ಮೈಸೂರು: ಯುವನೊಬ್ಬನಿಂದ ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಇರಿತಕ್ಕೊಳಗಾಗಿದ್ದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸದ್ಯಕ್ಕೆ ಔಟ್ ಆಫ್ ಡೇಂಜರ್. ಇಂದು ಹಾಸಿಗೆಯಿಂದ ಎದ್ದು, ಕುರ್ಚಿಯಲ್ಲಿ ಕೂತಿದ್ದಾರೆ. ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಇನ್ಯಾವುದೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ. ಮುಂದೆ ಅವರು ಹೇಗೆ ಸ್ಪಂದಿಸುತ್ತಾರೆ ಅಂತಾ ನೋಡಿಕೊಂಡು ಒಂದೆರಡು ದಿನದಲ್ಲಿ ಐಸಿಯುನಿಂದ ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಇಂದಿನ ಸ್ಥಿತಿಯಲ್ಲಿ ಇನ್ನು ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲಿ ಇರುತ್ತಾರೆ. ಸದ್ಯ ಅವರಿಗೆ […]
Follow us on
ಮೈಸೂರು: ಯುವನೊಬ್ಬನಿಂದ ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಇರಿತಕ್ಕೊಳಗಾಗಿದ್ದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸದ್ಯಕ್ಕೆ ಔಟ್ ಆಫ್ ಡೇಂಜರ್. ಇಂದು ಹಾಸಿಗೆಯಿಂದ ಎದ್ದು, ಕುರ್ಚಿಯಲ್ಲಿ ಕೂತಿದ್ದಾರೆ. ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯಕ್ಕೆ ಇನ್ಯಾವುದೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ. ಮುಂದೆ ಅವರು ಹೇಗೆ ಸ್ಪಂದಿಸುತ್ತಾರೆ ಅಂತಾ ನೋಡಿಕೊಂಡು ಒಂದೆರಡು ದಿನದಲ್ಲಿ ಐಸಿಯುನಿಂದ ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಇಂದಿನ ಸ್ಥಿತಿಯಲ್ಲಿ ಇನ್ನು ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲಿ ಇರುತ್ತಾರೆ. ಸದ್ಯ ಅವರಿಗೆ ನಾರ್ಮಲ್ ಫುಡ್ ಕೊಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಉಪೇಂದ್ರ ಶೆಣೈ ಹೇಳಿದ್ದಾರೆ.
ಯುವಕ ಬೀಸಿದ ಮಚ್ಚು ಸೇಠ್ ಅವ್ರ ಕುತ್ತಿಗೆಯಲ್ಲಿ ಬಹು ಆಳದ ವರೆಗೂ ಹೋಗಿದೆ. ಅದನ್ನು ನೋಡಿಯೆ ನಮಗೆ ಆತಂಕ ಹೆಚ್ಚಾಗಿತ್ತು. ಈಗ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಅವರ ಕಿವಿಯ ಕೆಳಭಾಗವು ತುಂಡಾಗಿತ್ತು. ಅದಕ್ಕೆ ಹೊಲಿಗೆ ಹಾಕಿ ಜೋಡಿಸಿದ್ದೇವೆ ಎಂದು ವೈದ್ಯರು ವಿವರಿಸಿದ್ದಾರೆ.