ಶ್ರೀನಗರ ಪಕ್ಕದ ಹನುಮಂತನಗರದಲ್ಲಿ ಬಾಂಬ್ ಪತ್ತೆ?

|

Updated on: Apr 30, 2020 | 3:05 PM

ಬೆಂಗಳೂರು: ಕೊರೊನಾ ಲಾಕ್​ಡೌನ್​ನ ಸಂದಿಗ್ಧ ಸಮಯದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ವಸ್ತು ಪತ್ತೆಯಾಗಿದೆ. ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿ‌ಯ ಕತ್ರಿಗುಪ್ಪೆ-ಅಶೋಕನಗರ ಜಂಕ್ಷನ್ ಬಳಿ ವಸ್ತು ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಅನುಮಾನಾಸ್ಪದ ವಸ್ತುವನ್ನು ಹನುಮಂತನಗರ ಬಳಿಯ ಕೆಂಪೇಗೌಡ ಮೈದಾನಕ್ಕೆ ಪೊಲೀಸರು ರವಾನಿಸಿದರು. ಬೆಳಗ್ಗೆ 10.30ರ ಸುಮಾರಿಗೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಬಾಕ್ಸ್​ನಲ್ಲಿ ಪಟಾಕಿಗಳು ತುಂಬಿರುವ ಶಂಕೆ ವ್ಯಕ್ತವಾಗಿತ್ತು. ಸಿಕ್ಕಿರುವ ವಸ್ತು ಕುರಿತು FSL ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ […]

ಶ್ರೀನಗರ ಪಕ್ಕದ ಹನುಮಂತನಗರದಲ್ಲಿ ಬಾಂಬ್ ಪತ್ತೆ?
Follow us on

ಬೆಂಗಳೂರು: ಕೊರೊನಾ ಲಾಕ್​ಡೌನ್​ನ ಸಂದಿಗ್ಧ ಸಮಯದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ವಸ್ತು ಪತ್ತೆಯಾಗಿದೆ. ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿ‌ಯ ಕತ್ರಿಗುಪ್ಪೆ-ಅಶೋಕನಗರ ಜಂಕ್ಷನ್ ಬಳಿ ವಸ್ತು ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಅನುಮಾನಾಸ್ಪದ ವಸ್ತುವನ್ನು ಹನುಮಂತನಗರ ಬಳಿಯ ಕೆಂಪೇಗೌಡ ಮೈದಾನಕ್ಕೆ ಪೊಲೀಸರು ರವಾನಿಸಿದರು.

ಬೆಳಗ್ಗೆ 10.30ರ ಸುಮಾರಿಗೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಬಾಕ್ಸ್​ನಲ್ಲಿ ಪಟಾಕಿಗಳು ತುಂಬಿರುವ ಶಂಕೆ ವ್ಯಕ್ತವಾಗಿತ್ತು. ಸಿಕ್ಕಿರುವ ವಸ್ತು ಕುರಿತು FSL ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಐಸ್ ಕ್ರೀಂ ಡಬ್ಬಿಯಲ್ಲಿ ಪೊಟ್ಯಾಷಿಯಂ ನೈಟ್ರೇಟ್:
ಐಸ್ ಕ್ರೀಂ ಡಬ್ಬಿಯಲ್ಲಿ ಪೊಟ್ಯಾಷಿಯಂ ನೈಟ್ರೇಟ್ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಫೋಟಕ ಮಾದರಿ ವಸ್ತು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಆ ವಸ್ತುವನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿದೆ ಎಂದು ಟಿವಿ9ಗೆ ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ‌ ಪಟಾಕಿ ತುಂಬಿದ ಪೊಟ್ಟಣ ಎಂದು ಭಾವಿಸಲಾಗಿತ್ತು. ಆದರೂ ಮುನ್ನೆಚ್ಚರಿಕೆಯಿಂದ ಕೆಂಪೇಗೌಡ ಕ್ರೀಡಾಂಗಣಕ್ಕೆ ರವಾನೆ‌. ಮರಳು ಚೀಲದಿಂದ ಸುತ್ತುವರಿದು ಮೈದಾನದಲ್ಲಿ‌ ಇರಿಸಲಾಗಿತ್ತು. ಬಳಿಕ‌ FSL ತಂಡದಿಂದ ಪರಿಶೀಲನೆ ನಡೆಸಿ ಸ್ಫೋಟಕವನ್ನ ನಿಷ್ಕ್ರಿಯಗೊಳಿಸಲಾಗಿದೆ.

Published On - 3:00 pm, Thu, 30 April 20