Karnataka Unlock: ಜೂನ್ 14ರ ನಂತರ ಅನ್​ಲಾಕ್​ಗೆ ಇವತ್ತೇ ಮುಹೂರ್ತ ಫಿಕ್ಸ್? ತಜ್ಞರ ಜೊತೆ ಮಹತ್ವದ ಮೀಟಿಂಗ್

| Updated By: Digi Tech Desk

Updated on: Jun 07, 2021 | 8:59 AM

Karnataka Covid Unlock: ಕೊರೊನಾ ಕರುನಾಡ ಮಂದಿಯನ್ನ ಇನ್ನಿಲ್ಲದೇ ಕಾಡ್ತಿದೆ. ಸಧ್ಯ ಆರ್ಭಟ ಸ್ವಲ್ಪ ಕಡಿಮೆಯಾಗಿರೋದು ಸ್ವಲ್ಪ ನಿಟ್ಟುಸಿರುಬಿಡುವಂತೆ ಮಾಡಿದೆ. ಹೀಗಾಗಿ ಇವತ್ತು ತಜ್ಞರ ಜೊತೆ ಮಹತ್ವದ ಸಭೆ ನಡೆಯಲಿದ್ದು, ಲಾಕ್ ಡೌನ್ ಗೆ ತೆರೆ ಎಳೆಯೋಕೆ ಫೈನಲ್ ಡಿಸಿಶನ್ ಆಗೋ ಸಾಧ್ಯತೆ ಇದೆ.

Karnataka Unlock: ಜೂನ್ 14ರ ನಂತರ ಅನ್​ಲಾಕ್​ಗೆ ಇವತ್ತೇ ಮುಹೂರ್ತ ಫಿಕ್ಸ್? ತಜ್ಞರ ಜೊತೆ ಮಹತ್ವದ ಮೀಟಿಂಗ್
ಬಿ.ಎಸ್​. ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಲಾಕ್.. ಲಾಕ್.. ಲಾಕ್.. ಕೊರೊನಾ ಮಹಾಮಾರಿ ಕಟ್ಟಿ ಹಾಕಲು ವಿಧಿಸಲಾಗಿರೋ ಸೆಕೆಂಡ್ ರೌಂಡ್ ಲಾಕ್ಡೌನ್ ಇಂದಿಗೆ ಮುಗಿಯಲಿದೆ. ಆದ್ರೆ ಇವತ್ತಿನಿಂದ ಇನ್ನೂ ಒಂದು ವಾರ ಕರುನಾಡು ಕಂಪ್ಲೀಟ್ ಲಾಕ್ ಆಗೇ ಇರಲಿದೆ. ಹಿಂದಿನ ಗೈಡ್ಲೈನ್ಸ್ ಪ್ರಕಾರವೇ ಜೂನ್ 14ರವರೆಗೂ ಜನ ಮನೆಯಲ್ಲೇ ಲಾಕ್ ಆಗಿರ್ಬೇಕಾಗುತ್ತೆ. ಆದ್ರೆ ಜೂನ್ 14 ರ ಬಳಿಕ ರಾಜ್ಯ ಅನ್ಲಾಕ್ ಆಗುತ್ತಾ ಅಥವಾ ಮುಂದುವರಿಯುತ್ತಾ ಅನ್ನೋ ಕುತೂಹಲ ಈಗ ಜನರಿಗೆ ಉಳಿದಿದೆ.

