
ಹಾವೇರಿ: ನಿಗಿನಿಗಿ ಅನ್ನುತ್ತಿದ್ದ ಅಗ್ನಿಕೊಂಡದಲ್ಲಿ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಬುಳ್ಳಾಪುರದ ಬಸವರಾಜಪ್ಪ ಸ್ವಾಮೀಜಿ ಕೊಂಡ ಹಾಯ್ದುಹೋಗಿದ್ದಾರೆ.
ಸ್ವಲ್ಪ ಯಾಮಾರಿದ್ರೂ ಹಾರಿ ಹೋಗ್ತಿತ್ತು ಮಗುವಿನ ಪ್ರಾಣಪಕ್ಷಿ
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರದಲ್ಲಿ ಈ ಘಟನೆ ನಡೆದಿದೆ. ಪ್ರತಿವರ್ಷ ದಸರಾ ಮಹೋತ್ಸವ ಪ್ರಯುಕ್ತ ನಡೆಯೋ ದುರ್ಗಾದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವ ಆಚರಣೆ ಮಾಡಲಾಗುತ್ತದೆ. ಸ್ವಾಮೀಜಿ ಮಗು ಎತ್ತಿಕೊಂಡು ಹೋಗುವ ದೃಶ್ಯ ಇದೀಗ ವೈರಲ್ ಆಗಿದೆ. ಬಸವರಾಜಪ್ಪ ಸ್ವಾಮೀಜಿ ಸ್ವಲ್ಪವೇ ಯಾಮಾರಿದ್ರೂ ಮಗುವಿನ ಪ್ರಾಣಪಕ್ಷಿ ಹಾರಿ ಹೋಗ್ತಿತ್ತು ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.
Published On - 5:03 pm, Tue, 27 October 20