ಬೆಂಗಳೂರು: ತೌಕ್ತೆ ಚಂಡಮಾರುತದ ಅಬ್ಬರ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆಯಿದೆ. ವಿಪತ್ತು ನಿರ್ವಹಣಾ ತಂಡದವರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜನ ಸದ್ಯ ಎಸ್ಡಿಆರ್ಎಫ್ ತಂಡದಲ್ಲಿ 434 ಸದಸ್ಯರಿದ್ದು, ಕೆಲವು ತಂಡವನ್ನು ಉಡುಪಿ ಜಿಲ್ಲೆಗೆ ಕಳುಹಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಚಂಡಮಾರುತ ಅಪ್ಪಳಿಸಿದಾಗ ಜನರಿಗೆ ಎಚ್ಚರಿಸುವ ಆಧುನಿಕ ಸೈರನ್ ವ್ಯವಸ್ಥೆಯನ್ನು ರೂಪಿಸಲಾಗಿದೆ. ವಿಪತ್ತು ಸೃಷ್ಟಿಯಾದರೆ ಎದುರಿಸಲು ಬಸ್, ಲಾರಿ, ಜೀಪ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು 15 ಕೋಟಿ ವೆಚ್ಚದಲ್ಲಿ ಈಗಾಗಲೇ ಸಿದ್ಧಮಾಡಿಕೊಂಡಿದ್ದೇವೆ. ಬೆಂಗಳೂರು ಮತ್ತು ಕಲಬುರಗಿಯ ಎಸ್ಡಿಆರ್ಎಫ್ ತಂಡಗಳನ್ನು ಉಡುಪಿಗೆ ಕಳುಹಿಸುತ್ತಿದ್ದೇವೆ. ಅಗ್ನಿಶಾಮಕ, ಪೊಲೀಸ್, ಕೋಸ್ಟಲ್ ಗಾರ್ಡ್ ಸೇರಿ ೧ ಸಾವಿರ ಸಿಬ್ಬಂದಿ ಇದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್. ಅಶೋಕ್ , ತೌಖ್ತೆ ಚಂಡಮಾರುತ ಈಗ ಲಕ್ಷದ್ವೀಪದಲ್ಲಿ ಕೇಂದ್ರೀಕೃತವಾಗಿದ್ದು, ಕರ್ನಾಟಕದತ್ತ ಬರುತ್ತಿದೆ. ಇಂದು ರಾತ್ರಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗೆ ತಲುಪಲಿದೆ. ಮೇ 17 ರವರೆಗೆ ಇರಲಿದೆ ಎಂಬ ಮಾಹಿತಿ ಇದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ. ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. 10 ಸಾವಿರ ಜನರನ್ನು ಸುರಕ್ಷತಾ ಕ್ಯಾಂಪ್ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಆಹಾರ, ವಸ್ತು ಶೇಖರಣೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Cyclone Tauktae: ತೌಕ್ತೆ ಚಂಡಮಾರುತ್ತಕ್ಕೆ ನಲಗಿದ ಕರ್ನಾಟಕ; ಮಂಗಳೂರು, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಹೆಚ್ಚಿದ ಆತಂಕ
(Tauktae Cyclone can be impact on Hassan, Chikmagalur and Kodagu warns Karnataka HM Basavaraj Bommai)