ಅಕ್ರಮವಾಗಿ ಬೆಂಗಾವಲು ವಾಹನ, ಗನ್ ಮ್ಯಾನ್ ಪಡೆದ್ರಾ ಎಂಟಿಬಿ?
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಉಪಚುನಾವಣಾ ಕಣ ರಂಗೇರಿದ್ದು, ನೀತಿ ಸಂಹಿತಿ ಉಲ್ಲಂಘನೆ ಆರೋಪ ಸಂಬಂಧ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಎಂಟಿಬಿ ನಾಗರಾಜ್ ಎದುರಾಳಿ ಶರತ್ ಬಚ್ಚೇಗೌಡ ಬೆಂಬಲಿತ ಮುಖಂಡರಾದ ತಿಮ್ಮೇಗೌಡ ಮತ್ತು ಸುಬ್ಬಣ್ಣ ಎಂಬುವವರು ದೂರು ನೀಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಆರೋಪ: ನೀತಿ ಸಂಹಿತೆ ಉಲ್ಲಂಘಿಸಿ ಎಂಟಿಬಿ ನಾಗರಾಜ್ ಬೆಂಗಾವಲು ವಾಹನ ಮತ್ತು ಗನ್ ಮ್ಯಾನ್ಗಳನ್ನ ಪಡೆದ ಆರೋಪವಿದೆ. ಅಲ್ಲದೆ ಚುನಾವಣಾ ಅಧಿಕಾರಿಗಳ ಕಚೇರಿಯ 200 ಮೀಟರ್ […]
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಉಪಚುನಾವಣಾ ಕಣ ರಂಗೇರಿದ್ದು, ನೀತಿ ಸಂಹಿತಿ ಉಲ್ಲಂಘನೆ ಆರೋಪ ಸಂಬಂಧ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಎಂಟಿಬಿ ನಾಗರಾಜ್ ಎದುರಾಳಿ ಶರತ್ ಬಚ್ಚೇಗೌಡ ಬೆಂಬಲಿತ ಮುಖಂಡರಾದ ತಿಮ್ಮೇಗೌಡ ಮತ್ತು ಸುಬ್ಬಣ್ಣ ಎಂಬುವವರು ದೂರು ನೀಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪ: ನೀತಿ ಸಂಹಿತೆ ಉಲ್ಲಂಘಿಸಿ ಎಂಟಿಬಿ ನಾಗರಾಜ್ ಬೆಂಗಾವಲು ವಾಹನ ಮತ್ತು ಗನ್ ಮ್ಯಾನ್ಗಳನ್ನ ಪಡೆದ ಆರೋಪವಿದೆ. ಅಲ್ಲದೆ ಚುನಾವಣಾ ಅಧಿಕಾರಿಗಳ ಕಚೇರಿಯ 200 ಮೀಟರ್ ಅಂತರದಲ್ಲಿ ಯಾರೂ ಪ್ರಚಾರ ಮಾಡಬಾರದೆಂಬ ನಿಯಮವಿದೆ. ಆದ್ರೂ ನಿಯಮ ಮೀರಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಚುನಾವಣಾಧಿಕರಿಗಳ ಕಚೇರಿ ಸಮೀಪವೇ ಭಾಷಣ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.