ಇವತ್ತಿನಿಂದ ಮತ್ತೊಂದು ಸುತ್ತಿನ ಒಂದು ವಾರದ ಲಾಕ್ ಡೌನ್ ಶುರುವಾಗಲಿದೆ. ಆದ್ರೆ ಜೂನ್ 14 ರವರೆಗೂ ವಿಸ್ತರಣೆಯಾಗಿರೋ ಈ ಲಾಕ್ಡೌನ್ಗೆ ತೆರೆ ಎಳೆಯೋ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ. ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಜನ ಗೃಹ ಬಂಧನದಿಂದ ಹೊರ ಬರೋಕೆ ಮುಹೂರ್ತ ಫಿಕ್ಸ್ ಆಗೋ ಸಮಯ ಹತ್ತಿರವಾಗಿದೆ ಅಂತಾ ಹೇಳಲಾಗ್ತಿದೆ. ಪಾಸಿಟಿವಿಟಿ ರೇಟ್ ಶೇಕಡಾ 5 ರೊಳಗೆ ಬಂದ್ರೆ ಲಾಕ್ಡೌನ್ ತೆರುವು ಮಾಡ್ತೀವಿ ಅಂತಾ ಸಿಎಂ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಸದ್ಯ ಪಾಸಿಟಿವಿಟಿ ರೇಟ್ ಕಡಿಮೆಯಾಗ್ತಿದ್ದು ಇನ್ನೊಂದು ವಾರದೊಳಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದನ್ನಾಧರಿಸಿ ಇವತ್ತು ಡಿಸಿಎಂ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಮಧ್ಯಾಹ್ನ ವಿಧಾನ ಸೌಧದಲ್ಲಿ ತಜ್ಞರ ಜೊತೆ ಟಾಸ್ಕ್ಫೋರ್ಸ್ನ ಮಹತ್ವದ ಸಭೆ ನಡೆಯಲಿದೆ.

ಅನ್ಲಾಕ್ ಪ್ಲ್ಯಾನ್ ಏನು?
ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡೋಕೆ ತಜ್ಞರು ಗ್ರೀನ್ ಸಿಗ್ನಲ್ ಕೊಡೋ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ಫಿಫ್ಟಿ-ಫಿಫ್ಟಿ ನಿಯಮಾನುಸಾರ ಕೆಲವೊಂದು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ಈ ಬಗ್ಗೆ ಟಾಸ್ಕ್ಫೋರ್ಸ್ ಸದಸ್ಯರು ನೀಡೋ ವರದಿ, ಸಲಹೆ ಆಧಾರದ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಇನ್ನು ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಹಾಲ್ಸ್, ಜಿಮ್, ಸ್ವಿಮ್ಮಿಂಗ್ ಪೂಲ್ ಹೊರತುಪಡಿಸಿ ಕೆಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಬಸ್ ಸಂಚಾರ, ಓಲಾ, ಉಬರ್ ಹಾಗೂ ಆಟೋಗಳ ಸೇವೆ ಜೊತೆಗೆ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆದ್ರೆ ಹೆಚ್ಚು ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಇನ್ನೊಂದಿಷ್ಟು ದಿನ ಲಾಕ್ಡೌನ್ ಮುಂದುವರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಹೀಗಾಗಿ ಇವತ್ತು ಟಾಸ್ಕ್ಫೋರ್ಸ್ ಸದಸ್ಯರ ಜೊತೆ ಡಿಸಿಎಂ ಅಶ್ವತ್ಥ್ ನಾರಾಯಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಡೆಸುವ ಸಭೆ ಭಾರಿ ಕುತೂಹಲ ಮೂಡಿಸಿದೆ. ಒಟ್ನಲ್ಲಿ ಲಾಕ್ಡೌನ್ ತೆರವುಗೊಳಿಸಲು ಸಿಎಂ ಕೂಡ ಒಲುವು ತೋರುತ್ತಿದ್ದಾರೆ. ಆದ್ರೆ ತಜ್ಞರು ನೀಡುವ ಸಲಹೆಗಳ ಆಧಾರದ ಮೇಲೆ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ ಇವತ್ತು ನಡೆಯೋ ತಜ್ಞರ ಜೊತೆಗಿನ ಸಭೆಯ ಕುರಿತು ತೀವ್ರ ಕುತೂಹಲ ಮೂಡಿಸಿದೆ. ಜೂನ್ 14ರ ಬಳಿಕ ರಾಜ್ಯದ ಜನರಿಗೆ ಮನೆವಾಸದಿಂದ ಮುಕ್ತಿ ಸಿಗುತ್ತಾ ಇಲ್ವಾ ಅನ್ನೋದು ಇಂದಿನ ಟಾಸ್ಕ್ಫೋರ್ಸ್ ಸಭೆ ಬಳಿಕ ತೀರ್ಮಾನವಾಗಲಿದೆ.

ಇದನ್ನೂ ಓದಿ: ಕೊರೊನಾ ನಿಯಂತ್ರಣ: ರಾಜ್ಯ ಸರ್ಕಾರದಿಂದ ಅನ್‌ಲಾಕ್‌-6 ಮಾರ್ಗಸೂಚಿ ಬಿಡುಗಡೆ

Published On - 7:07 am, Mon, 7 June 21