AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಬಿಸಿಲು: ನಗರದಲ್ಲಿ 4 ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶ ದಾಖಲು

ಚೆನ್ನೈ ನಗರದ ಉಷ್ಣಾಂಶ ಬೆಂಗಳೂರಿಗಿಂತ ಕಡಿಮೆ ದಾಖಲಾಗಿದೆ. ನಿನ್ನೆ ಬೆಂಗಳೂರು 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿದ್ದರೆ, ಚೆನ್ನೈ ನಗರದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಂಗಳೂರು ಬಿಸಿಲು: ನಗರದಲ್ಲಿ 4 ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶ ದಾಖಲು
ಅಬ್ಬಬ್ಬಾ ಸುಡು ಬಿಸಿಲು..
TV9 Web
| Edited By: |

Updated on:Apr 05, 2022 | 12:57 PM

Share

ಬೆಂಗಳೂರು: ನಗರದಲ್ಲಿ ಕಳೆದ ಕೆಲವು ವರ್ಷಗಳಲ್ಲೇ ಅತ್ಯಧಿಕ ಉಷ್ಣಾಂಶ ನಿನ್ನೆ (ಏಪ್ರಿಲ್ 1) ದಾಖಲಾಗಿದೆ. ಗುರುವಾರ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 1996 ಮಾರ್ಚ್ 29ರಂದು ಸಾರ್ವಕಾಲಿಕ ಗರಿಷ್ಠ ತಾಪಮಾನ ಅಂದರೆ 37.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. 15 ವರ್ಷಗಳ ಬಳಿಕ, ನಿನ್ನೆ ಗರಿಷ್ಠ ಉಷ್ಣಾಂಶದ ಪ್ರಮಾಣಕ್ಕೆ 0.1 ಡಿಗ್ರಿ ಸೆಲ್ಸಿಯಸ್ ಅಂತರವಷ್ಟೇ ಉಳಿದಿತ್ತು.

ಚೆನ್ನೈ ಉಷ್ಣಾಂಶ ಮೀರಿಸಿತಾ ಬೆಂಗಳೂರು? ಹವಮಾನ ಇಲಾಖೆ ಸೂಚಿಸಿರುವಂತೆ ತಮಿಳುನಾಡಿನ ಚೆನ್ನೈ ನಿನ್ನೆ (ಏಪ್ರಿಲ್ 1) ಉಷ್ಣಗಾಳಿ ಹೊಡೆತಕ್ಕೆ ಸಿಲುಕಿದೆ. ಈ ಹವಾಮಾನ ಏಪ್ರಿಲ್ 5ರವರೆಗೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿನ ಹವಾಮಾನ ವರದಿ 39 ಡಿಗ್ರಿ ಸೆಲ್ಸಿಯಸ್​ನಷ್ಟು ಕಂಡುಬಂದಿದೆ. ಆದರೆ, ಚೆನ್ನೈ ನಗರದ ಉಷ್ಣಾಂಶ ಬೆಂಗಳೂರಿಗಿಂತ ಕಡಿಮೆ ದಾಖಲಾಗಿದೆ. ನಿನ್ನೆ ಬೆಂಗಳೂರು 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿದ್ದರೆ, ಚೆನ್ನೈ ನಗರದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಅಧಿಕ ಉಷ್ಣಾಂಶ ಮುಂದುವರಿಯುವ ಸಾಧ್ಯತೆ ಇದೆ ಬೆಂಗಳೂರಿನಲ್ಲಿ ಮಾರ್ಚ್​​ನಿಂದ ಮೇ ವರೆಗಿನ ಸಮಯವನ್ನು ಬೇಸಿಗೆಕಾಲ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ನಗರದ ಸರಾಸರಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್​ನಷ್ಟಿರುತ್ತದೆ. ಆದರೆ, ಈ ವರ್ಷ ಈ ಸರಾಸರಿಗಿಂತ ಹೆಚ್ಚಿನ ಉಷ್ಣಾಂಶ ಕಂಡುಬಂದಿದೆ. ಮಾರ್ಚ್ 1ರಿಂದ ನಗರದ ಉಷ್ಣತೆ ಅಧಿಕವಾಗುತ್ತಲೇ ಇದೆ. ಮುಂದಿನ ಎರಡು ವಾರಗಳ ಕಾಲ ಉಷ್ಣಾಂಶ ಕಡಿಮೆ ಆಗುವ ಸಂಭವವಿಲ್ಲ ಎಂದು ಹೇಳಲಾಗುತ್ತಿದೆ.

ಅತಿಯಾದ ಅಭಿವೃದ್ಧಿ ಕಾಮಗಾರಿಗಳಿಂದ, ಕಾಂಕ್ರೀಟ್ ರಸ್ತೆ, ಮರಗಳನ್ನು ಕಡಿಯುವುದರಿಂದ, ಪರಿಸರ ಮಾಲಿನ್ಯದಿಂದ ಉಷ್ಣಾಂಶ ಅಧಿಕವಾಗುತ್ತಲೇ ಇದೆ. ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ, ಭೂಮಿಗೆ ಹಾನಿಯಾಗುತ್ತಿರುವುದರಿಂದ ಹವಾಮಾನ ವೈಪರಿತ್ಯ ಎದುರಾಗುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಅತಿಯಾದ ಉಷ್ಣಾಂಶದಿಂದ ಬಳಲುತ್ತಿದ್ದರೆ, ಸಖೆಯಿಂದ ಪಾರಾಗಲು ಸುಲಭ ವಿಧಾನಗಳನ್ನು ಅನುಸರಿಸಬಹುದು. ಸಡಿಲವಾದ ಬಟ್ಟೆ ಧರಿಸುವುದು, ಸನ್​ಸ್ಕ್ರೀನ್​ಗಳನ್ನು ಬಳಸುವುದು, ಶುದ್ಧ ನೀರು ಕುಡಿಯುವುದು, ಅತಿಯಾದ ಬಿಸಿಲು ಪ್ರದೇಶದಲ್ಲಿ ಹೆಚ್ಚು ಹೊತ್ತು ನಿಲ್ಲದಿರುವುದು, ಸರಿಯಾದ ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು, ಮಕ್ಕಳನ್ನು ಆದಷ್ಟು ಜಾಗ್ರತೆಯಿಂದ ನೋಡಿಕೊಳ್ಳುವುದು  ಅತ್ಯಗತ್ಯ.

ಇದನ್ನೂ ಓದಿ: ಕೊರೊನಾ ತಡೆಗೆ ಹೊಸ ಮಾರ್ಗಸೂಚಿ: ಬಾರ್​, ರೆಸ್ಟೋರೆಂಟ್, ಜಿಮ್, ಸ್ವಿಮ್​ಗೆ ನಿರ್ಬಂಧ

Karnataka Covid-19 Update: ಕರ್ನಾಟಕದಲ್ಲಿ ಇಂದು ಹೊಸದಾಗಿ 4,991 ಜನರಿಗೆ ಕೊರೊನಾ ದೃಢ

(Bengaluru marks 37 2 degree Celsius on April 1 Records hottest day in 4 years)

Published On - 9:04 pm, Fri, 2 April 21