನ್ನ ದರ ಕೊಂಚ ಇಳಿಕೆ ಕಂಡಿದೆ. ಹಾಗೆಯೇ ಬೆಳ್ಳಿ ದರವೂ ಕೂಡಾ ಇಳಿಕೆಯತ್ತ ಸಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 41,700 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ಹಾಗಿದ್ದಾಗ ದೇಶದ ವಿವಿಧ ನಗರಗಳಲ್ಲಿ ಚಿನ್ನ ದರ ಹೇಗಿದೆ ಎಂಬುದರ ವಿವರ ಇಲ್ಲಿದೆ.

ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದ್ದರಿಂದ ರಾಜ್ಯದಲ್ಲಿ ಲಾಕ್​ಡೌನ್​​ ಜಾರಿಗೆ ತರಲಾಯಿತು. ಆಗ ಜನರು ಹೊರಗಡೆ ಸುತ್ತಾಡುವುದು ಕಡಿಮೆಯಾಯಿತು. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಅಂಗಡಿಗಳಲ್ಲಿ ಮಾರಾಟ ಕಡಿಮೆ ಆಗಿದ್ದಂತೂ ನಿಜ. ಹಾಗಾಗಿ ಆರ್ಥಿಕ ಚಟುವಟಿಕೆಯಲ್ಲಿ ಏರು-ಪೇರು ಉಂಟಾಗಿತ್ತು. ಹಾಗಾಗಿ ಚಿನ್ನ ದರ ಏರಿಕೆಯತ್ತ ಮುಖ ಮಾಡಿತ್ತು.

22 ಕ್ಯಾರೆಟ್ ಚಿನ್ನ ದರ 1ಗ್ರಾಂ ಚಿನ್ನ ದರ ನಿನ್ನೆ 4,170 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,135 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 33,360 ರೂಪಾಯಿಗೆ ಮಾರಾಟವಾಗಿತ್ತು, ಇಂದು ದರ 33,080 ರೂಪಾಯಿ ಆಗಿದೆ. 10ಗ್ರಾಂ ಚಿನ್ನ ದರ ನಿನ್ನೆ 41,700 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 41,700 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,17,000 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,13,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,500 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ ಮಾಹಿತಿ 1 ಗ್ರಾಂ ಚಿನ್ನ ನಿನ್ನೆ 4,549ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,511 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,392 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 36,088 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 304 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,490 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,110 ರೂಪಾಯಿ ಆಗಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,54,900 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,51,100 ರೂಪಾಯಿ ನಿಗದಿಯಾಗಿದೆ.

ವಿವಿಧ ನಗರದ ಚಿನ್ನ ದರವನ್ನು ಗಮನಿಸಿದಾಗ ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 41,350 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ 45,110 ರೂಪಾಯಿ ಆಗಿದೆ. ಇನ್ನು, ಅಹಮದಾಬಾದ್​ನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ ಚಿನ್ನ 43,850 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ 45,690 ರೂಪಾಯಿ ಇದೆ. ಭುವನೇಶ್ವರ ನಗರದಲ್ಲಿ 22ಕ್ಯಾರೆಟ್ 10 ಗ್ರಾಂ ಚಿನ್ನ 41,350 ರೂಪಾಯಿಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ 45,110 ರೂಪಾಯಿ ಆಗಿದೆ.

ಪುಣೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ದರ 43,620 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ ಚಿನ್ನ ದರ 44,620 ರೂಪಾಯಿ ಇದೆ. ವಿಶಾಖಪಟ್ಟಣ ನಗರದಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನ 41,350 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ 45,110 ರೂಪಾಯಿ ಇದೆ. ಜೈಪುರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ದರ 43,500 ರೂಪಾಯಿ ಹಾಗೂ 24 ಕ್ಯಾರೆಟ್ 10ಗ್ರಾಂ ಚಿನ್ನ ದರ 47,450 ರೂಪಾಯಿ ಆಗಿದೆ. ಪಾಟ್ನಾದಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನ 43,650 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನ ದರ 44,620 ರೂಪಾಯಿ ಇದೆ.

ಬೆಳ್ಳಿ ದರ ಮಾಹಿತಿ ಬೆಳ್ಳಿ ದರವನ್ನು ಗಮನಿಸಿದಾಗ ಇಂದು ದರ ಕೊಂಚ ಇಳಿಕೆ ಕಂಡಿದೆ. ನಿನ್ನೆ ದೈನಂದಿನ ದರ ಬದಲಾವಣೆಯಲ್ಲಿ  ದರ ಬೆಳ್ಳಿ ಏರಿಕೆ ಕಂಡಿತ್ತು. ಇಂದಿನ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

1 ಗ್ರಾಂ ಬೆಳ್ಳಿ ದರ ನಿನ್ನೆ 65.70 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 65.50 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 525.60 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 524 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 657 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 655 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,570 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 6,550 ರೂಪಾಯಿಗೆ ಮಾರಾಟವಾಗಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 65,700 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 65,500 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ಕೊಳ್ಳುವ ಆಸೆ ಇದ್ದರೆ.. ದರ ಹೀಗಿದೆ ಗಮನಿಸಿ!

Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ

Published On - 8:53 am, Wed, 31 March 21